ಟ್ವೆಂಟಿ-20 ವಿಶ್ವಕಪ್: ಕೊಹ್ಲಿಗೆ ಅಗ್ರಸ್ಥಾನ ಪಡೆಯಲು ಅವಕಾಶ

ಹೊಸದಿಲ್ಲಿ, ಮಾ.11: ಶ್ರೀಲಾಂಕಾದ ಡೈನಾಮಿಕ್ ಆಟಗಾರರಾದ ಮಹೇಲ ಜಯವರ್ಧನೆ ಮತ್ತು ಕುಮಾರ ಸಂಗಕ್ಕರ, ನ್ಯೂಝಿಲೆಂಡ್‌ನ ಬ್ರೆಂಡನ್ ಮೆಕಲಮ್ ಇವರ ನಿವೃತ್ತಿಯಿಂದ ಈ ವರೆಗೆ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಗರಿಷ್ಠ ರನ್ ಗಳಿಸಿರುವ ಟಾಪ್ 5 ಆಟಗಾರರಲ್ಲಿ ವಿಂಡೀಸ್‌ನ ಕ್ರಿಸ್ ಗೇಲ್ ಮತ್ತು ಶ್ರೀಲಂಕಾದ ತಿಲಕರತ್ನೆ ದಿಲ್ಶನ್ ಮಾತ್ರ ಇದ್ದಾರೆ.
ಕುಮಾರ ಸಂಗಕ್ಕರ 30 ಇನಿಂಗ್ಸ್‌ಗಳಲ್ಲಿ 661 ರನ್, ಬ್ರೆಂಡನ್ ಮೆಕಲಮ್ 25 ಇನಿಂಗ್ಸ್‌ಗಳಲ್ಲಿ 637 ರನ್ ಸಂಪಾದಿಸಿದ್ದಾರೆ.
ಕ್ರಿಸ್ ಗೇಲ್: ವೆಸ್ಟ್‌ಇಂಡೀಸ್‌ನ ದೈತ್ಯ ಆಟಗಾರ ಕ್ರಿಸ್ ಗೇಲ್ ಒಂದು ರೀತಿಯಲ್ಲಿ ರನ್ ಯಂತ್ರ. ಅವರ ತಂಡ 2012ರಲ್ಲಿ ಚುಟುಕು ವಿಶ್ವಕಪ್‌ನಲ್ಲಿ ವಿಶ್ವ ಚಾಂಪಿಯನ್ ಆಗಿತ್ತು. ವಿಶ್ವಕಪ್‌ನಲ್ಲಿ ಗೇಲ್ 23 ಪಂದ್ಯಗಳಲ್ಲಿ 807 ರನ್ ಗಳಿಸಿದ್ದಾರೆ.ಗರಿಷ್ಠ ವೈಯಕ್ತಿಕ ಸ್ಕೋರ್ 117, ಸರಾಸರಿ 40.35, ಶತಕ 1, ಅರ್ಧಶತಕ 7.
ತಿಲಕರತ್ನೆ ದಿಲ್ಶನ್:
ಶ್ರೀಲಂಕಾದ 39ರ ಹರೆಯದ ತಿಲಕರತ್ನೆ ದಿಲ್ಶನ್ ಇದೀಗ ಆರನೆ ವಿಶ್ವಕಪ್‌ನಲ್ಲಿ ಆಡುತ್ತಿದ್ದಾರೆ. 30 ಇನಿಂಗ್ಸ್‌ಗಳಲ್ಲಿ 764 ರನ್ ಗಳಿಸಿದ್ದಾರೆ. ಶ್ರೀಲಂಕಾ ಹಾಲಿ ಚಾಂಪಿಯನ್ ಆಗಿದೆ. ಇದು ಬಹುಶಃ ದಿಲ್ಶನ್‌ಗೆ ಕೊನೆಯ ವಿಶ್ವಕಪ್. ವಿಶ್ವಕಪ್ ಅಂಕಿ-ಅಂಶ: ಪಂದ್ಯ 31, ಇನಿಂಗ್ಸ್ 30, ರನ್ 764, ಗರಿಷ್ಠ ವೈಯಕ್ತಿಕ ಸ್ಕೋರ್ ಔಟಾಗದೆ 96, ಸರಾಸರಿ 29.38, ಸ್ಟ್ರೈಕ್‌ರೇಟ್ 124.22, ಶತಕ 0, ಅರ್ಧಶತಕ 5.
ಎಬಿ ಡಿವಿಲಿಯರ್ಸ್: ದಕ್ಷಿಣ ಆಫ್ರಿಕದ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ 25 ಇನಿಂಗ್ಸ್‌ಗಳಲ್ಲಿ 607 ರನ್ ಗಳಿಸಿದ್ದಾರೆ. ಕಳೆದ ಐದು ವಿಶ್ವಕಪ್‌ಗಳಲ್ಲಿ ಅವರು ಆಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕ, ವೇಗದ ಶತಕ, ವೇಗದ 150 ರನ್ ಸಿಡಿಸಿದ್ದಾರೆ. ದಕ್ಷಿಣ ಆಫ್ರಿಕ ತಂಡ ಇವರ ಮೇಲೆ ಭರವಸೆ ಇರಿಸಿದೆ. ಡಿವಿಲಿಯರ್ಸ್ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 21 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ್ದರು. ಐಸಿಸಿ ಇವೆಂಟ್‌ನಲ್ಲಿ 1998ರಲ್ಲಿ ಆಫ್ರಿಕ ಚಾಂಪಿಯನ್ಸ್ ಟ್ರೋಫಿಯನ್ನು ಜಯಿಸಿರುವುದು ಬಿಟ್ಟರೆ ಐಸಿಸಿಯ ಜಾಗತಿಕ ಮಟ್ಟದ ಇನ್ನೊಂದು ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ.
ವಿಶ್ವಕಪ್ ಅಂಕಿ-ಅಂಶ: ಪಂದ್ಯ 26, ಇನಿಂಗ್ಸ್ 25, ರನ್ 607, ಗರಿಷ್ಠ ವೈಯಕ್ತಿಕ ಸ್ಕೋರ್ ಔಟಾಗದೆ 79, ಸರಾಸರಿ 28.90, ಸ್ಟ್ರೈಕ್‌ರೇಟ್ 138.26, ಶತಕ 0, ಅರ್ಧಶತಕ 4.
ರೋಹಿತ್ ಶರ್ಮ: ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆ ಹೊಂದಿರುವ ರೋಹಿತ್ ಶರ್ಮ 20 ಇನಿಂಗ್ಸ್‌ಗಳಲ್ಲಿ 585 ರನ್ ಗಳಿಸಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾಕಪ್‌ನಲ್ಲಿ 5 ಇನಿಂಗ್ಸ್‌ಗಳಲ್ಲಿ 138 ರನ್ ಗಳಿಸಿದ್ದರು. ಬಾಂಗ್ಲಾ ವಿರುದ್ಧದ ಮೊದಲ ಪಂದ್ಯದಲ್ಲಿ 55 ಎಸೆತಗಳಲ್ಲಿ 83 ರನ್ ಗಳಿಸಿದ್ದರು.
ವಿಶ್ವಕಪ್ ಅಂಕಿ-ಅಂಶ: ಪಂದ್ಯ 23, ಇನಿಂಗ್ಸ್ 20, ರನ್ 585, ಗರಿಷ್ಠ ವೈಯಕ್ತಿಕ ಸ್ಕೋರ್ ಔಟಾಗದೆ 79, ಸರಾಸರಿ 48.75, ಸ್ಟ್ರೈಕ್‌ರೇಟ್ 130.87, ಶತಕ 0, ಅರ್ಧಶತಕ 6.
ಯುವರಾಜ್ ಸಿಂಗ್: ಭಾರತ ತಂಡದಲ್ಲಿ ಈ ಬಾರಿ ಮೂವರು 6ನೆ ಬಾರಿ ಟ್ವೆಂಟಿ-20 ವಿಶ್ವಕಪ್ ಆಡುತ್ತಿದ್ದಾರೆ. ಅವರೆಂದರೆ ಯುವರಾಜ್ ಸಿಂಗ್, ರೋಹಿತ್ ಶರ್ಮ ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ. ಯುವರಾಜ್ ಸಿಂಗ್ 24 ಇನಿಂಗ್ಸ್‌ಗಳಲ್ಲಿ 541 ರನ್ ಗಳಿಸಿದ್ದಾರೆ.
ವಿಶ್ವಕಪ್ ಅಂಕಿ-ಅಂಶ: ಪಂದ್ಯ 27, ಇನಿಂಗ್ಸ್ 24, ರನ್ 541, ಗರಿಷ್ಠ ವೈಯಕ್ತಿಕ ಸ್ಕೋರ್ 70, ಸರಾಸರಿ 25.76, ಸ್ಟ್ರೈಕ್‌ರೇಟ್ 132.59, ಶತಕ 0, ಅರ್ಧಶತಕ 4.
ವಿರಾಟ್ ಕೊಹ್ಲಿ: ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಎಲ್ಲ ಪ್ರಮುಖ ಐಸಿಸಿ ಟೂರ್ನಮೆಂಟ್‌ಗಳಲ್ಲಿ ಭಾಗವಹಿಸಿದ್ದಾರೆ. ಅವರಿಗೆ ಇದು ಮೂರನೆ ವಿಶ್ವಕಪ್.
11 ಇನಿಂಗ್ಸ್‌ಗಳಲ್ಲಿ 500ಕ್ಕೂ ಅಧಿಕ ರನ್ ದಾಖಲಿಸಿರುವ ಅವರಿಗೆ ಈ ಬಾರಿ ಗರಿಷ್ಠ ರನ್ ಗಳಿಕೆಯಲ್ಲಿ ಎಲ್ಲರನ್ನೂ ಹಿಂದಿಕ್ಕುವ ಅವಕಾಶ ಇದೆ. ವಿಶ್ವಕಪ್ ಅಂಕಿ-ಅಂಶ: ಪಂದ್ಯ 11, ಇನಿಂಗ್ಸ್ 11, ರನ್ 504, ಗರಿಷ್ಠ ವೈಯಕ್ತಿಕ ಸ್ಕೋರ್ 78, ಸರಾಸರಿ 72.00, ಸ್ಟ್ರೈಕ್‌ರೇಟ್ 126.63, ಶತಕ 0, ಅರ್ಧಶತಕ 6.
ಜೆಪಿ. ಡುಮಿನಿ: ದಕ್ಷಿಣ ಆಫ್ರಿಕದ ಮಧ್ಯಮ ಸರದಿಯ ದಾಂಡಿಗ. ಟ್ವೆಂಟಿ-20 ವಿಶ್ವಕಪ್‌ನಲ್ಲಿ 21 ಇನಿಂಗ್ಸ್‌ಗಳಲ್ಲಿ 485 ರನ್ ದಾಖಲಿಸಿದ್ದಾರೆ. ವಿಶ್ವಕಪ್ ಅಂಕಿ-ಅಂಶ: ಪಂದ್ಯ 23, ಇನಿಂಗ್ಸ್ 21, ರನ್ 485, ಗರಿಷ್ಠ ವೈಯಕ್ತಿಕ ಸ್ಕೋರ್ 86, ಸರಾಸರಿ 34.64, ಸ್ಟ್ರೈಕ್‌ರೇಟ್ 124.35, ಶತಕ 0, ಅರ್ಧಶತಕ 1.
ರಾಸ್ ಟೇಲರ್: ಬ್ರೆಂಡನ್ ಮೆಕಲಮ್ ನಿವೃತ್ತಿಯ ಬಳಿಕ ನ್ಯೂಝಿಲೆಂಡ್‌ನ ಬ್ಯಾಟಿಂಗ್‌ನ್ನು ಮುನ್ನಡೆಸುತ್ತಿರುವ ರಾಸ್ ಟೇಲರ್ ವಿಶ್ವಕಪ್‌ನ 20 ಇನಿಂಗ್ಸ್‌ಗಳಲ್ಲಿ 471 ರನ್ ಗಳಿಸಿದ್ದಾರೆ.
ವಿಶ್ವಕಪ್ ಅಂಕಿ-ಅಂಶ:
ಪಂದ್ಯ 23, ಇನಿಂಗ್ಸ್ 20, ರನ್ 471, ಗರಿಷ್ಠ ವೈಯಕ್ತಿಕ ಸ್ಕೋರ್ ಔಟಾಗದೆ 62, , ಸರಾಸರಿ 29.43, ಸ್ಟ್ರೈಕ್‌ರೇಟ್ 130.83, ಶತಕ 0, ಅರ್ಧಶತಕ 3.
ಶಾಹಿದ್ ಅಫ್ರಿದಿ: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಶಾಹಿದ್ ಅಫ್ರಿದಿಗೆ ಇದು ಕೊನೆಯ ವಿಶ್ವಕಪ್.
ವಿಶ್ವಕಪ್ ಅಂಕಿ-ಅಂಶ: ಪಂದ್ಯ 30, ಇನಿಂಗ್ಸ್ 28, ರನ್ 456, ಗರಿಷ್ಠ ವೈಯಕ್ತಿಕ ಸ್ಕೋರ್ ಔಟಾಗದೆ 54, , ಸರಾಸರಿ 18.24, ಸ್ಟ್ರೈಕ್‌ರೇಟ್ 149.50, ಶತಕ 0, ಅರ್ಧಶತಕ 2.
ಶುಐಬ್ ಮಲಿಕ್: ಶುಐಬ್ ಮಲಿಕ್ ಪಾಕಿಸ್ತಾನದ ಮಾಜಿ ನಾಯಕ. ಕಳೆದ ಏಷ್ಯಾಕಪ್‌ನಲ್ಲಿ 4 ಇನಿಂಗ್ಸ್‌ಗಳಲ್ಲಿ 121 ರನ್ ಗಳಿಸಿದ್ಧಾರೆ. ಉತ್ತಮ ಫಾರ್ಮ್‌ನಲ್ಲಿದ್ದಾರೆ.
ವಿಶ್ವಕಪ್ ಅಂಕಿ-ಅಂಶ: ಪಂದ್ಯ 24, ಇನಿಂಗ್ಸ್ 23, ರನ್ 450, ಗರಿಷ್ಠ ವೈಯಕ್ತಿಕ ಸ್ಕೋರ್ 57, , ಸರಾಸರಿ 28.12, ಸ್ಟ್ರೈಕ್‌ರೇಟ್ 109.48, ಶತಕ 0, ಅರ್ಧಶತಕ 2.







