ಮಲ್ಪೆ: ಸಮರ್ಪಕ ವೈ-ಫೈ ಸೌಲಭ್ಯಕ್ಕೆ ಒತ್ತಾಯ
ಉಡುಪಿ, ಮಾ.11: ಮಲ್ಪೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಇತ್ತೀಚೆಗೆ ಉಚಿತ ವೈಫೈ ಸೇವೆಗೆ ಚಾಲನೆ ನೀಡಲಾಗಿದೆಯಾದರೂ ಅದು ಈಗ ಸರಿಯಾಗಿ ಸಿಗುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ವಾರದ ಆರು ದಿನ ಅರ್ಧಗಂಟೆಗಳ ಕಾಲ ಸಿಗುವ ಈ ಸೌಲಭ್ಯ, ರವಿವಾರದಂದು ಯಾರಿಗೂ ಸಿಗುತ್ತಿಲ್ಲ. ವಾರದ ಏಳು ದಿನವೂ ಈ ಸೌಲಭ್ಯ ಸಾರ್ವಜನಿಕರಿಗೆ ದೊರೆಯುವಂತೆ ಸಂಬಂಧಪಟ್ಟವರು ಕ್ರಮ ತೆಗೆದುಕೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು, ಸಂತೋಷ್ ಶೇಡಿಗುಡ್ಡೆ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.
Next Story





