ಮಂಗಳೂರು: ಜೆಪ್ಪಿನಮೊಗರಿನಲ್ಲಿ ಉಚಿತ ವೈದ್ಯಕೀಯ ಶಿಬಿರ
ಮಂಗಳೂರು,ಮಾ.13:ಜೆಪ್ಪಿನಮೊಗರು ಕಾಂಗ್ರೆಸ್ ವಾರ್ಡು ಸಮಿತಿ ಹಾಗೂ ಯುವ ಕಾಂಗ್ರೆಸ್ ಸಮಿತಿಯ ಅಶ್ರಯದಲ್ಲಿ ಇಂದು ನಡೆದ ಉಚಿತ ವೈದ್ಯಕೀಯ ಶಿಬಿರವನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜಾ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಒಬ್ಬ ವ್ಯಕ್ತಿ ಕುಟುಂಬದಲ್ಲಿ ಅನಾರೋಗ್ಯ ಹೊಂದಿದ್ದರೆ ಇದೆ ಕುಟುಂಬವು ಮಾನಸಿಕವಾಗಿ ಕುಗ್ಗಿ ಹೋಗುತ್ತದೆ. ಇಂತಹ ವೈದ್ಯಕೀಯ ಶಿಬಿರಗಳನ್ನು ನಡೆಸುವುದರಿಂದ ಸಮಾಜದಲ್ಲಿ ಅರೋಗ್ಯದ ಬಗ್ಗೆ ಅರಿವು ಮೂಡಿಸಿದಂತಾಗುತ್ತದೆ ಎಂದು ಹೇಳಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಡಾ ಅಧ್ಯಕ್ಷ ಕೋಡಿಜಾಲ್ ಇಬ್ರಾಹೀಂರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಎ.ಜೆ.ವ್ಯೆದ್ಯಕೀಯ ಮಹಾ ವಿದ್ಯಾಲಯದ ವಿಭಾಗೀಯ ಮುಖ್ಯಸ್ದ ಡಾ.ಕವಿತಾ ಡಿ ಸೋಜಾ, ಎನ್.ಪಿ.ಮನೋರಾಜ್ , ಡಾ. ಶಫಿಲ್ ,ನಜೀರ್ ಬಜಾಲ್,ಭಾಸ್ಕರ್ ರಾವ್, ವಾಲ್ಟರ್ ಲೋಬೋ, ಶಶಿಕಾಂತ್ ಶೆಟ್ಟಿ, ವೇದಾವತಿ ಕೊಪ್ಪಳ ಉಪಸ್ಥಿತರಿದ್ದರು.
ಮಾಜಿ ಕಾರ್ಪೋರೇಟರ್ ಜೆ.ನಾಗೇಂದ್ರಕುಮಾರ್ ಸ್ವಾಗತಿಸಿದರು, ವಾರ್ಡ್ ಸಮಿತಿಯ ಪ್ರದಾನ ಕಾರ್ಯದರ್ಶಿ ನವೀನ್ ಸ್ಟೀವನ್ ವಂದಿಸಿದರು. ಸುಧಾಕರ್.ಜೆ ಕಾರ್ಯಕ್ರಮ ನಿರೂಪಿಸಿದರು.





