Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಕೊರತೆಗಳ ನಡುವೆಯೂ ಇಷ್ಟವಾಗುವ...

ಕೊರತೆಗಳ ನಡುವೆಯೂ ಇಷ್ಟವಾಗುವ ಗಯ್ಯಾಳಿಗಳು

ವಾರ್ತಾಭಾರತಿವಾರ್ತಾಭಾರತಿ12 March 2016 11:17 PM IST
share
ಕೊರತೆಗಳ ನಡುವೆಯೂ ಇಷ್ಟವಾಗುವ ಗಯ್ಯಾಳಿಗಳು

ಖ್ಯಾತ  ಸಾಹಿತಿ ಪೂರ್ಣಚಂದ್ರತೇಜಸ್ವಿ ಅವರ ಮೂಲಕಥೆಯನ್ನು ಆಧರಿಸಿದ ಕಿರಗೂರಿನ ಗಯ್ಯಿಳಿಗಳು ಹಲವು ಇತಿಮಿತಿಗಳ ನಡುವೆಯೂ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ನಿರ್ದೇಶಕಿ ಸುಮನಾ ಡಿ.ಕಿತ್ತೂರು ಮೂಲಕಥೆಗೆ ಅಪಚಾರವಾಗದಂತೆ, ಒಂದು ಅಚ್ಚುಕಟ್ಟಾದ ಚಿತ್ರವನ್ನು ನೀಡುವಲ್ಲಿ ಬಹುಮಟ್ಟಿಗೆ ಯಶಸ್ವಿಯಾಗಿದ್ದಾರೆ. ನಿಜಕ್ಕೂ ಹೇಳುವುದಾದರೆ ‘ಕಿರಗೂರಿನ ಗಯ್ಯಾಳಿಗಳು’ ಈವರೆಗೆ ಸುಮನಾ ನಿರ್ದೇಶಿಸಿದ ಚಿತ್ರಗಳಲ್ಲೇ ಅತ್ಯುತ್ತಮವಾದುದೆಂದರೆ ತಪ್ಪಾಗಲಾರದು. ಖ್ಯಾತ ಲೇಖಕರ ಕತೆಯನ್ನು ಸಿನೆಮಾಗೆ ಅಳವಡಿಸಿಕೊಳ್ಳುವುದೆಂದರೆ ಹಗ್ಗದ ಮೇಲಿನ ನಡಿಗೆಯಂತೆ. ಮೂಲಕಥೆಯನ್ನು ತಿಳಿದಿರುವ ಪ್ರೇಕ್ಷಕನು ಅದರ ಜೊತೆ ಸಿನೆಮಾದ ಪಾತ್ರಗಳು, ಸನ್ನಿವೇಶಗಳನ್ನು ಹೋಲಿಕೆಯನ್ನುಮಾಡುತ್ತಾನೆ. ಹೀಗಾಗಿ ಮೂಲಕಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಿರ್ದೇಶಕನ ಮೇಲಿರುತ್ತದೆ. ನಿರ್ದೇಶಕಿ ಸುಮನಾ ಎಲ್ಲಿಯೂ ಆ ಕೊರತೆ ಕಂಡುಬರದಂತೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ.
   
  ಕಿರಗೂರು, ಮಲೆನಾಡ ಸೆರಗಲ್ಲಿರುವ ಗ್ರಾಮ. ಅಲ್ಲಿ ಹೆಣ್ಣು ಮಕ್ಕಳದ್ದೇ ಕಾರುಬಾರು. ಗಂಡಸರು ಇದ್ದರೂ ಹೆಣ್ಣು ಮಕ್ಕಳದೇ ಮೇಲುಗೈ. ಗಂಡಸರು ಮಾಡುವಂತಹ ಕೆಲಸವನ್ನು ತಾವು ಮಾಡುತ್ತಾ, ಅವರಿಗಿಂತ ತಾವು ಯಾವುದೇ ರೀತಿಯಲ್ಲಿಕಮ್ಮಿಯಿಲ್ಲವೆಂದು ತೋರಿಸಿಕೊಳ್ಳುವ ಈ ಹೆಂಗಸರಿಗೆ, ಊರವರು ಅಕ್ಕರೆಯಿಂದ ಗಯ್ಯಿಳಿಗಳಂದೆ ಹೆಸರಿಟ್ಟರುತ್ತಾರೆ. ಕೆಲಸಕ್ಕೂ ಸೈ, ಜಗಳಕ್ಕೂ ಸೈ ಎನಿಸಿಕೊಳ್ಳುವ ಈ ಹೆಂಗಸರಿಗೆ ಪರಸ್ಪರ ಅನ್ಯೋನ್ಯತೆಯೇ ಅತಿ ದೊಡ್ಡ ಆಸ್ತಿ. ಬಲಿಷ್ಠ ಒಕ್ಕಲಿಗ ಸಮುದಾಯ ಹಾಗೂ ದಲಿತರು ಅನ್ಯೋನ್ಯತೆಯಿಂದಲೇ ಬಾಳುತ್ತಿರುವ ಊರದು. ಮೊದಲೇ ಹೇಳಿದಂತೆ ಇಲ್ಲಿ ಎರಡೂ ಸಮುದಾಯಗಳ ಹೆಂಗಸರದ್ದೇ ಮೇಲುಗೈ. ದಾನಮ್ಮ (ಶ್ವೇತಾ ಶ್ರೀವಾತ್ಸವ್), ಕಾಳಿ(ಸುಕೃತಾ ವಾಗ್ಲೆ),ರುದ್ರಿ (ಮಾನಸಾ ಜೋಷಿ),ನಾಗಮ್ಮ (ಸೋನುಗೌಡ) ತಮ್ಮ ಗಂಡ,ಮಕ್ಕಳೊಂದಿಗೆ ಇದ್ದುದರಲ್ಲೇ ನೆಮ್ಮದಿಪಟ್ಟುಕೊಂಡು ಬಾಳುತ್ತಿರುತ್ತಾರೆ.ಈ ಮಹಿಳೆಯರಿಗಿರುವ ಒಂದೇ ದುಃಖ ಎಂದರೆ, ಅವರ ಗಂಡಂದಿರು ದಿನವಿಡೀ ಸೇಂದಿ ಅಂಗಡಿಯಲ್ಲಿ ಕುಳಿತು ಸಮಯ ಕಳೆಯುವುದು ಹಾಗೂ ಕೆಲಸ ಮಾಡದೇ, ಕುಡಿದು ಹಾಳಾಗುತ್ತಿದ್ದಾರೆಂಬುದು. ಈ ನಡುವೆ ಒಂದೇ ಮನೆಯ ಮಕ್ಕಳಂತಿರುವ ಹಳ್ಳಿಯ ಜನರ ಮಧ್ಯೆ ಮೇಲುಜಾತಿ, ಕೀಳುಜಾತಿ ಎಂಬ ಭೇದವನ್ನು ತಂದಿಡಲು ಗ್ರಾಮ ಸೇವಕ ಶಂಕರಪ್ಪ (ಅಚ್ಯುತ ಕುಮಾರ್) ಹಾಗೂ ಮಂತ್ರವಾದಿ ಹೆಗಡೆ (ಶರತ್ ಲೋಹಿತಾಶ್ವ) ಚಿತಾವಣೆ ಹೂಡುತ್ತಾರೆ. ಇವರಿಬ್ಬರ ಸಂಚಿನಿಂದಾಗಿ ಪ್ರಶಾಂತ ಕಿರಗೂರು ಗ್ರಾಮವು ದ್ವೇಷದ ಕುಲುಮೆಯಲ್ಲಿ ಬೇಯತೊಡಗುತ್ತದೆ. ಈ ಸಮಸ್ಯೆಯನ್ನು ಕಿರಗೂರಿನ ಗಯ್ಯೆಳಿಗಳು ಹೇಗೆ ಸರಿಪಡಿಸುತ್ತಾರೆಂಬುದನ್ನು ತಿಳಿಯಲು ತಪ್ಪದೆ ಚಿತ್ರವನ್ನು ನೋಡಿ...
     ದಾನಮ್ಮನ ಪಾತ್ರದಲ್ಲಿ ಶ್ವೇತಾ ಶ್ರೀವಾತ್ಸವ್ ನಟನೆ ದಿ ಬೆಸ್ಟ್.ಮೂಲಕತೆಯ ಪಾತ್ರಕ್ಕೆ ಅವರು ತನ್ನ ಅದ್ಭುತ ಅಭಿನಯದ ಮೂಲಕ ಜೀವತುಂಬಿದ್ದಾರೆ. ಇಡೀ ಚಿತ್ರದಲ್ಲಿ ಅವರೇ ತುಂಬಿಕೊಂಡಿದ್ದಾರೆ. ಹಾಗೆಯೇ ಸುಕೃತಾ ವಾಗ್ಲೆ , ಮಾನಸಾ ಜೋಶಿ ಕೂಡಾ ಉತ್ತಮವಾಗಿ ನಟಿಸಿದ್ದಾರೆ. ಇಂತಿ ನಿನ್ನ ಪ್ರೀತಿಯ ಖ್ಯಾತಿಯ ಸೋನುಗೌಡ ಅವರು ಕಾಳೇಗೌಡನ ಪತ್ನಿಯಾಗಿ ಸಿಂಪಲ್ ಹಾಗೂ ಸೈಲೆಂಟ್ ಆಗಿ ನಟಿಸಿದ್ದಾರೆ. ಕಾಳೇಗೌಡನ ಪಾತ್ರದಲ್ಲಿ ಕಿಶೋರ್ ಅಭಿನಯ ನಿರೀಕ್ಷಿತ ಮಟ್ಟದಲ್ಲಿಲ್ಲ. ಕಾಳೇಗೌಡನ ಪ್ರೇಯಸಿಯಾಗಿ ಕಾರುಣ್ಯ ರಾಮ್ ಚೊಕ್ಕವಾಗಿ ನಟಿಸಿದ್ದಾರೆ. ಸುಂದರ್ ಹಾಗೂ ಇತರ ಪೋಷಕ ನಟರ ಅಭಿನಯ ಪರವಾಗಿಲ್ಲ. ಶಂಕರಪ್ಪ ಪಾತ್ರದಲ್ಲಿ ಅಚ್ಯುತ್ ಕುಮಾರ್ ಹಾಗೂ ಮಂತ್ರವಾದಿ ಹೆಗಡೆ ಪಾತ್ರದಲ್ಲಿ ಲೋಹಿತಾಶ್ವ ಅಭಿನಯ ಇಡೀ ಚಿತ್ರದ ಹೈಲೈಟ್. ಮರಕಡಿಯುವ ಸೋನ್ಸ್ ಪಾತ್ರದಲ್ಲಿ ಲೂಸ್ ಮಾದ ಅಭಿನಯ ದಿ ಬೆಸ್ಟ್. ಡಾ.ಅಪ್ಪಣ್ಣನ ಪಾತ್ರದಲ್ಲಿ ಎಸ್.ನಾರಾಯಣ್ ಗಮನಸೆಳೆಯುತ್ತಾರೆ.
  ಗ್ರಾಮೀಣ ಪ್ರದೇಶವೊಂದರಲ್ಲಿ ಗಂಡಸರ ದಬ್ಬಾಳಿಕೆ,ಉಢಾಳತನ ಮತ್ತು ಮಹಿಳೆಯರ ಸಂಯಮ,ಶಕ್ತಿ ಹಾಗೂ ಕುಡಿತದ ವಿನಾಶ,ಅಧಿಕಾರಶಾಹಿಯ ದರ್ಪ ಇವೆಲ್ಲವನ್ನೂ ನಿರ್ದೇಶಕಿ ಒಟ್ಟಿಗೆ ತೋರಿಸುವ ಪ್ರಯತ್ನ ಮಾಡಿದ್ದಾರೆ. ಉಳುಕು ಬಿಡಿಸಲು ಹೋಗುವ ಕಾಳೇಗೌಡ ತಾನೇ ಉಳುಕಿಸಿಕೊಳ್ಳುವುದು ಸೇರಿದಂತೆ ವಿವಿಧ ಹಾಸ್ಯ ಸನ್ನಿವೇಶಗಳು ಚೆನ್ನಾಗಿ ಮೂಡಿಬಂದಿದೆ.
   
 ಆದರೆ ಸಾಧುಕೋಕಿಲಾ ಅವರ ಹಿನ್ನೆಲೆ ಸಂಗೀತ ಹಾಗೂ ಮನೋಹರ್ ಜೋಶಿ ಛಾಯಾಗ್ರಹಣ ಪರಿಣಾಮಕಾರಿಯಾಗಿಲ್ಲ. ಚಿತ್ರದುದ್ದಕ್ಕೂ ಬೈಗುಳದ ಪದಗಳನ್ನು ಬಳಸಲಾಗಿರುವುದರಿಂದ ಸಂಭಾಷಣೆಗಳನ್ನು ಹಲವೆಡೆ ಮ್ಯೂಟ್ ಮಾಡಿರುವುದು ಪ್ರೇಕ್ಷಕರಿಗೆ ಕಿರಿಕಿರಿಯೆನಿಸುತ್ತದೆ. ಪ್ರದೀಪ್ ಸಂಕಲನ ಇನ್ನಷ್ಟು ಹರಿತವಾಗಿರಬೇಕಿತ್ತು. ವಿಪರೀತ ವೇಗದಿಂದ ಓಡುವ ಕಥೆಯು ಚಿತ್ರಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ. ಏನಿದ್ದರೂ ‘ಕಿರಗೂರಿನ ಗಯ್ಯೆಳಿಗಳು’ ಬಹಳ ಸಮಯದ ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ಬಂದಿರುವ ಸಾಹಿತ್ಯ ಕೃತಿಯನ್ನು ಆಧರಿಸಿ ಒಂದು ಉತ್ತಮ ಸಿನೆಮಾ ಎಂಬುದರಲ್ಲಿ ಸಂಶಯವಿಲ್ಲ. ತೇಜಸ್ವಿ ಅವರ ಕಥೆಯನ್ನು ಓದಿದವರು ಚಿತ್ರದ ಬಗ್ಗೆ ಇರಿಸಿಕೊಂಡ ನಿರೀಕ್ಷೆಗೆ ಸುಮನಾ ಕಿತ್ತೂರ್ ಮೋಸ ಮಾಡಿಲ್ಲ. 2 ಗಂಟೆ 20 ನಿಮಿಷಗಳ ಅವಧಿಯಲ್ಲಿ ಇಡೀ ಹಳ್ಳಿಯ ಚಿತ್ರಣವನ್ನು ಪರಿಣಾಮಕಾರಿಯಾಗಿ ತೆರೆಯ ಮೇಲೆ ಮೂಡಿಸಲು ಅವರು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ. ಒಂದು ಲೆಕ್ಕದಲ್ಲಿ ಸುಮನಾ ಕಿತ್ತೂರ್ ಅವರೇ ಇಡೀ ಚಿತ್ರದ ಹಿರೋಯಿನ್. ಕಿರಗೂರಿನ ಗಯ್ಯಾಳಿಗಳು ಮುಂಬರುವ ದಿನಗಳಲ್ಲಿ ಈ ನಿರ್ದೇಶಕಿಯಿಂದ ಇನ್ನಷ್ಟು ಉತ್ತಮ ಚಿತ್ರಗಳ ನಿರೀಕ್ಷೆಯನ್ನು ಮೂಡಿಸುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X