Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಆಯುಷ್ ಹುದ್ದೆಗಳಿಗೆ ಮುಸ್ಲಿಮರ...

ಆಯುಷ್ ಹುದ್ದೆಗಳಿಗೆ ಮುಸ್ಲಿಮರ ನೇಮಕವಿಲ್ಲ!

ಮೋದಿ ಸರಕಾರದ ಆಘಾತಕಾರಿ ಹೇಳಿಕೆ

ವಾರ್ತಾಭಾರತಿವಾರ್ತಾಭಾರತಿ11 March 2016 10:51 PM IST
share
ಆಯುಷ್ ಹುದ್ದೆಗಳಿಗೆ ಮುಸ್ಲಿಮರ ನೇಮಕವಿಲ್ಲ!

ಹೊಸದಿಲ್ಲಿ,ಮಾ.11: ಮೋದಿ ಸರಕಾರದ ಆಯುಷ್ ಸಚಿವಾಲಯವು ತನ್ನ ಹುದ್ದೆಗಳಿಗೆ ಮುಸ್ಲಿಮರನ್ನು ನೇಮಕಗೊಳಿಸುವುದಿಲ್ಲವೆಂಬ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದೆ.ಅಷ್ಟೇ ಅಲ್ಲದೆ ಇದು ಸರಕಾರದ ನೀತಿಯಾಗಿದೆಯೆಂದು ಹೇಳುವ ಮೂಲಕ ದೇಶದ ಜಾತ್ಯತೀತ ಸ್ವರೂಪಕ್ಕೆ ಕೊಡಲಿಯೇಟು ನೀಡಿದೆ. ಕಳೆದ ವರ್ಷ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಆಯುಷ್ ಸಚಿವಾಲಯವು ವಿದೇಶಗಳಲ್ಲಿ ನಿಯೋಜಿಸಿದ ಮುಸ್ಲಿಂ ಯೋಗ ಶಿಕ್ಷಕರು ಹಾಗೂ ತರಬೇತುದಾರರ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಅದು ಹೀಗೆ ಉತ್ತರಿಸಿದೆ. ಆಯುರ್ವೇದ, ಯೋಗ, ನ್ಯಾಚುರೋಪಥಿ, ಯುನಾನಿ, ಸಿದ್ಧ ಹಾಗೂ ಹೊಮಿಯೋಪಥಿಗೆ ಸಂಬಂಧಿಸಿದ ವ್ಯವಹಾರಗಳನ್ನು ಆಯುಷ್ ಸಚಿವಾಲಯ ನಿರ್ವಹಿಸುತ್ತಿದೆ.
ಖ್ಯಾತ ಪತ್ರಕರ್ತ ಪುಷ್ಪ್ ಶರ್ಮಾ ಅವರು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಯಡಿ ಸಲ್ಲಿಸಿದ ಅರ್ಜಿಯಲ್ಲಿ ಆಯುಷ್ ಇಲಾಖೆಯು ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ವಿದೇಶದಲ್ಲಿ ನಿಯೋಜಿಸಿದ ಮುಸ್ಲಿಮ್ ಯೋಗ ತರಬೇತುದಾರರ ವಿವರಗಳನ್ನು ಕೋರಿದ್ದರು.
 ಪುಷ್ಪ್ ಶರ್ಮಾ ಅವರ ವರದಿಯು ಮಿಲ್ಲಿ ಗೆಜೆಟ್‌ನ ಮುಂದಿನ ಸಂಚಿಕೆಯಲ್ಲಿ ಪ್ರಕಟವಾಗಲಿದೆ.

711 ಮಂದಿ ಮುಸ್ಲಿಮ್ ಯೋಗ ತರಬೇತುದಾರರು ವಿದೇಶದಲ್ಲಿ ಅಲ್ಪಾವಧಿಯ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಅವರಲ್ಲಿ ಯಾರನ್ನೂ ಕೂಡಾ ನೇಮಕಾತಿ ಸಂದರ್ಶನಕ್ಕೆ ಆಹ್ವಾನಿಸಲಾಗಿರಲಿಲ್ಲ. ವಿದೇಶಕ್ಕೆ ಕಳುಹಿಸಲಾದ ಎಲ್ಲ 26 ಮಂದಿ ಯೋಗತರಬೇತುದಾರರು ಹಿಂದೂಗಳೆಂದು ಸಚಿವಾಲಯವು ತಿಳಿಸಿದೆ.

2015ರ ಅಕ್ಟೋಬರ್‌ವರೆಗೆ 3,841 ಮಂದಿ ಮುಸ್ಲಿಮರು ಯೋಗತರಬೇತುದಾರ/ಶಿಕ್ಷಕ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಅವರಲ್ಲಿ ಯಾರನ್ನೂ ಕೂಡಾ ಆಯ್ಕೆ ಮಾಡಿಲ್ಲವೆಂದು ಆಯುಷ್ ತಿಳಿಸಿದೆ.

 ಮುಸ್ಲಿಮ್ ಯೋಗ ಶಿಕ್ಷಕರ ಅರ್ಜಿಯನ್ನು ತಿರಸ್ಕರಿಸಿದ್ದಕ್ಕೆ ಆಯುಷ್ ಸಚಿವಾಲಯ ಕಾರಣವೂ ಅಸಂಬದ್ಧವಾಗಿದೆ. ‘‘ಸರಕಾರದ ನೀತಿಯ ಪ್ರಕಾರ, ಯಾವುದೇ ಮುಸ್ಲಿಮ್ ಅಭ್ಯರ್ಥಿಯನ್ನು ಆಹ್ವಾನಿಸಲಾಗಿಲ್ಲ, ಆಯ್ಕೆ ಮಾಡಲಾಗಿಲ್ಲ ಅಥವಾ ವಿದೇಶಕ್ಕೆ ಕಳುಹಿಸಲಾಗಿಲ್ಲ’’ ಎಂದು ಅದು ಹೇಳಿದೆ. ಭಾರತದೊಳಗೂ ಆಯುಷ್ ಸಚಿವಾಲಯವು ಯೋಗ ತರಬೇತಿದಾರ/ಶಿಕ್ಷಕ ಹುದ್ದೆಗಳಿಗೆ ಮುಸ್ಲಿಮರನ್ನು ಆಯ್ಕೆ ಮಾಡಿಲ್ಲವೆಂಬುದು ಈ ಆರ್‌ಟಿಐ ಉತ್ತರದಿಂದ ಸ್ಪಷ್ಟವಾಗಿದೆ.

ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಘೋಷಣೆ ಕೂಗುವ ಸರಕಾರದ ಆಡಳಿತದಲ್ಲಿ ಇಂತಹ ಶೋಚನೀಯ ಪರಿಸ್ಥಿತಿಯಿದೆಯೆಂದು ಶರ್ಮಾ ಆಘಾತ ವ್ಯಕ್ತಪಡಿಸಿದ್ದಾರೆ.

 ಮೋದಿ ಸರಕಾರದ ಕೋಮುವಾದಿ ಕಾರ್ಯಸೂಚಿಯು ದೇಶದಲ್ಲಿ ಕೋಮುದ್ವೇಷವನ್ನು ಅಸಾಧಾರಣ ಮಟ್ಟಕ್ಕೆ ಒಯ್ದಿದೆ. ಸರಕಾರಿ ಕಾರಿಡಾರ್‌ಗಳಲ್ಲಿಯೂ ಕೋಮುವಾದ ತಲೆಯೆತ್ತಿದೆ. ಸರಕಾರದ ಹುದ್ದೆಗಳಲ್ಲಿ ಮುಸ್ಲಿಮರನ್ನು ನೇಮಕಗೊಳಿಸದೆ ಇರುವುದು ತನ್ನ ನೀತಿಯೆಂದು ಮೋದಿ ಸರಕಾರವು ಲಜ್ಜೆಗೆಟ್ಟು ಹೇಳುತ್ತಿದೆ. ಆರ್‌ಟಿಐ ಅರ್ಜಿಯಡಿ ದೊರೆತ ಉತ್ತರವು ಒಂದು ಸಣ್ಣ ಸಚಿವಾಲಯದ ನಿರ್ದಿಷ್ಟ ಯೋಜನೆಗೆ ಸಂಬಂಧಿಸಿದ್ದಾಗಿದೆ. ಆದರೆ ಈ ನೀತಿಯಿಂದ ಇಡೀ ಸರಕಾರದ ಮೇಲೆ ವ್ಯಾಪಕ ಪರಿಣಾಮ ಉಂಟಾಗುವ ಸಾಧ್ಯತೆಯೂ ಇದೆಯೆಂದು ಪುಷ್ಪ ಶರ್ಮಾ ಅಭಿಪ್ರಾಯಿಸುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X