ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಮಂಗಳೂರು, ಮಾ.13: ಭಾರತ್ ಫೌಂಡೇಶನ್‌ನಿಂದ 2015 -2016ನೆ ಸಾಲಿನ ವಿದ್ಯಾರ್ಥಿ ವೇತನಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳಿಗೆ 2 ಸಾವಿರ ರೂ.ನಂತೆ 10 ತಿಂಗಳು ವಿದ್ಯಾರ್ಥಿ ವೇತನ ನೀಡ ಲಾಗುವುದು.
ಅರ್ಜಿ ಸಲ್ಲಿಸಲು ಪಿಯುಸಿ/ಡಿಪ್ಲೊಮ/ಡಿಗ್ರಿ/ಮಾಸ್ಟರ್ಸ್/ಇಂಜಿನಿಯರಿಂಗ್ ಅಥವಾ ಎಸೆಸೆಲ್ಸಿ ಮೇಲ್ಪಟ್ಟು ಬೇರಾವುದೇ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿ ಗಳು ಅರ್ಹರಾಗಿರುತ್ತಾರೆ. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ www.bharathfoundation.org, ದೂ.ಸಂ.: 08867006115 ಅನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
Next Story





