ಭಟ್ಕಳ:ಕಾಂಗ್ರೇಸ್ ನಿಂದಗೂಂಡಾಗಿರಿ ಬಿಜೆಪಿ ಆರೋಪ

ಭಟ್ಕಳ: ಜನಪ್ರತಿನಿಧಿಯಾಗಿಆಯ್ಕೆಗೊಂಡಿರುವ ಶಾಸಕ ಮಾಂಕಾಳು ವೈದ್ಯ ಹಾಗೂ ಕಾಂಗ್ರೇಸ್ ಪಕ್ಷ ಭಟ್ಕಳ ಕ್ಷೇತ್ರದಲ್ಲಿಗೂಂಡಾಗಿರಿ ಮಾಡುತ್ತಿದೆಎಂದು ಆರೋಪಿಸಿ ಶನಿವಾರ ಬಿಜೆಪಿ ವತಿಯಿಂದರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಶಾಕರುತಮ್ಮಅಧಿಕಾರವನ್ನು ದುರೂಪಯೋಗಪಡಿಸಿಕೊಂಡು ಬಿಜೆಪಿ ಕಾರ್ಯಕರ್ತರ ಮೇಲೆ ಪದೇ ಪದೇದೌರ್ಜನ್ಯ ಹಾಗೂ ಗೂಂಡಾಗಿರಿ ಪ್ರದರ್ಶಿಸಿ ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡುತ್ತಿದ್ದಾರೆಎಂದು ಮನವಿಯಲ್ಲಿಆರೋಪಿಸಲಾಗಿದೆ. ತಮ್ಮ ಮತಬ್ಯಾಂಕಾಗಿರುವಅಲ್ಪಸಂಖ್ಯಾತರು ಹಾಗೂ ತಂಜೀಂ ಸಂಸ್ಥೆಯನ್ನುಒಲೈಸುವುದಕ್ಕಾಗಿ ಭಟ್ಕಳದಲ್ಲಿ ಭಯೋತ್ಪಾದನಾಚಟುವಟಿಕೆ ನಡೆಯುತ್ತಿಲ್ಲ ಎಂಬ ಹೇಳಿಕೆ ನೀಡುವುದರ ಮೂಲಕ ಭಯೋತ್ಪಾದಕರಿಗೆ ಸಾತ್ ನೀಡುತ್ತಿದ್ದು ಭಯೋತ್ಪಾದನ ವಿಚಾರದಲ್ಲಿತನಿಖೆಕೈಗೊಂಡಿರುವ ಪೊಲೀಸರ ನೈತಿಕ ಸ್ಥೈರ್ಯವನ್ನು ಪ್ರಶ್ನಿಸಿದಂತಾಗಿದೆ. ದೇಶದಯಾವ ಮೂಲೆಯಲ್ಲಿ ಭಯೋತ್ಪಾದನೆ ನಡೆಯಲಿ ಅಲ್ಲಿ ಭಟ್ಕಳ ಮೂಲದ ವ್ಯಕ್ತಿಯೊಬ್ಬ ಕಾಣಿಸಿಕೊಳ್ಳುತ್ತಾನೆ. ಇದನ್ನು ತಿಳಿದೂ ಸಹ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಭಯೋತ್ಪಾದಕರ ಪರವಾಗಿ ಮಾತನಾಡುತ್ತಿದ್ದಾರೆಎಂದು ಆರೋಪಿಸಿರುವ ಬಿಜೆಪಿ ಈ ಕುರಿತು ಸೂಕ್ತ ತನಿಖೆಗೆ ಆದೇಶಿಸಬೇಕೆಂದು ಆಗ್ರಹಿಸಲಾಗಿದೆ. ಅಲ್ಲದೆ ಶಾಸಕ ಮಾಂಕಾಳು ವೈದ್ಯಕುರಿತಂತೆ ಹಲವು ಗಂಭೀರಆರೋಪ ಮಾಡಿರುವ ಬಿಜೆಪಿಗರುಕೂಡಲೇ ಸೂಕ್ತ ತನಿಖೆಯನ್ನು ಮಾಡಬೇಕುಇಲ್ಲವಾದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಮನವಿಯಲ್ಲಿ ತಿಳಿಸಿದೆ. ಈ ಸಂದರ್ಭದಲ್ಲಿ ಭಟ್ಕಳ ತಾಲೂಕು ಬಿಜೆಪಿ ಅಧ್ಯಕ್ಷಈಶ್ವರದೊಡ್ಮನೆ, ಗೋವಿಂದ ನಾಯ್ಕ, ಕೃಷ್ಣ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.





