300ಕ್ಕೂ ಅಧಿಕ ಸಂಯೋಜಿತ ಔಷಧಿಗಳ ನಿಷೇಧ
ಹೊಸದಿಲ್ಲಿ,ಮಾ.12: ಕೇಂದ್ರ ಸರಕಾರದ ಅನುಮತಿಯಿಲ್ಲದೆ ಮಾರಾಟವಾಗುತ್ತಿದ್ದ 300ಕ್ಕೂ ಅಧಿಕ ಸಂಯೋಜಿತ ಔಷಧಿಗಳ ತಯಾರಿಕೆ ಮತ್ತು ಮಾರಾಟವನ್ನು ಸರಕಾರವು ನಿಷೇಧಿಸಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಕೆ.ಎಲ್.ಶರ್ಮಾ ಅವರು ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಹಲವಾರು ಔಷಧಿಗಳಿಗಿಂತ ಒಂದೇ ಔಷಧಿಯ ಸೇವನೆ ಸುಲಭ, ಹೀಗಾಗಿ ರೋಗಿಗಳು ಔಷಧಿಗಳನ್ನು ಕ್ರಮಬದ್ಧವಾಗಿ ಸೇವಿಸುವಂತಾಗಲು ಅವರಿಗೆ ನಿಗದಿತ ಪ್ರಮಾಣದ ಸಂಯೋಜಿತ ಔಷಧಿಗಳನ್ನು ನೀಡುವ ಪರಿಪಾಠ ವಿಶ್ವಾದ್ಯಂತ ಚಾಲ್ತಿಯಲ್ಲಿದೆ. ಆದರೆ ಭಾರತದಲ್ಲಿ ಔಷಧಿ ಕಾನೂನುಗಳ ಅಸಮರ್ಪಕ ಅನುಷ್ಠಾನದಿಂದಾಗಿ ಆಯಾ ರಾಜ್ಯಗಳ ನಿಯಂತ್ರಕರ ಅನುಮತಿ ಪಡೆದುಕೊಂಡು ಇಂತಹ ನೂರಾರು ಸಂಯೋಜಿತ ಔಷಧಿಗಳು ಮಾರಾಟವಾಗುತ್ತಿವೆ.
2014ರಲ್ಲಿ ದೇಶದಲ್ಲಿ ಮಾರಾಟಗೊಂಡ ಔಷಧಿಗಳ ಪೈಕಿ ಸುಮಾರು ಅರ್ಧದಷ್ಟು ಈ ಮಾದರಿಯ ಔಷಧಿಗಳೇ ಆಗಿವೆ.
Next Story





