Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ನಾನು ಬಿಜೆಪಿ ರಾಜ್ಯಾಧ್ಯಕ್ಷ...

ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಾಕಾಂಕ್ಷಿಯಲ್ಲ

ವಾರ್ತಾಭಾರತಿವಾರ್ತಾಭಾರತಿ13 March 2016 11:38 PM IST
share
ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಾಕಾಂಕ್ಷಿಯಲ್ಲ


- ನಳಿನ್ ಕುಮಾರ್ ಕಟೀಲು, ಸಂಸದ
     ರಾಷ್ಟ್ರೀಯ ಅಧ್ಯಕ್ಷರಾಗುವ ಆಸೆಯಿದ್ದರೆ ಅದಕ್ಕೆ ಮೋದಿ ಅವಕಾಶ ಕೊಡಲಿಕ್ಕಿಲ್ಲ.
---------------------
     ನರೇಂದ್ರ ಮೋದಿಯವರು ಭಾರತೀಯರಿಗೆ ದೇವರು ಕೊಟ್ಟ ವರ
- ಶಿವರಾಜ್ ಸಿಂಗ್ ಚೌವಾಣ್, ಮ.ಪ್ರ. ಮುಖ್ಯಮಂತ್ರಿ
     ವಧು ಎಲ್ಲಿದ್ದಾಳೆ?
---------------------
     ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯದಿಂದಾಗಿ ರಾಜ್ಯದಲ್ಲಿ ಮರಳಿನ ಸಮಸ್ಯೆ ತೀವ್ರವಾಗಿದೆ
- ಕೆ.ಎಸ್.ಈಶ್ವರಪ್ಪ, ವಿಪಕ್ಷ ನಾಯಕ.
     ತಮಗಂತೂ ಮರುಳಿನ ಸಮಸ್ಯೆ ತೀವ್ರವಾಗಿರುವುದು ಇಡೀ ರಾಜ್ಯಕ್ಕೆ ಗೊತ್ತಾಗಿ ಬಿಟ್ಟಿದೆ.
---------------------
     ರಾಹುಲ್ ಗಾಂಧಿಯನ್ನು ಸಹಿಸಿಕೊಂಡಿರುವ ಕಾಂಗ್ರೆಸ್ ಸಹಿಷ್ಣುತೆಯ ಪಕ್ಷ
- ಅನುಪಮ್ ಖೇರ್, ಬಾಲಿವುಡ್ ನಟ
     
ನಿಮ್ಮನ್ನು ಸಹಿಸಿಕೊಂಡಿರುವ ಬಾಲಿವುಡ್‌ನದ್ದು ಕಡಿಮೆ ಸಹಿಷ್ಣುತೆಯೇನೂ ಅಲ್ಲ.

---------------------
     ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುವವರಿಗೆ ಈ ದೇಶದಲ್ಲಿ ಜಾಗವಿಲ್ಲ
- ದಿಲೀಪ್ ಘೋಷ್, ಪ.ಬಂ. ಬಿಜೆಪಿ ಅಧ್ಯಕ್ಷ
     
ರವಿಶಂಕರ್ ಗುರೂಜಿಯನ್ನು ಮೊದಲು ಎಲ್ಲಿಗಾದರೂ ರವಾನಿಸಿ ಬಿಡಿ.

---------------------
     ಕನ್ಹಯ್ಯ ಹೀರೊ ಅಲ್ಲ. ದಾರಿ ತಪ್ಪಿದವ.
- ರಾಜೀವ್ ಪ್ರತಾಪ್ ರೂಡಿ, ಕೇಂದ್ರ ಸಚಿವ
     ನಿಮ್ಮ ದಾರಿ ಆರೆಸ್ಸೆಸ್ ಕಚೇರಿ ಕಡೆಗೆ ಎಂಬ ಕಾರಣಕ್ಕೆ ಉಳಿದವರೆಲ್ಲ ದಾರಿ ತಪ್ಪಿದವರೇ?
---------------------
     ಸಿಎಂ ಸಿದ್ದರಾಮಯ್ಯ ಪ್ರತಿಕ್ಷಣ ಬಣ್ಣ ಬದಲಿಸುವ ಊಸರವಳ್ಳಿ ಇದ್ದಂತೆ.
- ಶ್ರೀರಾಮುಲು, ಸಂಸದ
     
ನಕಲಿ ಬಣ್ಣ ಬಳಿದುಕೊಂಡ ನಿಮಗಿಂತ ವಾಸಿ.

---------------------
     ಮಹಿಳೆಯರು ದೇವರ ವಿಶೇಷ ವರ
- ನರೇಂದ್ರ ಮೋದಿ, ಪ್ರಧಾನಿ
     ತಮ್ಮ ವಧು ಜಶೋದಾದೇವಿಯನ್ನು ಈ ಕಾರಣಕ್ಕಾಗಿಯೇ ತಿರಸ್ಕರಿಸಿದಿರಾ?

......................................

    ಮಹಿಳೆಯರತ್ತ ಪುರುಷರ ದೃಷ್ಟಿಕೋನ ಬದಲಾಗಬೇಕು.
- ಶೋಭಾ ಕರಂದ್ಲಾಜೆ, ಸಂಸದೆ
     ಇದು ಯಡಿಯೂರಪ್ಪ ಅವರಿಗೂ ಅನ್ವಯವಾಗುತ್ತದೆಯೇ?
---------------------
     ನಮ್ಮ ವಿದ್ಯಾರ್ಥಿಗಳನ್ನು ದುಷ್ಟಶಕ್ತಿ ದುರುಪಯೋಗಪಡಿಸಿಕೊಳ್ಳುತ್ತಿದೆ.
- ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆಯ ಅಧ್ಯಕ್ಷ
     ಆ ದುಷ್ಟಶಕ್ತಿಗೆ ಗೋವಾದಲ್ಲಿ ನಿಷೇಧ ವಿಧಿಸಲಾಗಿದೆ.
---------------------
     ಈಶ್ವರಪ್ಪನಂತೆ ನನ್ನದೂ ಹರಿತವಾದ ನಾಲಿಗೆ.
- ಆಂಜನೇಯ, ಸಚಿವ
     
ಆಚಾರವಿಲ್ಲದ ನಾಲಗೆ ಆಗಬಾರದು ಅಷ್ಟೇ.

---------------------
     ದೇವಸ್ಥಾನಗಳಲ್ಲಿ ಜಾತ್ರೆ, ಮಸೀದಿಗಳಲ್ಲಿ ಉರೂಸ್ ಆಚರಿಸುವುದರಿಂದ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯ ಉಂಟಾಗುತ್ತದೆ
- ಅಭಯಚಂದ್ರ ಜೈನ್, ಸಚಿವ
     
ರಾಜಕಾರಣಿಗಳು ಅವಕಾಶಕೊಟ್ಟರೆ ಮಾತ್ರ.

---------------------
     ನಾನು ಎಲ್ಲವನ್ನು ಜನರಿಂದಲೇ ಕಲಿತಿದ್ದೇನೆ.
- ರಮ್ಯಾ, ಚಿತ್ರ ನಟಿ
     ಈಗ ಜನರಿಗೆ ಕಲಿಸುವುದಕ್ಕೆ ಹೊರಟಿದ್ದೀರಿ ಅಲ್ಲವೇ?
---------------------
     ದೇಶದಾದ್ಯಂತ ಚಿಂತಕರು, ಬುದ್ಧಿಜೀವಿಗಳು ಎಂಬ ಹೆಸರಿನಲ್ಲಿ ದೇಶದ್ರೋಹಿಗಳು ಒಂದಾಗುತ್ತಿದ್ದಾರೆ.
- ಸುನೀಲ್ ಕುಮಾರ್, ಮುಖ್ಯ ಸಚೇತಕ
     
ಎಲ್ಲ ಕಾಲದಲ್ಲೂ ಚಿಂತಕರು, ಬುದ್ಧಿಜೀವಿಗಳು ಪ್ರಭುತ್ವದ ಪಾಲಿಗೆ ಉಗ್ರಗಾಮಿಗಳಂತೆಯೇ ಕಂಡಿದ್ದಾರೆ.

---------------------
     ಪ್ರಪಂಚದ ನಾಗರಿಕತೆಗಳೆಲ್ಲವೂ ನದಿಯ ದಡದಲ್ಲೇ ಬೆಳೆದು ಬಂದಿದೆ.
- ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ
     ಹಾಗೆಂದು ನಿಮ್ಮ ಅನಾಗರಿಕತೆಯನ್ನು ನದಿ ದಡದಲ್ಲಿ ಪ್ರದರ್ಶಿಸುವುದು ಎಷ್ಟು ಸರಿ?
---------------------
     ಮುಖ್ಯಮಂತ್ರಿ ವಿರುದ್ಧ ಹೈಕಮಾಂಡ್‌ಗೆ ಚಾಡಿ ಹೇಳಿಲ್ಲ.
- ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ
     
ಬರೇ ಮನವಿಯಷ್ಟೇ ಕೊಟ್ಟಿದ್ದೀರಿ ಎಂದು ಕಾಣುತ್ತದೆ.

---------------------
     ನಾನು ಭಾರತೀಯ, ಅದೇ ನನ್ನ ಧರ್ಮ.
- ಸಲ್ಮಾನ್‌ಖಾನ್, ನಟ
     ತಮ್ಮ ಕಾರಿನ ಚಕ್ರದಡಿಗೆ ಬಿದ್ದವನ ದೇಶ, ಧರ್ಮ ಯಾವುದು ಎಂದು ವಿಚಾರಿಸಿದ್ದೀರಾ?
---------------------
     ಎಚ್.ಡಿ.ಕುಮಾರ ಸ್ವಾಮಿ ರಾಜಕೀಯದಿಂದ ನಿವೃತ್ತಿಯಾಗಬಾರದು.
- ಡಿ.ಕೆ.ಶಿವಕುಮಾರ್, ಇಂಧನ ಸಚಿವ
     ಮೊದಲು ಅಪ್ಪ ನಿವೃತ್ತರಾಗಲಿ. ಆನಂತರ ಮಗನ ವಿಷಯ.
---------------------
     ವೈವಾಹಿಕ ಅತ್ಯಾಚಾರವು ಭಾರತಕ್ಕೆ ಹೊಂದುವುದಿಲ್ಲ.
- ಮೇನಕಾ ಗಾಂಧಿ, ಕೇಂದ್ರ ಸಚಿವೆ
     ಅಂದರೆ ಅತ್ಯಾಚಾರ ಭಾರತದ ಸಂಸ್ಕೃತಿ ಎಂದು ಅಭಿಪ್ರಾಯವೇ?
---------------------
     ಇಡೀ ವಿಶ್ವವೇ ನನ್ನ ಕುಟುಂಬ.
-ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ
     ಹಾಗೆಂದು, ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುವುದೇ?

share
ವಾರ್ತಾಭಾರತಿ
ವಾರ್ತಾಭಾರತಿ
Next Story
X