ಶಾರ್ಜಾ ಅಪಘಾತ: 3 ಭಾರತೀಯ ವಿದ್ಯಾರ್ಥಿಗಳ ಸಾವು
ದುಬೈ, ಮಾ. 13: ಯುಎಇಯ ಶಾರ್ಜಾ ನಗರದಲ್ಲಿ ರವಿವಾರ ಮುಂಜಾನೆ ನಡೆದ ವಾಹನ ಅಪಘಾತದಲ್ಲಿ ಮೂವರು ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.
ಶಾರ್ಜಾದ ಅಲ್ ದಾಯಿಡ್ ಅಲ್ ಮದಮ್ ರಸ್ತೆಯಲ್ಲಿ ಅವರು ಪ್ರಯಾಣಿಸುತ್ತಿದ್ದ ಕಾರು ಇನ್ನೊಂದು ವಾಹನಕ್ಕೆ ಢಿಕ್ಕಿಯಾಯಿತು.
ಮೃತರನ್ನು ಅಶ್ಮಿದ್ ಅಶ್ರಫ್, ಮುಹಮ್ಮದ್ ಶಿಫಾಮ್ ಮತ್ತು ಮುಹಮ್ಮದ್ ಶೌನೌಬ್ ಎಂದು ಗುರುತಿಸಲಾಗಿದೆ. ಅವರೆಲ್ಲರೂ ಕೇರಳದವರು.
Next Story





