ರಾಜ್ಯದ ಅತ್ಯಂತ ಎತ್ತರದ ವಸತಿ ಸಮುಚ್ಛಯ ಪ್ಲಾನೆಟ್ ಎಸ್‌ಕೆಎಸ್ ಉದ್ಘಾಟನೆ

ಮಂಗಳೂರು.ಮಾ.12:ನಗರದಲ್ಲಿ ನಿರ್ಮಾಣಗೊಂಡಿರುವ 40 ಅಂತಸ್ತುಗಳ ರಾಜ್ಯದ ಅತ್ಯಂತ ಎತ್ತರದ ವಸತಿ ಸಂಕೀರ್ಣ ಪ್ಲಾನೆಟ್ ಎಸ್‌ಕೆಎಸ್‌ನ್ನು ಎಸ್‌ಕೆಎಸ್ ನೆಟ್‌ಗೇಟ್ ಎಲ್‌ಎಲ್‌ಪಿ ಹಾಗೂ ಪ್ಲಾನೆಟ್ ಎಸ್‌ಕೆಎಸ್ ಯೋಜನೆಯ ಪ್ರಧಾನ ಪ್ರವರ್ತಕರಾದ ಶಶಿ ಕಿರಣ ಶೆಟ್ಟಿ ಹಾಗೂ ಆರ್ಕಿಟೆಕ್ಟ್ ಮತ್ತು ಪ್ರವರ್ತಕರಾದ ಸನತ್ ಕುಮಾರ್ ಶೆಟ್ಟಿಯವರ ಕುಟುಂಬದ ಗಣ್ಯ ಮಹಿಳೆಯರಾದ ಸುಶೀಲಾ ಜೆ.ಶೆಟ್ಟಿ,ಲೀಲಾವತಿ ಎಸ್. ಹೆಗ್ಡೆ,ವಿಮಲಾ ಎಸ್ .ಶೆಟ್ಟಿ ಯವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅರಣ್ಯ,ಪರಿಸರ ಖಾತೆ ಸಚಿವ ಬಿ.ರಮಾನಾಥ ರೈ ,ಸಂಸದ ನಳಿನ್ ಕುಮಾರ್ ಕಟೀಲ್,ಶಾಸಕ ಐವನ್ ಡಿ ಸೋಜ,ಗಣೇಶ್ ಕಾರ್ಣಿಕ್ ಕ್ರೆಡೈ ಅಧ್ಯಕ್ಷ ಡಿ.ಬಿ.ಮೆಹ್ತಾ,ಉಪಾಧ್ಯಕ್ಷ ಪಿ.ಎಂ.ಎ. ರಜಾಕ್, ಉದ್ಯಮಿಗಳಾದ ಕೆ.ಸಿ.ನಾಯ್ಕಾ,ಅರ್ಶದ್,ಪುಷ್ಪರಾಜ ಜೈನ್,ಗಣ್ಯರಾದ ಮೋಹನ್ ಆಳ್ವಾ,ಏರ್ಯಲಕ್ಷ್ಮೀ ನಾರಾಯಣ ಆಳ್ವ,ರವಿಶಂಕರ ಶೆಟ್ಟಿ,ಬಲರಾಜ ರೈ,ಕಲ್ಲಡ್ಕ ಪ್ರಭಾಕರ ಭಟ್ ,ಬಾಲಕೃಷ್ಣ ಹೆಗ್ಡೆ ,ಪ್ಲಾನೆಟ್ ಎಸ್‌ಕೆಎಸ್ ಯೋಜನೆಯ ಆರ್ಕಿಟೆಕ್ಟ್ ,ಪ್ರವರ್ತಕ ಸನತ್ ಕುಮಾರ್ ಶೆಟ್ಟಿ,ಸಹಪ್ರವರ್ತಕ ವೈಷ್ಣವ್ ಶೆಟ್ಟಿ,ಆರತಿ ಶಶಿ ಕಿರಣ್ ಶೆಟ್ಟಿ, ಆದರ್ಶ ಹೆಗ್ಡೆ,ಉಮೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
- ಮಂಗಳೂರು ನಗರಕ್ಕೆ ಶೋಭೆ ತರುವಂತಹ ವಿಶಿಷ್ಟ ವಿನ್ಯಾಸದ ಪ್ಲಾನೆಟ್ ಎಸ್‌ಕೆಎಸ್ ವಸತಿ ಸಮುಚ್ಛಯ ಅತ್ಯಂತ ಸುಂದರ ವಿನ್ಯಾಸದಲ್ಲಿ ಪ್ರತಿಷ್ಠಿತ ಯೋಜನೆಯಾಗಿ ಪೂರ್ಣಗೊಂಡಿದೆ .ಈ ಯೋಜನೆಯನ್ನು ಪೂರ್ಣಗೊಳಿಸಿದ ಜಿಲ್ಲೆಯ ಉದ್ಯಮಿ ಶಶಿಕಿರಣ ಶೆಟ್ಟಿಯವರ ಸಾಧನೆಗೆ ಶ್ಲಾಘನೀಯ ಎಂದು ಸಚಿವ ರಮಾನಾಥ ರೈ ಶುಭ ಹಾರೈಸಿದರು. *ಪ್ಲಾನೆಟ್ ಎಸ್‌ಕೆಎಸ್ ನಂತಹ ಅದ್ಭುತವಾದ ಹೆಮ್ಮೆಯ ಯೋಜನೆ ಮಂಗಳೂರಿನಲ್ಲಿ ನಿರ್ಮಾಣ ಗೊಂಡಿರುವುದು ಸಂತಸವನ್ನುಂಟು ಮಾಡಿದೆ.ಇನ್ನಷ್ಟು ಯೋಜನೆಗಳು ಅವರಿಂದ ಮೂಡಿಬರಲಿ ಎಂದು ಕ್ರೆಡೈ ಮಂಗಳೂರು ಘಟಕದ ಅಧ್ಯಕ್ಷ ಡಿ.ಬಿ.ಮೆಹ್ತಾ ಶುಭ ಹಾರೈಸಿದರು.
- ದೇಶದ ಬೇರೆ ಬೇರೆ ಹಲವು ಸುಂದರ ಕಟ್ಟಡ ನೋಡುತ್ತಿದ್ದೆವು.ಪ್ರಸಕ್ತ ಮಂಗಳೂರಿನಲ್ಲಿ ಯೇ ಅಂತಹ ಅದ್ಭುತವಾದ ಕಟ್ಟಡವನ್ನು ನೋಡಲು ಸಾಧ್ಯವಾಯಿತು.ಇದೊಂದು ಮಂಗಳೂರಿನ ಇತಿಹಾಸದಲ್ಲಿಯೇ ಮಹತ್ವದ ಯೋಜನೆಯಾಗಿದೆ ಎಂದು ಶಾಸಕ ಐವನ್ ಡಿ ಸೋಜ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ಲಾನೆಟ್ ಎಸ್‌ಕೆಎಸ್ ವಸತಿ ಸಮುಚ್ಛಯ ಯೋಜನೆ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಕದ್ರಿಹಿಲ್ಸ್‌ನ 4.55ಎಕ್ರೆ ಪ್ರದೇಶದಲ್ಲಿ 125 ಮೀಟರ್ ಎತ್ತರದಲ್ಲಿ 9,20,000ಚದರ ಅಡಿ ವಿಸ್ತೀರ್ಣದಲ್ಲಿ ಮೂರು ತಳ ಅಂತಸ್ತು,ಒಂದು ನೆಲಮಹಡಿ ಮತ್ತು 36ಅಂತಸ್ತುಗಳಲ್ಲಿ 171 ಪ್ಲಾಟ್‌ಗಳೊಂದಿಗೆ ವಸತಿ ಸಮುಚ್ಛಯಗಳು ನಿರ್ಮಾಣಗೊಂಡಿದೆ.430 ಕಾರ್ ಪಾರ್ಕಿಂಗ್ ಸೌಲಭ್ಯವನ್ನು ಹೊಂದಿದೆ.ಈ ವಸತಿ ಸಮುಚ್ಛಯದಲ್ಲಿ ತಲಾ 3300 ಚದರ ಅಡಿ ವಿಸ್ತೀರ್ಣದ 3ಬೆಡ್‌ರೂಮ್‌ಗಳ 126ಪ್ಲಾಟ್‌ಗಳು,ತಲಾ 6600ಚದರ ಅಡಿ ವಿಸ್ತೀರ್ಣದ 45ಪ್ಲಾಟ್‌ಗಳು (21ರಿಂದ 31ಅಂತಸ್ತುಗಳ ನಡುವೆ) ನಿರ್ಮಾಣಗೊಂಡಿವೆ.ನಿರಂತರ ವಿದ್ಯುತ್ ಪೂರೈಕೆ.ತುರ್ತು ವೈದ್ಯಕೀಯ ಸೇವಾ ಸೌಲಭ್ಯ,ಅ್ಯಂಬುಲೆನ್ಸ್ ಹಾಗೂ ವಿಶಿಷ್ಟ ವಿನ್ಯಾಸದ ಕಿಟಕಿಗಳನ್ನು ಹೊಂದಿದೆ.ಇದಲ್ಲದೆ.ಹೊನಲು ಬೆಳಕಿನ ಟೆನ್ನಿಸ್ ಕೋರ್ಟ್,ಒಳಾಂಗಣ ಬ್ಯಾಡ್ಮಿಂಟನ್ ಕೋರ್ಟ್,ಸ್ವಾಶ್ ಕೋರ್ಟ್,ಬಾಸ್ಕೆಟ್ ಬಾಲ್ ರಿಂಗ್, ಬಿಲಿಯರ್ಡ್ಸ್, ಕೇರಂ,ಟೇಬಲ್ ಟೆನ್ನಿಸ್,ಸ್ಪಾ,ಯೋಗ ಕೇಂದ್ರ,ಜಿಮ್,ಗಾಲ್ಪ್ ,ಈಜುಕೊಳ,ಸಭೆ ಸಮಾರಂಭದ ಸಭಾಂಗಣ,ಸಿನಿಮಾ ಥಿಯೇಟರ್,ಜಾಗಿಂಗ್ ಮತ್ತು ಸ್ಕೇಟಿಂಗ್ ಟ್ರಾಕ್,ಸೂಪರ್ ಮಾರ್ಕೆಟ್,ಕಾಫಿ ಶಾಫ್,100ಸಿಸಿ ಟಿ.ವಿ ಯೊಂದಿಗೆ ಸುಸಜ್ಜಿತ ಸರಕ್ಷತಾ ವ್ಯವಸ್ಥೆ 20,000ಚದರ ಅಡಿ ವಿಸ್ತೀರ್ಣದ ಹಸಿರು ಹುಲ್ಲುಹಾಸಿನ ಹೊರಾಂಗಣದ ವಿಶಾಲ ಪ್ರಾಂಗಣ ವನ್ನು ಹೊಂದಿದೆ ಎಂದು ಯೋಜನೆಯ ಪ್ರವರ್ತಕ ಶಶಿಕಿರಣ್ ಶೆಟ್ಟಿ ತಿಳಿಸಿದ್ದಾರೆ.
ಉದ್ಘಾಟನಾ ಸಮಾರಂಭದ ಅಂಗವಾಗಿ ಗ್ರಾಮೀಣ ಕರಕುಶಲ ಕರ್ಮಿಗಳ ಕೈಚಳಕದ ಪ್ರದರ್ಶನ,ಕೇರಳದ ಶಾಸ್ತ್ರೀಯ ಚೆಂಡೆವಾದಕರ ತಂಡ,ಕೊಂಬು.ಕಹಳೆ,ಸ್ಯಾಕ್ಸೋಪೋನ್ ವಾದ್ಯ ತಂಡ ಪ್ರಾಚೀನ ತುಳುನಾಡಿನ ಗೃಹಬಳಕೆಯ ವಸ್ತುಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.







