ಅರುಣ್ ಜೇಟ್ಲಿಯನ್ನು ವಿತ್ತ ಸಚಿವ ಸ್ಥಾನದಿಂದ ಕಿತ್ತೊಗೆಯಿರಿ: ಬಿಜೆಪಿ ಶಾಸಕ ಜಗನ್

ಹೊಸದಿಲ್ಲಿ: ವಿತ್ತ ಸಚಿವ ಅರುಣ್ ಜೇಟ್ಲಿಯವರನ್ನು ವಿತ್ತ ಸಚಿವ ಸ್ಥಾನದಿಂದ ಕಿತ್ತೊಗೆಯುವಂತೆ ಉತ್ತರ ಆಗ್ರಾದ ಬಿಜೆಪಿ ಶಾಸಕ ಜಗನ್ ಪ್ರಸಾದ್ ಗಾರ್ಗ್ ಒತ್ತಾಯಿಸಿದ್ದಾರೆ.
ಅರುಣ್ ಜೇಟ್ಲಿಯವರು ಲೋಕಸಭೆಗೆ ನೇರವಾಗಿ ಆಯ್ಕೆಯಾಗಿ ಬಂದವರಲ್ಲ. ಬದಲಾಗಿ ಅವರು ಹಿಂಬಾಗಿಲ ಮೂಲಕ ಬಂದಿದ್ದಾರೆ. ಆದ್ದರಿಂದ ಅವರು ವಿತ್ತ ಸಚಿವ ಸ್ಥಾನಕ್ಕೆ ಅರ್ಹರಲ್ಲ ಎಂದು ಜಗನ್ ಟೀಕಿಸಿದ್ದಾರೆ.
ಸಚಿವ ಅರುಣ್ ಜೇಟ್ಲಿಯವರಿಗೆ ಜನರ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ಜನರ ಭಾವನೆಗಳನ್ನು ತಿಳಿಯಲು ಅವರಿಗೆ ಸಾಧ್ಯವಾಗಿಲ್ಲ. ಅವರು ವ್ಯಾವಹಾರಿಕವಾಗಿಯೂ ಚಾಣಾಕ್ಷರಲ್ಲ. ಅದರಿಂದಾಗಿ ಜೇಟ್ಲಿಯನ್ನು ವಿತ್ತ ಸಚಿವ ಸ್ಥಾನದಿಂದ ಕಿತ್ತೊಗೆಯುವಂತೆ ಪ್ರಸಾದ್ ಆಗ್ರಹಿಸಿದ್ದಾರೆ.
ಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್WATCH: BJP MLA Jagan Prasad Garg controversial remark on Finance Minister Arun Jaitley in Agra.https://t.co/8g40fpTy1q
— ANI (@ANI_news) March 12, 2016
Next Story







