ಮಾ.31: ‘ಟಿಪ್ಸ್’ನಿಂದ ಮಾದರಿ ಪ್ರವೇಶ ಪರೀಕ್ಷೆ
ಮಂಗಳೂರು, ಮಾ.12: ಟಿಪ್ಸ್ ಟು ಇನ್‌ಸ್ಪಾಯರ್ ಸಂಸ್ಥೆಯ ವತಿಯಿಂದ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಕ್ಷೇತ್ರಗಳಿಗೆ ಸಂಬಂಧಿಸಿದ ಮಾದರಿ ಪ್ರವೇಶ ಪರೀಕ್ಷೆಯು ಮಾ.31ರಂದು ನಡೆಸಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥ ಮುಹಮ್ಮದ್ ಯಾಸಿರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು. ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಆಕಾಂಕ್ಷಿಗಳು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವಲ್ಲಿ ಈ ಮಾದರಿ ಪರೀಕ್ಷೆಗಳು ಸಹಕಾರಿಯಾಗಲಿವೆ. ಟಿಪ್ಸ್‌ನ ನೋಂದಣಿ ಆನ್‌ಲೈನ್ ಹಾಗೂ ಎಸ್ಸೆಮ್ಮೆಸ್ ಮೂಲಕ ಮಾಡಬಹುದು. ಆನ್‌ಲೈನ್ ನೋಂದಣಿಗೆ ಡಿಡಿಡಿ.ಠಿಜಿಛ್ಡಿಞ.ಟ್ಟಜ ವೆಬ್‌ಸೈಟ್‌ನಲ್ಲಿ ಮಾಹಿತಿ ಪಡೆಯಬಹುದು. ಪ್ರಶ್ನೆಗಳ ಉತ್ತರ ಹಾಗೂ ವಿವರ ಎ.1ರಂದು ವೆಬ್‌ಸೈಟ್‌ನಲ್ಲಿ ನೀಡಲಾಗುತ್ತದೆ. ಎ.15ರಂದು ರ್ಯಾಂಕ್ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ವಿವಿಧ ಕ್ಷೇತ್ರಗಳ ಪ್ರಥಮ ರ್ಯಾಂಕ್ ಗಳಿಸಿದವರಿಗೆ ಚಿನ್ನದ ಪದಕ ನೀಡಲಾಗುವುದು. ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಿಟ್‌ಗಳನ್ನು ಮೊದಲ 10 ರ್ಯಾಂಕ್ ಪಡೆದವರಿಗೆ ನೀಡಲಾಗುವುದು ಎಂದು ಅವರುಹೇಳಿದರು. ಸುದ್ದಿಗೋಷ್ಠಿಯಲ್ಲಿ ಅಬ್ದುಲ್ಲತೀಫ್, ವಿದ್ಯಾರ್ಥಿ ಅಶ್ರತ್, ಹಮೀದ್ ಖಾದರ್, ಸಿ.ಅಬ್ದುಲ್ಲತೀಫ್ ಉಪಸ್ಥಿತರಿದ್ದರು.





