ಇಂದಿನ ಕಾರ್ಯಕ್ರಮ
ವೃಕ್ಷ ರಕ್ಷ-ವಿಶ್ವ ರಕ್ಷ: ವೃಕ್ಷ ರಕ್ಷ-ವಿಶ್ವ ರಕ್ಷ ಯೋಜನೆಗೆ ಚಾಲನೆ ಹಾಗೂ ನಾಗರಿಕ ಜಾಗೃತಿ ಸಮಾವೇಶ. ಬೆಳಗ್ಗೆ 8:30ಕ್ಕೆ ರಥಬೀದಿಯಲ್ಲಿ ನವರತ್ನ ರಥದಲ್ಲಿ ವೃಕ್ಷೋತ್ಸವ, 9:30ಕ್ಕೆ ಉದ್ಘಾಟನಾ ಕಾರ್ಯಕ್ರಮ. ಸ್ಥಳ: ಶ್ರೀಕೃಷ್ಣ ಮಠದ ರಾಜಾಂಗಣ, ಉಡುಪಿ. ಮಿನಿ ಮ್ಯಾರಥಾನ್: ಉಡುಪಿ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ ವತಿಯಿಂದ ಉಡುಪಿ ಜಿಲ್ಲಾಮಟ್ಟದ ಪುರುಷ ಮತ್ತು ಮಹಿಳೆಯರ ಮಿನಿ ಮ್ಯಾರಥಾನ್-2016. ಉದ್ಘಾಟನೆ ಮುಂಜಾನೆ 6:30ಕ್ಕೆ. ಬಹುಮಾನ ವಿತರಣೆ ಬೆಳಗ್ಗೆ 8ಕ್ಕೆ. ಸ್ಥಳ: ಮಣಿಪಾಲ ಟೈಗರ್ ಸರ್ಕಲ್‌ನಿಂದ ಅಜ್ಜರಕಾಡು ಮೈದಾನದವರೆಗೆ ಉಡುಪಿ. ಮಹಿಳಾ ದಿನಾಚರಣೆ: ಉಡುಪಿ ಮಹಿಳಾ ಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಮಹಿಳಾ ದಿನಾಚರಣೆ. ಸಮಯ: ಅಪರಾಹ್ನ 2:30ಕ್ಕೆ. ಸ್ಥಳ: ಸಂಘದ ಸಭಾಭವನ, ಬಸ್ ನಿಲ್ದಾಣ ಬಳಿ ಉಡುಪಿ. ಸ್ನೇಹ ಸೌರಭ: ಇಂಟರ್‌ನ್ಯಾಶನಲ್ ಅಸೋಸಿಯೇಶನ್ ಆಫ್ ಲಯನ್ಸ್ ಕ್ಲಬ್ ಜಿಲ್ಲೆ 317ಸಿ ವತಿಯಿಂದ ವಲಯ ಸಮ್ಮೇಳನ ‘ಸ್ನೇಹ ಸೌರಭ’. ಸಮಯ: ಸಂಜೆ 4:30ರಿಂದ. ಸ್ಥಳ: ಎಎಲ್‌ಎನ್ ರಾವ್ ಸ್ಮಾರಕ ಪುರಭವನ, ಅಜ್ಜರಕಾಡು ಉಡುಪಿ.
ನಮ್ಮ ಅಂಗಡಿ: ಮಣಿಪಾಲ ಸ್ಕೂಲ್ ಆಫ್ ಕಮ್ಯುನಿಕೇಷನ್‌ನ ವತಿಯಿಂದ ಕನ್ಯಾನದ ನಮ್ಮ ಭೂಮಿ ಸಹಯೋಗದೊಂದಿಗೆ ಮಕ್ಕಳು ತಯಾರಿಸಿದ ಕೈ ಮಗ್ಗದ, ಕರಕುಶಲ ಹಾಗೂ ಸಾವಯವ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ‘ನಮ್ಮ ಅಂಗಡಿ’. ಸಮಯ: ಬೆಳಗ್ಗೆ 10ರಿಂದ ಸಂಜೆ 7ರವರೆಗೆ. ಸ್ಥಳ: ಸ್ಕೂಲ್ ಆಫ್ ಕಮ್ಯುನಿಕೇಷನ್ ಆವರಣ, ಪ್ರೆಸ್ ಕಾರ್ನರ್ ಮಣಿಪಾಲ.
ತರಬೇತಿ ಕಾರ್ಯಕ್ರಮ: ಬೆಂಗಳೂರಿನ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಲಾ ಅಕಾಡಮಿಯ ಸಹಯೋಗದಲ್ಲಿ ಉಡುಪಿ, ಕುಂದಾಪುರ ಹಾಗೂ ಕಾರ್ಕಳ ವಕೀಲರ ಸಂಘ ಮತ್ತು ವೈಕುಂಠ ಬಾಳಿಗಾ ಕಾನೂನು ಕಾಲೇಜುಗಳ ವತಿಯಿಂದ ಯುವ ವಕೀಲರಿಗೆ ತರಬೇತಿ. ಸ್ಥಳ: ವೈಕುಂಠ ಬಾಳಿಗಾ ಕಾನೂನು ಕಾಲೇಜು ಸಭಾಂಗಣ, ಕುಂಜಿಬೆಟ್ಟು ಉಡುಪಿ.
ಪೇಜಾವರಶ್ರೀ ಪಂಚಮ ಪರ್ಯಾಯ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಂಜೆ 5ಕ್ಕೆ ಚಂದ್ರಶಾಲೆ ಪುರಾಣ ವಿದ್ವಾನ್ ಆನಂದತೀರ್ಥ ಉಪಾಧ್ಯಾಯ ಸಗ್ರಿ
ಯವರಿಂದ ಪ್ರವಚನ, 5:45ಕ್ಕೆ ರಾಜಾಂಗಣದಲ್ಲಿ ಶಿವಮೊಗ್ಗದ ವಿದ್ವಾನ್ ಆಯನೂರು ಮಧು ಸೂದನಾ ಚಾರ್‌ರಿಂದ ಉಪನ್ಯಾಸ 6:30ಕ್ಕೆ ಶ್ರೀವಿಶ್ವೇಶತೀರ್ಥರಿಂದ ಅನುಗ್ರಹ ಸಂದೇಶ. 7ಕ್ಕೆ ಸುವರ್ಣ ರಥೋತ್ಸವ. 7ರಿಂದ ರಾಜಾಂಗಣದಲ್ಲಿ ಬೆಂಗಳೂರಿನ ಕೆ.ಎನ್.ಸೀತಾಲಕ್ಷ್ಮೀ ಮತ್ತು ಬಳಗದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ.
ಚಾಲನೆ: ರಾಜೀವ್‌ಗಾಂಧಿ ನೇಶನಲ್ ಅಕಾಡಮಿ ಆಫ್ ಪೊಲಿಟಿಕಲ್ ಎಜುಕೇಶನ್ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ಮೊಬೈಲ್ ಪೋನ್‌ನಲ್ಲಿ ಸಿನೆಮಾ ನಿರ್ಮಾಣ ಸ್ಪರ್ಧೆ ಉದ್ಘಾಟನೆ. ಸಮಯ: ಅಪರಾಹ್ನ 3:30ರಿಂದ. ಸ್ಥಳ: ರಾಜೀವ್‌ಗಾಂಧಿ ನೇಶನಲ್ ಅಕಾಡಮಿ ಆಫ್ ಪೊಲಿಟಿಕಲ್ ಎಜುಕೇಶನ್, ತೆಂಕಎರ್ಮಾಳ್, ಪಡುಬಿದ್ರಿ.
ಗಣ್ಯರ ಸಭೆ: ಜಮಾಅತೆ ಇಸ್ಲಾಮಿ ಹಿಂದ್ ಕಾಪು ವತಿಯಿಂದ ‘ಕುರ್‌ಆನ್ ಎಲ್ಲರಿಗಾಗಿ’ ಗಣ್ಯರ ಸಭೆ.ಸಮಯ: ಸಂಜೆ 7ಕ್ಕೆ. ಸ್ಥಳ: ಜೆಸಿಐ ಸಭಾಂಗಣ, ಕಾಪುು ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ, ಕಾಪು.
ಫಾದರ್ ಮುಲ್ಲರ್ ಸಿಮ್ಯುಲೇಶನ್ ಮತ್ತು ಕೌಶಲ್ಯ ಕೇಂದ್ರ ಉದ್ಘಾಟನೆ, ಸಮಯ ಬೆಳಗ್ಗೆ 9:30, ಸ್ಥಳ-ಫಾ.ಮುಲ್ಲರ್ ಆಸ್ಪತ್ರೆ, ಕಂಕನಾಡಿ, ಮಂಗಳೂರು.
ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ಪದವಿ ಪ್ರದಾನ ಸಮಾರಂಭ,ಸಮಯ ಸಂಜೆ 5 ಗಂಟೆ, ಸ್ಥಳ, ಫಾದರ್ ಮುಲ್ಲರ್ ಕ್ರೀಡಾಂಗಣ, ಕಂಕನಾಡಿ, ಮಂಗಳೂರು
ಕೆಥೊಲಿಕ್ ಸಭಾ ಕಾರ್ಯಕರ್ತರ ಸಮಾವೇಶ, ಬೆಳಗ್ಗೆ 9:30, ಸ್ಥಳ-ಬೋಂದೆಲ್ ಚರ್ಚ್, ಮಂಗಳೂರು
ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪರಿಶಿಷ್ಟ ಜಾತಿ-ಪಂಗಡದ ಕುಂದುಕೊರತೆ ಸಭೆ, ಸಮಯ ಬೆಳಗ್ಗೆ 10:30, ಸ್ಥಳ: ಪೊಲೀಸ್ ಆಯುಕ್ತರ ಕಚೇರಿ, ಮಂಗಳೂರು
ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ಪದವಿ ಪ್ರದಾನ ಸಮಾರಂಭ,ಸಮಯ ಸಂಜೆ 5 ಗಂಟೆ, ಸ್ಥಳ, ಫಾದರ್ ಮುಲ್ಲರ್ ಕ್ರೀಡಾಂಗಣ, ಕಂಕನಾಡಿ, ಮಂಗಳೂರು.







