ಕಾರ್ಕಳ: ತಾರಸಿ ತೋಟಗಾರಿಕೆ ತರಬೇತಿ ಶಿಬಿರ
ಕಾರ್ಕಳ: ಕೈತೋಟ ಮತ್ತು ತಾರಸಿ ತೋಟಗಾರಿಕೆ ತರಬೇತಿ ಶಿಬಿರವು ರೋಟರಿ ಬಾಲಭವನದಲ್ಲಿ ನಡೆಯಿತು. ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸರಾಯರು ಕೈತೋಟದ ಮಹತ್ವ ತಿಳಿಸಿದರು. ಬ್ರಹ್ಮಾವರದ ಕೃಷಿ ಸಂಶೋಧನಾ ಕೇಂದ್ರದಿಂದ ವಿಡಿಯೋ ಪ್ರದರ್ಶನದ ಮೂಲಕ ವಿವಿಧ ತರಕಾರಿ ಗಿಡಗಳನ್ನು ತಯಾರಿಸುವ ವಿಧಾನ, ಸೊಪ್ಪು ತರಕಾರಿಗಳ ಗುಣಮಟ್ಟ ತಿಳಿಸಿದರು. ರೋಟರಿ ಕ್ಲಬ್, ರೋಟರಿ ಆ್ಯನ್ಸ್ ಕ್ಲಬ್ ಮತ್ತು ತೋಟಗಾರಿಕೆ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಈ ಶಿಬಿರ ನಡೆಯಿತು. ರೋಟರಿ ಅಧ್ಯಕ್ಷ ಚಂದ್ರಶೇಖರ ಹೆಗ್ಡೆ ಸ್ವಾಗತಿಸಿದರು. ಅನಂಕೃಷ್ಣ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಉಪಾಧ್ಯಕ್ಷ ಶೇಖರ ಎಚ್. ವಂದಿಸಿದರು.
Next Story





