ಸೂಕ್ತ ದಾಖಲೆಗಳಿದ್ದರೆ ತನಿಖಾ ವರದಿಗಳು ಯಶಸ್ವಿ: ಎಸ್ಪಿ ಅಣ್ಣಾಮಲೈ

ಮೂಡುಬಿದಿರೆ, ಮಾ.12: ತನಿಖಾ ವರದಿಗಾರರು ಮತ್ತು ದಕ್ಷ ಪೊಲೀಸ್ ಅಧಿಕಾರಿಗಳು ಸಮಾಜದಲ್ಲಿರುವ ಭ್ರಷ್ಟಾಚಾರದಂತಹ ಕಂಟಕಗಳನ್ನು ನಿವಾರಣೆ ಮಾಡಲು ಸಾಧ್ಯವಿದೆ. ವರದಿಗೆ ಸಂಬಂಧಿಸಿದ ಸೂಕ್ತ ದಾಖಲೆ, ಸ್ವರಕ್ಷೆ, ಕಾನೂನಿನ ಚೌಕಟ್ಟಿನಲ್ಲಿ ಮಾಡುವ ಕಾರ್ಯವೈಖರಿಯಿಂದ ತನಿಖಾ ವರದಿ ಯಶಸ್ವಿಯಾಗುತ್ತದೆ ಎಂದು ಉಡುಪಿ ಎಸ್ಪಿ ಕೆ.ಅಣ್ಣಾಮಲೈ ಅಭಿಪ್ರಾಯಪಟ್ಟರು. ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ನಡೆದ ‘ಆಳ್ವಾಸ್ ಮೀಡಿಯಾ ಬಝ್’ ರಾಷ್ಟ್ರೀಯ ಮಾಧ್ಯಮ ಉತ್ಸವದಲ್ಲಿ ಶನಿವಾರದಂದು ‘ತನಿಖಾ ವರದಿಗಾರಿಕೆ’ ಕುರಿತು ಅವರು ಮಾತನಾಡುತ್ತಿದ್ದರು.
ದಕ್ಷ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಉತ್ತಮ ತನಿಖಾ ವರದಿಗಾರರಿಗೆ ಸಮಾಜದ ಸ್ವಾಸ್ಥ್ಯ ಕಾಪಾಡುವ ಉದ್ದೇಶವಿರುತ್ತದೆ. ಆದರೆ ಕೆಲವೊಮ್ಮೆ ಕಾನೂನಾತ್ಮಕ ರೀತಿಯಲ್ಲಿ ತನಿಖಾ ವರದಿಗಳು ಸೋಲು ಕಾಣುತ್ತವೆ ಎಂದರು.
ಸುವರ್ಣ ಸುದ್ದಿವಾಹಿನಿಯ ತನಿಖಾ ವರದಿಗಾರ್ತಿ ವಿಜಯಲಕ್ಷ್ಮೀ ಶಿಬರೂರು ಮಾತನಾಡಿ, ಪತ್ರಿಕಾರಂಗದಲ್ಲಿ ಇನ್ನು ಕೂಡಾ ತನಿಖಾ ವರದಿಗಾರಿಕೆ ಹೆಚ್ಚು ಮಹತ್ವವನ್ನು ಪಡೆದುಕೊಂಡಿಲ್ಲ ಎಂದು ಅಭಿಪ್ರಾಯಪಟ್ಟರು.ಟಿವಿ9 ಸುದ್ದಿವಾಹಿನಿಯ ಕ್ರೈಂ ವರದಿಗಾರ ಸುನೀಲ್ ಧರ್ಮಸ್ಥಳ ಮಾತನಾಡಿದರು. ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ.ವೌಲ್ಯಾ ಜೀವನ್ ರಾಮ್ ಸ್ವಾಗತಿಸಿದರು. ಜನರು ಜಾಗೃತಗೊಂಡಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಮಾಡಲು ಸಾಧ್ಯ. ಸ್ವಾರ್ಥರಹಿತ ತನಿಖಾ ವರದಿಗಾರಿಕೆಯಿಂದ ಅವ್ಯವಹಾರದ ನೈಜ್ಯ ಮುಖವನ್ನು ಬಯಲಿಗೆಳೆಯಲು ಸಾಧ್ಯ. ವೌಢ್ಯಗಳನ್ನು ಕೂಡ ತನಿಖಾ ವರದಿಗಾರರು ಬಯಲಿಗೆಳೆಯಬೇಕು. -ವಿಜಯಲಕ್ಷ್ಮೀ ಶಿಬರೂರು, ಪತ್ರಕರ್ತೆ







