ಮೈಸೂರು: ಪೇ ಆಂಡ್ ಪಾರ್ಕ್‌ಗೆ ವರ್ತಕರ ವಿರೋಧ
ಮೈಸೂರು, ಮಾ. 12: ಮೈಸೂರು ನಗರದ ಹೃದಯಭಾಗದಲ್ಲಿ ನಗರಪಾಲಿಕೆಯು ಜಾರಿಗೆ ತರಲು ಹೊರಟಿರುವ ಪೇ ಆ್ಯಂಡ್ ಪಾರ್ಕ್ ವ್ಯವಸ್ಥೆಗೆ ವಿರೋಧ ಮುಂದುವರಿದಿದೆ. ಕಳೆದ 15 ದಿನಗಳಿಂದಲೂ ಈ ಕುರಿತು ವಿವಿಧ ಸಂಘ-ಸಂಸ್ಥೆ ಮತ್ತು ಜನಪ್ರತಿನಿಗಳು ನಿರಂತರ ಜನಾಭಿಪ್ರಾಯ ಸಂಗ್ರಹಿಸುತ್ತಿದ್ದು ಸಾರ್ವಜನಿಕರಿಂದಲೂ ವ್ಯಾಪಕ ವಿರೋಧ ವ್ಯಕ್ತವಾಗಿದೆ.
.¨ಈ ಸಂಬಂಧ ಶನಿವಾರ ಮೈಸೂರು ರಕ್ಷಣಾ ವೇದಿಕೆಯ ವತಿಯಿಂದ ‘ ಪೇ ಆ್ಯಂಡ್ ಪಾರ್ಕ್’ ಸಾಧಕ-ಬಾಧಕಗಳ ಕುರಿತು ಸಭೆ ನಡೆಸಲಾಯಿತು. ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿನ ಅಂಗಡಿ ಮಾಲಕರು, ವರ್ತಕರು ಮೊದಲಾದವರು ಸಭೆಯಲ್ಲಿ ಹಾಜರಿದ್ದರು. ತ್ತೀಚೆಗೆ ಮೇಯರ್ ಬಿ.ಎಲ್. ಬೈರಪ್ಪ ಅವರು, ನಗರದ ಡಿ.ದೇವರಾಜ ಅರಸು ರಸ್ತೆ, ಸಯ್ಯೆಜಿರಾವ್ ರಸ್ತೆ, ಅಶೋಕಾ ರಸ್ತೆ, ಶಿವರಾಮಪೇಟೆಗಳಲ್ಲಿ ಪೇ ಆ್ಯಂಡ್ ಪಾರ್ಕ್ ಜಾರಿಗೆ ತರುವುದಾಗಿ ಘೋಷಿಸಿದ್ದರು. ಕುರಿತು ಮಾತನಾಡಿದ ಮೈಸೂರು ರಕ್ಷಣಾ ವೇದಿಕೆಯ ಅಧ್ಯಕ್ಷ ಮೈ.ಕಾ. ಪ್ರೇಮ್‌ಕುಮಾರ್, ನಗರಪಾಲಿಕೆ ಯಾವುದೇ ನಿರ್ಧಾರ ಕೈಗೊಳ್ಳುವಾಗ ವೈಜ್ಞಾನಿಕವಾಗಿ ಚಿಂತಿಸಬೇಕು. ರಸ್ತೆಗಳಲ್ಲಿ ಅಲ್ಲಿನ ವರ್ತಕರೇ ವಾಹನ ನಿಲ್ಲಿಸುತ್ತಾರೆ. ಆದ್ದರಿಂದ ಸಾರ್ವಜನಿಕರಿಗೆ ಅನನುಕೂಲ ಉಂಟಾಗಲಿದೆ ಎಂಬ ವಾದವನ್ನು ತಳ್ಳಿ ಹಾಕಿದರು.ೇವರಾಜ ಅರಸು ರಸ್ತೆಯ ವರ್ತಕರಿಗೆ ಡಾ.ಅಂಬೇಡ್ಕರ್ ಭವನದ ಸ್ಝ್ಛ್ಝೆರ್‌ನಲ್ಲಿ, ಸಯ್ಯೆಜಿರಾವ್ ರಸ್ತೆಯ ವರ್ತಕರಿಗೆ ಮಕ್ಕಾಜಿ ಚೌಕ ಪಾರ್ಕಿಂಗ್ ಸ್ಲಾಟ್‌ನಲ್ಲಿ, ಅಶೋಕಾ ರಸ್ತೆಯ ವರ್ತಕರಿಗೆ ಪೀಪಲ್ಸ್ ಪಾರ್ಕ್‌ನಲ್ಲಿ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಿ, ಸಾರ್ವಜನಿಕರಿಗೆ ಈ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಬೇಕೆಂದು ಕೋರಿದರು.
ನಗರಪಾಲಿಕೆ ಸದಸ್ಯ ಪ್ರಶಾಂತ್‌ಗೌಡ ಮಾತನಾಡಿ, ‘ಪೇ ಆ್ಯಂಡ್ ಪಾರ್ಕ್’ ಕುರಿತು ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಚರ್ಚಿಸದೆಯೇ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ಕೌನ್ಸಿಲ್ ಸಭೆಯಲ್ಲಿ ಇಲ್ಲಿನ ವರ್ತಕರು ಮತ್ತು ಸಾರ್ವಜನಿಕರ ಅಭಿಪ್ರಾಯಗಳನ್ನು ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ರೇವಣ್ಣ, ವೇದಿಕೆಯ ಉಪಾಧ್ಯಕ್ಷ ಕುಮಾರ್‌ಗೌಡ, ಕಾರ್ಯದರ್ಶಿ ರಾಕೇಶ್ ಭಟ್, ಪ್ರಮೋದ್‌ಗೌಡ, ಗುರುರಾಜ್ ಶೆಟ್ಟಿ ಹಾಜರಿದ್ದರು.







