ಜಾತ್ರೋತ್ಸವ ಆಮಂತ್ರಣ ಬದಲಾವಣೆಗೆ ಸೂಚನೆ: ಶಾಸಕಿ ಶಕುಂತಳಾ ಶೆಟ್ಟಿ
ಪುತ್ತೂರು, ಮಾ.13: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವ ಸ್ಥಾನದ ಜಾತ್ರೋತ್ಸವ ಆಮಂತ್ರಣದಲ್ಲಿ ಜಿಲ್ಲಾ ಧಿಕಾರಿ ಹೆಸರು ಬಂದಿರುವ ಕುರಿತು ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಆಮಂತ್ರಣ ಪತ್ರಿಕೆಯನ್ನು ಸೋಮವಾರ ಮರು ಮುದ್ರಣ ಮಾಡಬೇಕು ಎಂದು ದೇವಸ್ಥಾನದ ಅಧಿಕಾರಿಗೆ ಸೂಚನೆ ನೀಡಿರುವುದಾಗಿ ಶಾಸಕಿ ಶಕುಂತಳಾ ಶೆಟ್ಟಿ ತಿಳಿಸಿದ್ದಾರೆ.
ದೇವಳದ ಆಮಂತ್ರಣದಲ್ಲಿ ಜಿಲ್ಲಾಧಿಕಾರಿ ಹೆಸರು ಬಂದರೆ ತಪ್ಪೇನಿಲ್ಲ. ಕಾನೂನು ಪ್ರಕಾರ ಜಿಲ್ಲಾಧಿಕಾರಿಯವರ ಹೆಸರೇ ಬರಬೇಕು. ಆದರೆ ಅವರು ಅನ್ಯ ಧರ್ಮೀಯರು ಎಂಬ ಹಿನ್ನೆಲೆಯಲ್ಲಿ ಸಮಸ್ಯೆ ಉದ್ಭವಿಸಿದೆ. ನನ್ನ ಕ್ಷೇತ್ರದಲ್ಲಿ ಗೊಂದಲ ಆಗಬಾರದು ಮತ್ತು ದೇವರ ಜಾತ್ರೆಗೂ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಆಮಂತ್ರಣ ಪತ್ರಿಕೆ ಬದಲಾವಣೆ ಮಾಡಲು ಸೂಚನೆ ನೀಡಿದ್ದೇನೆ.
ಈ ಕುರಿತು ನನ್ನೊಂದಿಗೆ ಚರ್ಚಿಸಿ ರುವ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಗೌರವ ಅಧ್ಯಕ್ಷ ಯು.ಪೂವಪ್ಪಮತ್ತು ನಗರಸಭಾ ಸದಸ್ಯ ರಾಜೇಶ್ ಬನ್ನೂರು ಅವರಿಗೆ ಆಮಂತ್ರಣ ಪತ್ರಿಕೆ ಬದ ಲಾವಣೆ ಮಾಡುವುದಾಗಿ ಭರವಸೆ ನೀಡಿದ್ದೇನೆ ಎಂದು ಶಾಸಕಿತಿಳಿಸಿದ್ದಾರೆ.





