ಕೈಬರಹದಲ್ಲಿ 9/11 ನೀಡಲು ಸೂಚನೆ
ಮಂಗಳೂರು, ಮಾ.11: ಕರ್ನಾಟಕ ಪಂಚಾಯತ್‌ರಾಜ್ (ಗ್ರಾಪಂಗಳ ಆಯವ್ಯಯ ಮತ್ತು ಲೆಕ್ಕ ಪತ್ರಗಳು) ನಿಯಮಗಳ ಅನ್ವಯ ಉತ್ತರ ಕನ್ನಡ, ದ.ಕ., ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಿಗೆ ಇ-ಸ್ವತ್ತು ತಂತ್ರಾಂಶದಿಂದ ತಾತ್ಕಾಲಿಕವಾಗಿ ಮತ್ತು ಮುಂದಿನ ಆದೇಶದವರೆಗೆ ವಿನಾಯಿತಿ ನೀಡಲಾಗಿರುತ್ತದೆ. ಗ್ರಾಪಂ ಮಟ್ಟದಲ್ಲಿ ನಮೂನೆ 9, ನಮೂನೆ 11ಎ ಮತ್ತು ನಮೂನೆ 11ಬಿ ನೀಡುವ ಸಂದರ್ಭ ನಿಯಮಾನುಸಾರ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಈ ಹಿಂದಿನಂತೆ ಕೈಬರಹದ ಮೂಲಕ (ಮ್ಯಾನುವೆಲ್) ನೀಡುವಂತೆ ಪ್ರಕಟನೆ ತಿಳಿಸಿದೆ.
Next Story





