ಯಮನ್: ವಾಯು ದಾಳಿಯಲ್ಲಿ 17 ಬಂಡುಕೋರರ ಸಾವು

ಏಡನ್, ಮಾ. 13: ಯಮನ್‌ನ ದಕ್ಷಿಣದ ಬಂದರು ನಗರ ಏಡನ್‌ನ ಪ್ರಕ್ಷುಬ್ಧ ಜಿಲ್ಲೆಯೊಂದರಲ್ಲಿ ಶನಿವಾರ ರಾತ್ರಿ ನಡೆದ ವಾಯು ದಾಳಿಯಲ್ಲಿ ಕನಿಷ್ಠ 17 ಶಂಕಿತ ಅಲ್-ಖಾಯ್ದ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು, ಆಸ್ಪತ್ರೆಗಳು ಮತ್ತು ಭದ್ರತಾ ಅಧಿಕಾರಿಯೊಬ್ಬರು ರವಿವಾರ ಹೇಳಿದ್ದಾರೆ.
ಬಂಡುಕೋರರ ಭದ್ರಕೋಟೆ ಅಲ್-ಮನ್ಸೂರ ಜಿಲ್ಲೆಯಲ್ಲಿ ವಾಯು ದಾಳಿಗಳು ನಡೆದವು. ಕಳೆದ ವರ್ಷದ ಜುಲೈಯಲ್ಲಿ ಸೌದಿ ನೇತೃತ್ವದ ಮಿತ್ರ ಪಡೆಗಳು ಹೌದಿ ಬಂಡುಕೋರರಿಂದ ಏಡನ್ ನಗರವನ್ನು ಮರುವಶಪಡಿಸಿಕೊಂಡಂದಿನಿಂದ ಈ ಜಿಲ್ಲೆಯಲ್ಲಿ ಸ್ಥಳೀಯ ಭದ್ರತಾ ಸಿಬ್ಬಂದಿ ಮೇಲೆ ಪದೇ ಪದೇ ಆಕ್ರಮಗಳು ನಡೆಯುತ್ತಿದ್ದವು.
ದಾಳಿಯಲ್ಲಿ ಕನಿಷ್ಠ 20 ನಾಗರಿಕರು ಮತ್ತು ಬಂಡುಕೋರರು ಹಾಗೂ ಮೂವರು ಭದ್ರತಾ ಸಿಬ್ಬಂದಿಯೂ ಗಾಯಗೊಂಡಿದ್ದಾರೆ. ಅಲ್ಲಿ ಈಗಲೂ ಹೋರಾಟ ನಡೆಯುತ್ತಿದೆ ಎಂದು ವರದಿಯಾಗಿದೆ.
Next Story





