ಪಿಯುಸಿ ಪರೀಕ್ಷೆ: ದ.ಕ.-318, ಉಡುಪಿ-136 ವಿದ್ಯಾರ್ಥಿಗಳು ಗೈರು
ಮಂಗಳೂರು, ಮಾ.12: ಇಂದು ನಡೆದ ದ್ವಿತೀಯ ಪಿಯುಸಿ ಇತಿಹಾಸ ಮತ್ತು ಗಣಕವಿಜ್ಞಾನ ಪರೀಕ್ಷೆಯಲ್ಲಿ 318 ಮಂದಿ ವಿದ್ಯಾರ್ಥಿ ಗಳು ಗೈರು ಹಾಜ ರಾಗಿದ್ದಾರೆ. ಈ ಎರಡೂ ಪರೀಕ್ಷೆ ಗಳಲ್ಲಿ ಒಟ್ಟು 18,748 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಾಗಿತ್ತು.
ಇತಿಹಾಸ ವಿಷಯದಲ್ಲಿ ಪರೀಕ್ಷೆ ಬರೆಯಬೇಕಾಗಿದ್ದ 13,097 ವಿದ್ಯಾರ್ಥಿಗಳ ಪೈಕಿ 12,819 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 278 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಹಾಗೆಯೇ ಗಣಕವಿಜ್ಞಾನ ಪರೀಕ್ಷೆಗೆ ನೋಂದಾಯಿಸಿದ್ದ 5,651 ವಿದ್ಯಾರ್ಥಿಗಳಲ್ಲಿ 5,611 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರೆ, 40 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಉಡುಪಿ: ಜಿಲ್ಲೆಯ 29 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿರುವ ದ್ವಿತೀಯ ಪಿಯುಸಿ ಪರೀಕ್ಷೆಯ ಎರಡನೆ ದಿನವಾದ ಇಂದಿನ ಎರಡು ಪರೀಕ್ಷೆಗಳಿಗೆ 136 ವಿದ್ಯಾರ್ಥಿಗಳು ಗೈರುಹಾಜರಿದ್ದಾರೆ ಎಂದು ಜಿಲ್ಲಾ ಪ.ಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಬಿ.ನಾಯಕ್ ತಿಳಿಸಿದ್ದಾರೆ.
ಇತಿಹಾಸ ಪರೀಕ್ಷೆಗೆ ಒಟ್ಟು 7,025 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದು, ಈ ಪೈಕಿ 6,892 ಮಂದಿ ಪರೀಕ್ಷೆ ಬರೆದು 133 ಮಂದಿ ಗೈರುಹಾಜರಾಗಿದ್ದಾರೆ. ಇಲೆಕ್ಟ್ರಾನಿಕ್ಸ್ ಪರೀಕ್ಷೆಗೆ ನೋಂದಾಯಿತ 2,645 ವಿದ್ಯಾರ್ಥಿಗಳಲ್ಲಿ 2,642 ಮಂದಿ ಪರೀ ಕ್ಷೆಗೆ ಹಾಜರಾಗಿ ಮೂವರು ಗೈರುಹಾಜರಾಗಿದ್ದಾರೆ ಎಂದವರು ತಿಳಿಸಿದ್ದಾರೆ.







