ಬಪ್ಪಳಿಗೆ: ನೂತನ ಶಾಲಾ ಕಟ್ಟಡಕ್ಕೆ ಶಿಲಾನ್ಯಾಸ

ಬಪ್ಪಳಿಗೆ: ಗ್ರೀನ್ ವ್ಯೆ ಮೈನಾರಿಟಿ ಎಜುಕೇಶನ್ ಟ್ರಸ್ಟ್ ಬಪ್ಪಳಿಗೆ ಇದರ ವತಿಯಿಂದ ನಿರ್ಮಾಣವಾಗಲಿರುವ ನೂತನ ಶಾಲಾ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಶನಿವಾರ ಬಪ್ಪಳಿಗೆಯಲ್ಲಿ ನಡೆಯಿತು.
ಪುತ್ತೂರು ಮುದರ್ರಿಸ್ ಸಯ್ಯದ್ ಅಹ್ಮದ್‌ಪೂಕೋಯಾ ತಂಙಳ್ ಶಿಲಾನ್ಯಾಸ ನೆರವೇರಿಸಿ ಶುಭ ಹಾರೈಸಿದರು. ಸಂಪ್ಯ ಕಮ್ಮಾಡಿ ಎಜುಕೇಶನ್ ಸೆಂಟರ್‌ನ ಅಧ್ಯಕ್ಷ ಕಮ್ಮಾಡಿ ಇಬ್ರಾಹಿಂ ಹಾಜಿ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ಹಾಜಿ ಹುಸೈನ್ ಬಿ. ಸುಲ್ತಾನ್ ಕೊಡಾಜೆ, ಎಂಪವರ್‌ನ ಆಡಳಿತ ನಿರ್ದೇಶಕ ಅಬ್ದುಲ್ ಲತೀಫ್, ಪುತ್ತೂರು ಅನ್ಸಾರುದ್ದೀನ್ ಜಮಾತ್ ಕಮಿಟಿ ಅಧ್ಯಕ್ಷ ಯು, ಅಬ್ದುಲ್ಲ, ಉದ್ಯಮಿ ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಡಾ. ನಜೀರ್ ಅಹ್ಮದ್, ನ್ಯಾಯವಾದಿ ಫಝಲ್ ರಹೀಂ, ಗುತ್ತಿಗೆದಾರ ಕುಂಞಹ್ಮದ್, ಉದ್ಯಮಿ ಹಸನ್ ಹಾಜಿ, ಇರ್ಷಾದ್ ಅಬ್ದುಲ್ ಖಾದರ್, ಜಲಾಲ್ ಅಹ್ಮದ್ ಪುತ್ತೂರು, ಹಾಜಿ ಸುಲೈಮಾನ್, , ಉಮ್ಮರ್ ಶಾಫಿ ಪಾಪೆತ್ತಡ್ಕ , ಟ್ರಸ್ಟಿಗಳಾದ ಜಾಕಿರ್ ಹುಸೇನ್, ಅಬ್ದುಲ್ ರಝಾಕ್ ಹಾಜಿ,ಶಾಲಾ ಶಿಕ್ಷಕಕರು ಮತ್ತಿತರರು ಉಪಸ್ಥಿತರಿದ್ದರು.
ಗ್ರೀನ್ ವ್ಯೆ ಮೈನಾರಿಟಿ ಎಜ್ಯುಕೇಶನ್ ಟ್ರಸ್ಟ್‌ನ ಸಂಚಾಲಕ ಅಬ್ದುಲ್ ಹಮೀದ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಕ್ಷ ಯೂಸುಫ್ ಕೆ ಸ್ವಾಗತಿಸಿದರು. ಕಾರ್ಯದರ್ಶಿ ಬಿ ಎ ರಹಿಮಾನ್ ವಂದಿಸಿದರು. ರಝಾಕ್ ಬಪ್ಪಳಿಗೆ ನಿರೂಪಿಸಿದರು.





