'ಹರ್ಷೋತ್ಸವ’: ಕೊನೆಯ 2 ದಿನಗಳು ಮಾತ್ರ

ಗ್ರಾಹಕರಿಗೆಂದೇ ರೂಪಿಸಿದ ವಿಶೇಷ ಹಬ್ಬ
ಮಂಗಳೂರು, ಮಾ.11: ಅತ್ಯುತ್ತಮ ಶಾಪಿಂಗ್ ಸೌಲಭ್ಯಗಳು, ಒಂದೇ ಸೂರಿ ನಡಿ ಉತ್ಕೃಷ್ಟ ಬ್ರಾಂಡ್‌ಗಳ ವಸ್ತು ವೈವಿಧ್ಯಗಳು, ಇವುಗಳ ನಿರಂತರ ಪೂರೈಕೆಯ ಬದ್ಧತೆಯೊಂದಿಗೆ ಮಾ. 9, 1987ರಂದು ಉಡುಪಿಯಲ್ಲಿ ಪ್ರಾರಂಭ ಗೊಂಡ ‘ಹರ್ಷ’, ಗೃಹೋಪಕರಣಗಳ ಮಾರಾಟ ಮತ್ತು ಸೇವೆಯಲ್ಲಿ ಸುಪ್ರ ಸಿದ್ಧ ಮಳಿಗೆಯಾಗಿ ರಾಜ್ಯದಲ್ಲೇ ಮನೆಮಾತಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಅತ್ಯಾ ಧುನಿಕ ಶಾಪಿಂಗ್‌ನ ವಿನೂತನ ಅನುಭವವನ್ನು ನೀಡಲೆಂದೇ ಕಣ್ಮನ ಸೆಳೆಯುವ ‘ಹರ್ಷ’ದ ಹೊಸ, ಬೃಹತ್ ಮಳಿಗೆ ಮಂಗಳೂರು ಹಾಗೂ ಉಡುಪಿಯಲ್ಲಿ ರೂಪುಗೊಂಡಿದೆ. ಪ್ರತೀ ಬಾರಿ ಗ್ರಾಹಕರೆಲ್ಲರೂ ಸಡಗರದಿಂದ ಆಚರಿಸುವ ‘ಹರ್ಷೋತ್ಸವ’ ಕೊನೆಯ 2 ದಿನಗಳು ಮಾತ್ರ ಉಳಿದಿದೆ. ‘ಹರ್ಷೋತ್ಸವ’ ಈ ಬಾರಿ ಮಾ.7 ರಿಂದ 13ರವರೆಗೆ ಉಡುಪಿಯ ಎರಡು, ಮಂಗಳೂರಿನ ಎರಡು, ಪುತ್ತೂು, ಕುಂದಾಪುರ ಹಾಗೂ ಶಿವಮೊಗ್ಗ ಮಳಿಗೆಗಳಲ್ಲಿ ನಡೆಯುತ್ತಿದೆ.
ಜಗತ್ಪ್ರಸಿದ್ಧ ಬ್ರಾಂಡ್‌ಗಳಾದ ಗೋದ್ರೇಜ್, ಒನಿಡಾ, ವೋಲ್ಟಾಸ್, ಐಎಫ್‌ಬಿ, ವರ್ಲ್‌ಪೂಲ್, ಸೋನಿ, ಪ್ಯಾನಸೋನಿಕ್, ಎಲ್.ಜಿ., ಸ್ಯಾಮ್‌ಸಂಗ್, ಬೋಶ್, ವಿಡಿಯೋಕಾನ್, ಹೈಯರ್ ಮೊದಲಾದ ಕಂಪೆನಿಗಳ ಅತ್ಯಾಧುನಿಕ ಗೃಹೋಪಕರಣಗಳು ವಿಶಾಲ ಶ್ರೇಣಿಯಲ್ಲಿ ಲಭ್ಯವಿದ್ದು, ಅತ್ಯುತ್ತಮ ಬೆಲೆಯಲ್ಲಿ ಲಾಭ ದಾಯಕ ಕೊಡುಗೆಗಳೊಂದಿಗೆ ದೊರೆಯುತ್ತಿ ರುವುದು ‘ಹರ್ಷೋತ್ಸವ’ದ ವಿಶೇಷತೆ.
ಆಕರ್ಷಕ ರಿಯಾಯಿತಿ ದರ ನವನವೀನ ಮಾದರಿಯ ಡಿಜಿಟಲ್ ತಂತ್ರಜ್ಞಾನದ ಎಲ್‌ಇಡಿ ಟಿವಿಗಳು, ಫ್ರಾಸ್ಟ್ ಪ್ರೀ ರೆಫ್ರಿಜರೇಟರ್‌ಗಳು, ಫುಲ್ಲೀ ಅಟೊಮೆಟಿಕ್ ವಾಷಿಂಗ್ ಮೆಶಿನ್‌ಗಳು, ಕೈಗೆಟಕುವ ದರದಲ್ಲಿ ಉನ್ನತ ತಂತ್ರಜ್ಞಾನದ ವಿದ್ಯುತ್ ಉಳಿಸುವ ಸ್ಟಾರ್ ರೇಟೆಡ್ ಸ್ಪ್ಲಿಟ್ ಏರ್‌ಕಂಡೀಶನರ್‌ಗಳು, ಮೈಕ್ರೋವೇವ್ ಓವನ್‌ಗಳು, ಜಗತ್ಪ್ರಸಿದ್ಧ ಬ್ರಾಂಡ್‌ಗಳ ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಸ್ಮಾರ್ಟ್ ಫೋನ್‌ಗಳು, ಅತ್ಯಾಧುನಿಕ ಪರ್ಸನಲ್, ಹೆಲ್ತ್‌ಕೇರ್ ಹಾಗೂ ಬ್ಯೂಟಿ ಕೇರ್ ಉತ್ಪನ್ನಗಳು ಜೊತೆಗೆ ಇನ್ನಿತರ ಗೃಹೋಪಯೋಗಿ ವಸ್ತುಗಳು ಹತ್ತು ಹಲವಾರು ಕೊಡುಗೆಗಳೊಂದಿಗೆ ಗ್ರಾಹಕರ ಮನಸೆಳೆಯುತ್ತಿವೆ. ಉತ್ಕೃಷ್ಟ ವಸ್ತು ವೈವಿಧ್ಯಗಳ ವಿಶಾಲ ಶ್ರೇಣಿಯೇ ‘ಹರ್ಷೋತ್ಸವ’ದಲ್ಲಿದ್ದು, ಗ್ರಾಹಕರಿಗೆ ಒಂದೇ ಸೂರಿನಡಿಯಲ್ಲಿ ಆಯ್ಕೆ ಮಾಡುವ ಅವಕಾಶವನ್ನು ಕಲ್ಪಿಸಿವೆ ಎಂದು ‘ಹರ್ಷ’ದ ಮಾರ್ಕೆಟಿಂಗ್ ಡೈರೆಕ್ಟರ್ ಹರೀಶ್ ಕುಮಾರ್ ತಿಳಿಸಿದ್ದಾರೆ.
ಅನನ್ಯ ಕೊಡುಗೆಗಳ ಮಹಾಪೂರ
ಶ್ರೇಷ್ಠಮಟ್ಟದ ಅಂತಾರಾಷ್ಟ್ರೀಯ ಖ್ಯಾತಿಯ ಬ್ರಾಂಡ್‌ನ ಉತ್ಪನ್ನಗಳನ್ನು ರಿಯಾಯಿತಿ ದರಗಳಲ್ಲಿ ಗ್ರಾಹಕರಿಗೆ ನೀಡುವುದು ‘ಹರ್ಷ’ದ ವಿಶೇಷತೆ ಯಾಗಿದೆ. ‘ಹರ್ಷೋತ್ಸವ’ದ ಆಕರ್ಷಕ ವಿನಿಮಯ ಕೊಡುಗೆಗಳು, ವಿಶಿಷ್ಟ ಕಾಂಬಿ ಕೊಡುಗೆಗಳು, ವಿಶೇಷ ರಿಯಾಯಿತಿಗಳು, ಖಚಿತ ಉಡುಗೊರೆಗಳು ಗ್ರಾಹಕರಿಗೆ ಹೆಚ್ಚಿನ ಸಂತಸ ನೀಡಿದೆ. ಈ ಬಾರಿ ಲಕ್ಕಿ ಡ್ರಾದಲ್ಲಿ 100 ಮೈಕ್ರೋವೇವ್ ಓವನ್‌ಗಳು, 50 ಪ್ಯಾನಸೋನಿಕ್ ಅಟೋಮ್ಯಾಟಿಕ್ ಇಲೆಕ್ಟ್ರಿಕ್ ಕುಕ್ಕರ್, 15 ಆ್ಯಪಲ್ ಐಫೋನ್, 15 ಸ್ಪ್ಲಿಟ್ ಏಸಿ ಹಾಗೂ ಬಜಾಜ್ ಫೈನಾನ್ಸ್ ಮೂಲಕ ಗೃಹೋ ಪಕರಣಗಳನ್ನು ಖರೀದಿಸಿದವರಿಗೆ ಸಿಂಗಾಪುರ ಪ್ರವಾಸ ಗೆಲ್ಲುವ ಸುವರ್ಣ ಅವಕಾಶವನ್ನು ಒದಗಿಸಿದೆ. ಜೊತೆಗೆ ಇನ್ನಿತರ ಆಕರ್ಷಣೀಯ ಬಹುಮಾನಗಳು ಗ್ರಾಹಕರ ಶಾಪಿಂಗ್‌ಗೆ ಮತ್ತಷ್ಟು ರಂಗೇರಿಸಿವೆ.







