ನೆಹರುನಗರ: ದ್ವಿಚಕ್ರ ವಾಹನ ಕಳವು
ಪುತ್ತೂರು, ಮಾ.13: ಪುತ್ತೂರು ತಾಲೂಕಿನ ನೆಹರುನಗರ ಅಜೇಯನಗರ ಸಮೀಪ ಮನೆಯ ಆವರಣದಲ್ಲಿದ್ದ ಹೋಂಡಾ ಆಕ್ಟೀವಾ ಡಿಯೋ ಕಳವಾಗಿರುವ ಕುರಿತು ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ನೆಹರುನಗರ ಅಜೇಯನಗರ ನಿವಾಸಿ ಶರತ್ ಎಂಬವರು ತಮ್ಮ ಮನೆಯ ಆವರಣದಲ್ಲಿ ಮಾ.11ರಂದು ರಾತ್ರಿ ನಿಲ್ಲಿಸಿದ್ದ ಹೋಂಡಾ ಆಕ್ಟೀವಾ ಡಿಯೋ (ಕೆ.ಎ.21 ಎಸ್ 5782) ಮಾ.12ರಂದು ಬೆಳಗ್ಗೆ ಕಳವಾಗಿರುವ ಕುರಿತು ಪುತ್ತೂರು ನಗರ ಠಾಣೆಗೆ ದೂರು ದಾಖಲಾಗಿದೆ.
Next Story





