ಹಳೆಯ ಪ್ರಕರಣಗಳ ಮೇಲೆ ಬೆಳಕು ಚೆಲ್ಲಲು ವಾರ್ಷಿಕ ಬುಲೆಟಿನ್: ಮೋದಿ ಇಂಗಿತ
ಪಾಟ್ನಾ ಹೈಕೋರ್ಟ್ ಶತಮಾನೋತ್ಸವ

ಹೊಸದಿಲ್ಲಿ, ಮಾ.12: ಕಾರ್ಯಾಚರಣೆಯಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿ ಬಾರ್, ಬೆಂಚ್ ಹಾಗೂ ನ್ಯಾಯಾಲಯಗಳನ್ನು ತಂತ್ರಜ್ಞಾನ ಸಮರ್ಥವಾಗಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.
ಶನಿವಾರ ಪಾಟ್ನಾ ಹೈಕೋರ್ಟ್‌ನ ಶತಮಾನೋತ್ಸವದ ಸಮಾರೋಪ ಸಮಾರಂಭ ದಲ್ಲಿ ಅವರು ಮಾತನಾಡುತ್ತಿದ್ದರು.
ದೇಶದಲ್ಲಿ ಬಾಕಿಯುಳಿದಿರುವ ಪ್ರಕರಣಗಳ ಕುರಿತು ಸೂಕ್ಷ್ಮತೆ ಸೃಷ್ಟಿಸಲು ಸಹಾಯವಾಗುವಂತೆ ನ್ಯಾಯಾಲಯಗಳು ವಿಚಾರಣೆ ನಡೆಸಿದ ಅತ್ಯಂತ ಹಳೆಯ ಪ್ರಕರಣಗಳ ಮೇಲೆ ಬೆಳಕು ಚೆಲ್ಲಲು ನ್ಯಾಯಾಲಯಗಳು ವಾರ್ಷಿಕ ಬುಲೆ ಟಿನ್ ಒಂದನ್ನು ಹೊರತರಬೇಕೆಂಬ ವಿನೂತನ ಆಲೋಚನೆಯೊಂದನ್ನು ಪ್ರಧಾನಿ ಮೋದಿ ಮುಂದಿರಿಸಿದರು.
ಇದು ಪ್ರಕರಣಗಳ ಬಾಕಿಯುಳಿಯುವಿಕೆಯ ಕುರಿತು ಏನನ್ನಾದರೂ ಮಾಡಲು ಇತರರಿಗೆ ಸ್ಫೂರ್ತಿ ನೀಡಬಹುದು. ಬಾಕಿಯುಳಿಯು ವಿಕೆಯ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡಬಹುದೆಂದು ಅವರು ಅಭಿ ಪ್ರಾಯಿಸಿದರು. ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನದ ಒಳಪ್ರವೇಶದ ಕುರಿತು ಮಾತನಾಡಿದ ಮೋದಿ, ಈ ಮೊದಲು ಕಾನೂನು ಕ್ಷೇತ್ರದಲ್ಲಿ ಸಂಶೋಧನೆ ಮಾಡುವುದಕ್ಕಾಗಿ ಅಪಾರ ಸಮಯವನ್ನು ವ್ಯಯಿಸಲಾಗಿದೆ.
ಆದರೆ ಈಗ, ಕೆಲವೇ ಸಮಯದಲ್ಲಿ ಯಾವುದನ್ನೇ ಆದರೂ ಗೂಗಲ್‌ನ ಮೂಲಕ ಪಡೆಯಲು ಸಾಧ್ಯವಾಗಿದೆ ಎಂದರು.
ಈಗ ನಮಗೆ ಹಿಂದೆ ಲಭ್ಯವಿಲ್ಲದುದು ದೊರಕಿದೆ. ಅದು ತಂತ್ರಜ್ಞಾನದ ಶಕ್ತಿ. ತಾಂತ್ರಿಕ ಚಟುವಟಿಕೆಗಳನ್ನು ಬಳಸಿ, ಡಿಜಿಟಲ್ ತಂತ್ರಜ್ಞಾನದ ಮೂಲಕ ಬಾರ್, ಬೆಂಚ್ ಹಾಗೂ ಕೋರ್ಟ್‌ಗಳ ಕಾರ್ಯಾಚರಣೆಯನ್ನು ಎಷ್ಟಾದರೂ ತಂತ್ರಜ್ಞಾನ ಸಮರ್ಥವಾಗಿಸಬಹುದು ಹಾಗೂ ತೀರ್ಪು ಹಾಗೂ ವಾದಗಳ ಗುಣಮಟ್ಟ ಸುಧಾರಿಸಲು ಸಹಾಯ ಪಡೆಯಬಹುದೆಂದು ಪ್ರಧಾನಿ ಅಭಿಪ್ರಾಯಿಸಿದರು.
ಕಳೆದ ಬಿಹಾರ ಚುನಾವಣೆಯ ವೇಳೆ ಪರಸ್ಪರ ವಾಗ್ದಾನಗಳನ್ನು ಬಿಟ್ಟಿದ್ದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್‌ರೊಂದಿಗೆ ಮೋದಿ ವೇದಿಕೆ ಹಂಚಿಕೊಂಡಿದ್ದರು.
ಪಾಟ್ನಾ ಹೈಕೋರ್ಟ್ ಕಳೆದ 100 ವರ್ಷಗಳಲ್ಲಿ ಹೊಸ ಎತ್ತರಕ್ಕೇರಿದೆ. ಮುಂದಿನ ವರ್ಷಗಳಲ್ಲೂ ಉತ್ತಮ ಅಂಶಗಳನ್ನು ಮುಂದಕ್ಕೊಯ್ಯಬೇಕೆಂದು ಆಶಿಸುತ್ತೇನೆ. ಈ ಹೈಕೋರ್ಟ್ ಕಳೆದ ಶತಮಾನದಲ್ಲಿ ಮಾಡಿರುವ ಉತ್ತಮ ಕೆಲಸಗಳನ್ನು ನೆನಪಿಸಿಕೊಳ್ಳಲು ಇದು ಸಮಯವಾದರೂ, ಮುಂದಿನ ಶತಮಾನಕ್ಕೆ ಬಲಿಷ್ಠ ಅಡಿಪಾಯ ಹಾಕುವುದಕ್ಕೂ ಇದು ಸಮಯವಾಗಿದೆಯೆಂದು ಪ್ರಧಾನಿ ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಗೆ ಶುಭ ಹಾರೈಸಿದ ಅವರು, ಮುಂದಿನ ದಿನಗಳಲ್ಲಿ ದೇಶವು ಹೈಕೋರ್ಟ್‌ನಿಂದ ಬಹಳಷ್ಟನ್ನು ಪಡೆಯಲಿ ಎಂದರು.







