ಮಲ್ಯಗೆ ದೇವೇಗೌಡ ಬೆಂಬಲ

ಬೆಂಗಳೂರು, ಮಾ.12: ಕನ್ನಡದ ನೆಲದಲ್ಲಿ ಹುಟ್ಟಿದ ಕುಟುಂಬಕ್ಕೆ ಸೇರಿದ ಉದ್ಯಮಿ ವಿಜಯ ಮಲ್ಯ ಅವರನ್ನು ರಾಜ್ಯಸಭೆಗೆ ತಮ್ಮ ಪಕ್ಷದಿಂದ ಆಯ್ಕೆ ಮಾಡಿದರಲ್ಲಿ ತಪ್ಪೇನಿದೆ ಎಂದು ತೀಕ್ಷ್ಣವಾಗಿ ಪ್ರಶ್ನಿಸಿರುವ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಲ್ಯ ಅವರಿಂದ ಕೆಲ ತಪ್ಪುಗಳು ಆಗಿರಬಹುದು. ಆದರೆ, ಅವರಬಗ್ಗೆ ಬೇಕಾಬಿಟ್ಟಿ ಹೇಳಿಕೆ ಸರಿಯಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
ಶನಿವಾರ ಪದ್ಮನಾಭ ನಗರದಲ್ಲಿನ ತನ್ನ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಯ ಕರ್ನಾಟಕದ ಮಣ್ಣಿನ ಮಗ. ತನ್ನ ಮೇಲಿರುವ ಆರೋಪವನ್ನು ಕಾನೂನು ಪ್ರಕಾರ ಎದುರಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಅವರ ಕುರಿತಂತೆ ಸಂಸತ್ತಿನಲ್ಲಿ ಚರ್ಚೆ ಸರಿಯಲ್ಲ. ಉದ್ಯಮಿ ವಿಜಯ ಮಲ್ಯರಲ್ಲಿ ಸಾವಿರಾರು ಕೋಟಿ ರೂ. ಬೆಲೆಬಾಳುವ ಆಸ್ತಿಗಳಿವೆ. ಸರಕಾರ ಈ ಕುರಿತು ಕ್ರಮ ಜರಗಿಸಬೇಕು ಎಂದು ಹೇಳಿದರು.
....
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಹಾಗೆಂದು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದರೆ ರಾಜಕೀಯ ನಿವೃತ್ತಿ ಎಂದರ್ಥವಲ್ಲ. ಜೆಡಿಎಸ್ ಸಾರಥ್ಯ ವಹಿಸಿಕೊಳ್ಳುವ ಮೂಲಕ ಪಕ್ಷದ ಸಂಘಟನೆ ಮಾಡುವೆ.
- ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ





