ಎಚ್1ಬಿ ವೀಸಾ ಕುರಿತು ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಭಾರತದ ಕಳವಳ

ಹೊಸದಿಲ್ಲಿ, ಮಾ.12: ವೃತ್ತಿಪರರ ವಲಸೇತರ ಎಚ್1ಬಿ ವೀಸಾ ರದ್ದತಿಯ ಕುರಿತು ಅಮೆರಿಕದ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ರ ಹೇಳಿಕೆಯ ಕುರಿತು ಕಳವಳದ ಧ್ವನಿಯೆತ್ತಿರುವ ಭಾರತ, ಅಂತಹ ಕ್ರಮವು ರಫ್ತು ಆಧಾರಿತ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು ಎಂದಿದೆ.
ಕಳೆದ ಚರ್ಚೆಯೊಂದರಲ್ಲಿ ಡೊನಾಲ್ಡ್ ಟ್ರಂಪ್, ‘‘ಎಚ್1ಬಿ, ಅದು ಯಾವುದೇ ಇರಲಿ, ನಾನದನ್ನು ಉಪಯೋಗಿಸುತ್ತೇನೆ. ಆದರೆ, ಅದನ್ನು ಮೆಚ್ಚುವುದಿಲ್ಲ. ನಾನು ಎಲ್ಲ ಎಚ್1ಬಿಗಳನ್ನು ರದ್ದುಗೊಳಿಸಬೇಕೆಂದು ಬಯಸುತ್ತಿದ್ದೇನೆ’’ ಎಂದು ಹೇಳಿದ್ದರು. ಅದು, ರಫ್ತು ಆಧಾರಿತ ಬೆಳವಣಿಗೆಯು ಮುಂದುವರಿಯುವಿಕೆಗೆ ಅತ್ಯಂತ ಚಿಂತೆಯ ವಿಷಯವಾಗಿದೆಯೆಂದು ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಹ್ಮಣ್ಯನ್ ತಿಳಿಸಿದ್ದಾರೆ.
ಅವರು, ಭಾರತ ಹಾಗೂ ಅಂತಾ ರಾಷ್ಟ್ರೀಯ ಹಣಕಾಸು ನಿಧಿಗಳು (ಐಎಂಎಫ್) ಜಂಟಿಯಾಗಿ ಆತಿಥೇಯತ್ವ ವಹಿಸಿದ್ದ ‘ಮುಂದುವರಿಯುತ್ತಿರುವ ಏಷ್ಯಾ’ ಸಮ್ಮೇಳನದಲ್ಲಿ ಈ ಕಳವಳ ವ್ಯಕ್ತಪಡಿಸಿದ್ದಾರೆ.
ವಿಶೇಷ ಹುದ್ದೆಗಳಿಗಾಗಿ, ನಿರ್ದಿಷ್ಟ ಸಮಯದವರೆಗೆ ವಿದೇಶಿ ಉದ್ಯೋಗಿ ಗಳನ್ನು ನೇಮಿಸಿಕೊಳ್ಳಲು ಅಮೆರಿಕದ ಉದ್ಯೋಗದಾತರಿಗೆ ಅವಕಾಶ ನೀಡುವ ಎಚ್1ಬಿ ವೀಸಾ ಕಾರ್ಯಕ್ರಮವನ್ನು ಕೊನೆಗೊಳಿಸಲೇಬೇಕೆಂದು ರಿಪಬ್ಲಿಕನ್ ಪಕ್ಷ ಮುಂಚೂಣಿ ಅಭ್ಯರ್ಥಿ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಹೇಳಿದ್ದರು.
ಸೇವೆಗಳನ್ನು ಆಧಾರಿತ ರಫ್ತು ಮಾದರಿಯು ಭಾರತವನ್ನು ಶೇ.8-10 ತಾಳಿಕೆಯ ಬೆಳವಣಿಗೆಯತ್ತ ಒಯ್ಯ ಬಹುದು. ಆದರೆ, ಎಚ್1ಬಿಯ ಕುರಿತ ಅವರ ಹೇಳಿಕೆ ಚಿಂತಾಜನಕವೆಂದು ಸುಬ್ರಹ್ಮಣ್ಯನ್ ಅಭಿಪ್ರಾಯಿಸಿದ್ದಾರೆ.
ನಾವು ದೇಶೀಯ ಆಧಾರಿತ ಉತ್ಪಾದನೆಗಿಂತ ಹೆಚ್ಚು ಸೇವೆಗಳ ರಫ್ತು ಆಧಾರಿತ ಬೆಳವಣಿಗೆಯನ್ನು ಪಡೆದರೆ, ಅದರ ರಾಜಕೀಯವು ಜಪಾನ್‌ನ ರಾಜ ಕೀಯಕ್ಕಿಂತ ಅತ್ಯಂತ ಭಿನ್ನವಾಗಬಹುದು. ಸೇವೆಗಳ ರಫ್ತು ಆಧಾರಿತ ಬೆಳವಣಿಗೆ ಹೆಚ್ಚು ಸಾಧಿತವಾದರೆ, ಅದರ ರಾಜಕೀಯ ತೀರಾ ಭಿನ್ನವಾಗಲಿದೆಯೆಂದು ಅವರು ಹೇಳಿದ್ದಾರೆ.
ಮಧ್ಯಮಾವಧಿಯಲ್ಲಿ ಶೇ.8-10 ಬೆಳವಣಿಗೆ ಸಾಧಿಸಲು ರಫ್ತಿನಲ್ಲಿ ಕ್ಷಿಪ್ರ ಬೆಳವಣಿಗೆ ಅತ್ಯಂತ ಪ್ರಮುಖವಾಗಿರುತ್ತದೆ. ಅದು ಉತ್ಪಾದನೆ ಹಾಗೂ ಸೇವೆಗಳ ಮಿಶ್ರಣದಿಂದಷ್ಟೇ ಸಾಧ್ಯವಾಗಬಹುದೆಂದು ಸುಬ್ರಹ್ಮಣ್ಯನ್ ಒತ್ತಿ ಹೇಳಿದ್ದಾರೆ.
ಶೇ.8-10 ಬೆಳವಣಿಗೆ ಸಾಧಿಸಬೇಕಾದರೆ ಕ್ಷಿಪ್ರವಾಗಿ ರಫ್ತು ನಡೆಸಬೇಕು ಎಂಬ ಚಾರಿತ್ರಿಕ ಅನುಭವದಿಂದ ಭಾರತವು ದೂರ ಸರಿಯಲಾಗದು. ಮಧ್ಯಮಾವಧಿಯಲ್ಲಿ ತಾಳಿಕೆಯ ಶೇ.8-10 ಬೆಳವಣಿಗೆ ಸಾಧಿಸಲು ನಾವು ದೇಶೀಯ ಮಾರು ಕಟ್ಟೆಯನ್ನು ಬಳಸಬಹುದೆನ್ನುವ ಅಭಿಪ್ರಾಯವು ಆ ಮಾದರಿಯ ಇತಿ ಹಾಸಕ್ಕೆ ವಿರುದ್ಧವಾದುದೆಂಬುದು ತನ್ನ ಅನಿಸಿಕೆಯಾಗಿದೆಯೆಂದು ಅವರು ತಿಳಿಸಿದ್ದಾರೆ.
ತಂತ್ರಜ್ಞಾನದ ಸಂಭವಗಳು ಇತ್ಯಾದಿ ಕಾರಣಗಳಿಂದಾಗಿ ಉತ್ಪಾದನೆಯೊಂದೇ ಸ್ವಲ್ಪ ಕಷ್ಟವಾಗಬಹುದು. ಅದು ವಿಶಿಷ್ಟ ಮಾದರಿಯಾಗಬೇಕೆಂದು ಸುಬ್ರಹ್ಮಣ್ಯನ್ ಹೇಳಿದ್ದಾರೆ.





