ಉಪ್ಪಿನಂಗಡಿ: ವಾಟ್ಸಾಪ್ ನಲ್ಲಿ ಮುಸ್ತಫಾ ಕೆಂಪಿ ವಿರುದ್ಧ ಅವಹೇಳನ ; ಪೊಲೀಸರಿಗೆ ದೂರು

ಉಪ್ಪಿನಂಗಡಿ: ಸಾಮಾಜಿಕ ಜಾಲತಾಣವಾದ ವಾಟ್ಸ್ ಆಫ್‌ನಲ್ಲಿ ಉಪ್ಪಿನಂಗಡಿಯ ಉದ್ಯಮಿ, ಸಾಮಾಜಿಕ ಕಾರ್ಯಕರ್ತ ಹಾಜಿ ಮುಸ್ತಫಾ ಕೆಂಪಿ ಅವರ ವಿರುದ್ಧ ಅವಹೇಳಕಾರಿ ಬರಹಗಳು ಹರಿದಾಡುತ್ತಿದ್ದು, ಈ ಮೂಲಕ ತನ್ನ ತೇಜೋವಧೆಗೆ ಯತ್ನಿಸಲಾಗಿದೆ. ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉಪ್ಪಿನಂಗಡಿ ಪೊಲೀಸರಿಗೆ ಅವರು ದೂರು ನೀಡಿದ್ದಾರೆ.
ನಾನು ಎಸ್ಕೆಎಸ್ಸೆಸ್ಸೆಫ್ ಸಂಘಟನೆಯಲ್ಲಿ ಸಕ್ರೀಯವಾಗಿದ್ದು, ಇತ್ತೀಚೆಗೆ ಎಸ್ಕೆಎಸ್ಸೆಸ್ಸೆಫ್‌ನ ರಾಜಾಧ್ಯಕ್ಷರಾಗಿ ಅನೀಸ್ ಕೌಸರಿ ಎಂಬವರ ನೇಮಕವಾಗಿತ್ತು. ಈ ಬಗ್ಗೆ ಸಂಘಟನೆಯ ಹಲವು ಕಾರ್ಯಕರ್ತರ ನಡುವೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ಈ ನಡುವೆ ‘ವೀಕ್ಷಕ’ ಎಂಬ ವಾಟ್ಸ್‌ಅಫ್ ಗ್ರೂಪಿನಲ್ಲಿ ‘ಅನೀಸ್ ಕೌಸರಿಗೆ ಕೆಂಪಿಯ ಬೆಂಬಲ’ ಎಂಬ ತಲೆಬರಹದಡಿಯಲ್ಲಿ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಲಾಗಿದೆ. ಇದರಿಂದ ನನ್ನ ಘನತೆಗೆ ಕುಂದುಂಟಾಗಿದ್ದು, ನನ್ನ ಸ್ಥಾನಮಾನಕ್ಕೆ ಧಕ್ಕೆಯುಂಟಾಗಿದೆ. ಆದ್ದರಿಂದ ಇಂತವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.





