ನಾಶವಾಗಲಿದೆಯೇ ಅರಿಕ್ಕಾಡಿ ಕೋಟೆ?

ಕಾಸರಗೋಡು, ಮಾ.13: ಪ್ರಸಿದ್ದ ಆರಿಕ್ಕಾಡಿ ಕೋಟೆಯ ಸ್ಥಳವು ಖಾಸಗಿ ವ್ಯಕ್ತಿಗಳು ಅತಿಕ್ರಮಿಸಿಕೊಂಡಿದ್ದಾರೆ ಎಂಬ ವಿವಾದ ಕೆಲ ತಿಂಗಳ ಹಿಂದೆ ಸಾಕಷ್ಟು ಸುದ್ದಿ ಮಾಡಿತ್ತು. ಇದೀಗ ಈ ಕೋಟೆಯ ಸ್ಥಳದಲ್ಲಿನ ಗುಡ್ಡ ಅಗೆದು ಮಣ್ಣು ಸಾಗಾಟ ಮಾಡಲಾಗುತ್ತಿದೆ. ಈಗಾಗಲೇ 100 ಲೋಡ್‌ನಷ್ಟು ಮಣ್ಣು ಸಾಗಾಟ ಮಾಡಲಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪಕ್ಕ ಸುರಿಯಲಾಗುತ್ತಿದೆ. ಉಪ್ಪಳದಿಂದ ಕುಂಬಳೆ ತನಕ ಡಾಮರೀಕರಣದ ಬಳಿಕ ರಸ್ತೆ ಬದಿ ಮಣ್ಣು ಹಾಕಿ ಸಮತಟ್ಟುಗೊಳಿಸಲಾಗುತ್ತಿದೆ. ಸತತವಾಗಿ ಮಣ್ಣು ಅಗೆಯುತ್ತಿದ್ದರೂ ಕಂದಾಯ ಇಲಾಖೆ ಮೌನವಾಗಿದೆ. ಪ್ರಾಚ್ಯ ವಸ್ತು ಇಲಾಖೆ ಕೂಡಾ ಇತ್ತ ಗಮನ ಹರಿಸಿಲ್ಲ. ಇದರಿಂದ ಕೋಟೆಯ ಸ್ಥಳವೂ ನಾಶವಾಗುತ್ತ ಸಾಗುತ್ತಿದೆ. ಕೋಟೆ ಹೊಂದಿರುವ ಸ್ಥಳ ಖಾಸಗಿ ವ್ಯಕ್ತಿಗಳ ಪಾಲಾಗಿದೆ ಎಂಬ ಅಂಶವು ತಿಂಗಳುಗಳ ಹಿಂದೆ ಬೆಳಕಿಗೆ ಬಂದಿತ್ತು.
ಇದೀಗ ಸಮೀಪ ಮಣ್ಣು ಅಗೆಯಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಆರಿಕ್ಕಾಡಿ ಕೋಟೆ ಕೇವಲ ಹೆಸರಿಗೆ ಮಾತ್ರ ಸೀಮಿತವಾಗಲಿದೆಯೇ ಎಂಬ ಸಂದೇಹವೂ ಉಂಟಾಗಿದೆ.
Next Story





