ಭಾರೀ ಪ್ರಮಾಣದ ಸಾರಾಯಿ ವಶ
ಕಾಸರಗೋಡು, ಮಾ.11: ಅಡೂರು ಮಣಿಯೂರು ಚರ್ಲಕೈ ಎಂಬಲ್ಲಿ ಅಬಕಾರಿದಳ ನಡೆಸಿದ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಹುಳಿರಸ ಹಾಗೂ ಸಾರಾಯಿ ವಶಪಡಿಸಿ ಓರ್ವನನ್ನು ಬಂಧಿಸಿದ್ದಾರೆ. ಚರ್ಲಕೈಯ ನಾರ್ಣು ನಾಯ್ಕ (45) ಎಂಬಾತನನ್ನು ಬಂಧಿಸಲಾಗಿದೆ. ಈತನ ಮನೆ ಬಳಿ ಬಚ್ಚಿಡಲಾಗಿದ್ದ 30 ಲೀ. ಸಾರಾಯಿ, 700 ಲೀ. ಹುಳಿ ರಸ ಹಾಗೂ ಇತರ ಪರಿಕರಗಳನ್ನು ವಶಪ ಡಿಸಲಾಗಿದೆ. ಮನೆ ಅಡುಗೆ ಕೋಣೆ ಬಳಿ ಶೆಡ್ ನಿರ್ಮಿಸಿ ಅದರಲ್ಲಿ ಮದ್ಯ ತಯಾರಿಸಲಾಗುತ್ತಿತ್ತು.
ಅಬಕಾರಿ ಇಲಾಖೆಗೆ ಲಭಿಸಿದ ಖಚಿತ ಮಾಹಿತಿಯಂತೆ ಬದಿಯಡ್ಕ ವಲಯ ಅಧಿಕಾರಿ ವಿ.ವಿ. ಪ್ರಸನ್ನ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಕಾರ್ಯಾಚರಣೆಯಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್ ಎಂ.ಕೆ. ರವಿಚಂದ್ರನ್, ಚಾಲಕ ಕೆ. ಕುಂಞಿರಾಮನ್ ಮೊದಲಾದವರು ಭಾಗವಹಿಸಿದ್ದರು.
Next Story





