ಸುಳ್ಯ: ಎ. 2ರಂದು ಸುಳ್ಯದಲ್ಲಿ ಹೊನಲು ಬೆಳಕಿನ ಕ್ರಿಕೆಟ್
ಮಿಲಿಟ್ರಿ ಗೌಂಡ್‌ನ ಎಂ.ಜಿ. ಕ್ರೀಡಾ ಮತ್ತು ಕಲಾ ಸಂಘ ಆಶ್ರಯದಲ್ಲಿ ಸುಳ್ಯ ತಾಲೂಕು ಮತ್ತು ದ.ಕ. ಕಬಡ್ಡಿ ಅಸೋಸಿಯೇಶನ್ ಸಹಯೋಗದಲ್ಲಿ ಮುಕ್ತ ಕಬಡ್ಡಿ ಪಂದ್ಯಾಟವು ಎಪ್ರಿಲ್ 2 ರಂದು ಹಳೆಗೇಟಿನ ಮಿಲಿಟ್ರಿ ಗೌಂ್ರಡ್ ನಲ್ಲಿ ನಡೆಯಲಿದೆ. ಪಂದ್ಯಾಟದ ಸಂಚಾಲಕ ಶಶಿಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ದ.ಕ, ಕೊಡಗು ಮತ್ತು ಕಾಸರಗೋಡು ಜಿಲ್ಲೆಗಳ ಅಂತರ್ ಜಿಲ್ಲಾ ಮಟ್ಟದ ಪುರುಷರ ಹೊನಲು ಬೆಳಕಿನ ಪಂದ್ಯಾಟದಲ್ಲಿ ಸುಮಾರು 30 ತಂಡಗಳು ಭಾಗವಹಿಸಲಿದ್ದು ಸಂಸದ ನಳಿನ್ ಕುಮಾರ ಕಟೀಲ್ ಉದ್ಘಾಟಿಸಲಿದ್ದಾರೆ. ಶಾಸಕ ಎಸ್.ಅಂಗಾರ, ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ವಿಜಯ ಬ್ಯಾಂಕ್ ಕಬಡ್ಡಿ ತಂಡದ ನಾಯಕ ಹಾಗೂ ಪ್ರೋ ಕಬಡ್ಡಿ ಆಟಗಾರ ಪ್ರಶಾಂತ್ ಕುಮಾರ್ ರೈ, ವಿಜಯ ಬ್ಯಾಂಕ್ ಕಬಡ್ಡಿ ತಂಡದ ಆಟಗಾರ, ಪ್ರೋ ಕಬಡ್ಡಿ ಆಟಗಾರ ಸಚಿನ್ ಸುವರ್ಣ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದು. ಇದಲ್ಲದೇ ಸುಳ್ಯ ತಾಲೂಕಿನ ಕ್ರೀಡಾ ಪ್ರತಿಭೆಗಳಾದ ಮೂರ್ತಿ, ಜಶ್ವಂತ್, ಸಂಸುದ್ದೀನ್ ಜಯನಗರ ಹಾಗೂ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ ಯವರನ್ನು ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು. ಎಂ.ಜಿ. ಕ್ರೀಡಾ ಮತ್ತು ಕಲಾ ಸಂಘದ ಅಧ್ಯಕ್ಷ ಮಣಿಕಂಠ, ಗೌರವ ಅಧ್ಯಕ್ಷ ಕಾಳಿಯಪ್ಪ, ಕೋಶಾಧಿಕಾರಿ ಶಿವ, ಕಾರ್ಯದರ್ಶಿ ಗಣೇಶ್, ಸದಸ್ಯರಾದ ಸೂರಜ್ , ಗಣೇಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.





