ಇಂಡಿಯಾ ಆದರೇನು... ಭಾರತವಾದರೇನು!
ಸುಪ್ರೀಂ ಕೋರ್ಟ್‌ನಿಂದ ಪಿಐಎಲ್ ವಜಾ
ಹೊಸದಿಲ್ಲಿ:, ಮಾ.11: ಕೇಂದ್ರ ಹಾಗೂ ರಾಜ್ಯ ಸರಕಾರಗಳು ‘ಇಂಡಿಯಾದ’ ಬದಲಿಗೆ ‘ಭಾರತ’ ಎಂದು ಉಪಯೋಗಿಸುವಂತೆ ನಿರ್ದೇಶ ನೀಡಬೇಕೆಂದು ಕೋರಿ ಸಲ್ಲಿಸ ಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಯೊಂದನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಎಲ್ಲ ರೀತಿಯ ಭಾವನಾತ್ಮಕ ವಿಷಯಗಳನ್ನು ನ್ಯಾಯಾಲಯಕ್ಕೆ ತರುವುದು ಸರಿಯಲ್ಲವೆಂದು ಅದು ಈ ವೇಳೆ ಅಭಿಪ್ರಾಯಿಸಿದೆ.
ದೇಶವನ್ನು ಇಂಡಿಯಾ ಎಂದು ಕರೆಯಲು ಯಾರು ಬಯಸುತ್ತಾರೋ ಅವರು ಇಂಡಿಯಾ ಎಂದೇ ಕರೆಯಲಿ. ಭಾರತವೆಂದು ಕರೆಯಲು ಬಯಸುವವರು ಭಾರತವೆನ್ನಲಿ ಎಂದು ದೇಶದ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಹೇಳಿದರು.
ಎಲ್ಲ ಅಧಿಕೃತ ಹಾಗೂ ಅನಧಿಕೃತ ಉದ್ದೇಶಗಳಿಗಾಗಿ ದೇಶವನ್ನು ಇಂಡಿಯಾಕ್ಕೆ ಬದಲಾಗಿ ಭಾರತವೆಂದು ಕರೆಯುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಸಂಬಂಧ ಪ್ರತಿಕ್ರಿಯೆ ಕೋರಿ, ಕಳೆದ ವರ್ಷ ಎಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನೋಟಿಸ್‌ಗಳನ್ನು ಕಳುಹಿಸಿತ್ತು.
ನಿರಂಜನ ಭಟ್ವಾಲ್ ಎಂಬವರು ಸಲ್ಲಿಸಿದ್ದ ಈ ಅರ್ಜಿ, ಸರಕಾರಿ ಉದ್ದೇಶಕ್ಕೆ, ‘ಇಂಡಿಯಾ’ ಎಂದು ಉಪಯೋಗಿಸುವುದನ್ನು ತಡೆಯುವಂತೆಯೂ ಕೋರಿತ್ತು.





