ಕಂಬಳದೊಂದಿಗೆ ನೇತ್ರಾವತಿ ನದಿಯೂ ಉಳಿಯಲಿ: ಸುಂದರ ರೈ
.gif)
ಉಪ್ಪಿನಂಗಡಿ, ಮಾ.13: ತುಳು ನಾಡಿನ ಸಂಸ್ಕೃತಿಯಾದ ಕಂಬಳ ಉಳಿಯು ವುದರೊಂದಿಗೆ ಇಲ್ಲಿನ ಜೀವನದಿಯಾದ ನೇತ್ರಾವತಿಯೂ ಉಳಿಯಲಿ ಎಂದು ಚಲನಚಿತ್ರ ನಟ ಸುಂದರ ರೈ ಮಂದಾರ ತಿಳಿಸಿದರು.
ಇಲ್ಲಿನ ಹಳೆಗೇಟು ದಡ್ಡುವಿನ ನೇತ್ರಾವತಿ ನದಿ ಕಿನಾರೆಯಲ್ಲಿ ನಡೆದ ವಿಜಯ-ವಿಕ್ರಮ ಜೋಡುಕರೆ ಕಂಬಳದಲ್ಲಿ ರವಿವಾರ ನಡೆದ ಬಹುಮಾನ ವಿತರಣಾ ಕಾರ್ಯ ಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವಿಜಯ-ವಿಕ್ರಮ ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಬಹುಮಾನ ವಿತರಿಸಿ ಮಾತನಾಡಿದರು. ವೇದಿಕೆಯಲ್ಲಿ ಉದ್ಯಮಿ ದಾಸಪ್ಪಗೌಡ ಕೊಡ್ಯಡ್ಕ, ಕಂಬಳ ಸಮಿತಿಯ ಜಿಲ್ಲಾ ಕಾರ್ಯದರ್ಶಿ ವಿಜಯಕುಮಾರ್ ಕಂಗಿನಮನೆ, ತೀರ್ಪುಗಾರರಾದ ಮಹಾಬಲ ಆಳ್ವ, ಎಡ್ತೂರು ರಾಜೀವ ಶೆಟ್ಟಿ, ಸುಧಾಕರ ಶೆಟ್ಟಿ ಮುಗೆರೋಡಿ, ಅಪ್ಪು, ಸದಾನಂದ ರೈ ಅರ್ಗುಡಿ ಗುತ್ತು, ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಉಮೇಶ್ ಶೆಣೈ ನಂದಾವರ, ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ದಿಲೀಪ್ ಶೆಟ್ಟಿ ಕರಾಯ, ಆದರ್ಶ ಕಜೆಕಾರು, ರಾಮಚಂದ್ರ ಮಣಿಯಾಣಿ, ಚಂದ್ರಶೇಖರ ಮಡಿವಾಳ, ಜಯಂತ ಪೊರೋಳಿ, ವಿಶ್ವನಾಥ ಶೆಟ್ಟಿ ಕಂಗ್ವೆ ಮತ್ತಿತರರು ಉಪಸ್ಥಿತರಿದ್ದರು. ವಿಜಯ-ವಿಕ್ರಮ ಕಂಬಳ ಸಮಿತಿಯ ಗೌರವ ಸಲಹೆಗಾರ ನಿರಂಜನ್ ರೈ ಮಠಂತಬೆಟ್ಟು ಸ್ವಾಗತಿಸಿದರು. ಮೋಹನ್ ಪಕಳ ಕುಂಡಾಪು ವಂದಿಸಿರು.
*ಶನಿವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತ ನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ತುಳುನಾಡಿನ ಆರಾಧನಾ ಪದ್ಧತಿ, ಪರಿಸರ, ಜನಪದೀಯ ಸಂಸ್ಕೃತಿಗೆ ಅನ್ಯಾಯವಾದರೆ ಹೋರಾಟ ನಡೆಸುವುದಾಗಿ ತಿಳಿಸಿದರು.
ಮಂಗಳೂರು ವಿವಿ ಕುಲಪತಿ ಡಾ.ಬೈರಪ್ಪ, ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊ ಟ್ಟುಗುತ್ತು, ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬಾರ್ಕೂರು ಶಾಂತಾರಾಮ ಶೆಟ್ಟಿ, ಕಂಬಳದ ತೀರ್ಪುಗಾರ ಎಂ. ಎಡ್ತೂರು ರಾಜೀವ ಶೆಟ್ಟಿ, ಅಮ್ಟೂರು ಬಾರಿಕೆ ರಾಜಗೋಪಾಲ್ ರೈ, ಉದ್ಯಮಿ ಗಳಾದ ಯು.ಪಿ.ವರ್ಗಿಸ್, ತಿಮ್ಮಯ್ಯ ಶೆಟ್ಟಿ, ರೋಬೊ ಸಿಲಿಕಾನ್ ಪ್ರೈಲಿ.ನ ಉತ್ಪಾದನಾ ಮ್ಯಾನೇಜರ್ ಪಡ್ಯೋಟ್ಟು ವಿಶ್ವನಾಥ ಶೆಟ್ಟಿ, ತಣ್ಣೀರುಪಂಥ ಗ್ರಾಪಂ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ಜಿಪಂ ಮಾಜಿ ಸದಸ್ಯ ಕೇಶವ ಗೌಡ ಬಜತ್ತೂರು, ತಾಪಂ ಸದಸ್ಯ ಲಕ್ಷಣ ಗೌಡ ಬೆಳ್ಳಿಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.
ವಿಜಯ ವಿಕ್ರಮ ಕಂಬಳದ ಫಲಿತಾಂಶ
ಕನೆಹಲಗೆ: 1. ಬಾರಕೂರು ಶಾಂತರಾಮ ಶೆಟ್ಟಿ - ಪ್ರಥಮ, (ಮಂದಾರ್ತಿ ಶೀರೂರು ಗೋಪಾಲ ನಾಯ್ಕ- ಕೋಣ ಓಡಿಸಿದವರು), 2. ವಾಮಂಜೂರು ತಿರುವೈಲು ಗುತ್ತು ನವೀನ್ ಚಂದ್ರ ಆಳ್ವ - ಪ್ರಥಮ, (ಮಂದಾರ್ತಿ ಶೀರೂರು ನಾರಾಯಣ ನಾಯ್ಕ- ಕೋಣ ಓಡಿಸಿದವರು)
ಹಗ್ಗ ಹಿರಿಯ: 1.ಸುರತ್ಕಲ್ ತಡಂಬೈಲು ನಾಗೇಶ್ ದೇವಾಡಿಗ - ಪ್ರಥಮ, (ಕೊಳಕೆ ಇರ್ವತ್ತೂರು ಆನಂದ- ಕೋಣ ಓಡಿಸಿದವರು),2.ಮಾಳ ಆನಂದ ನಿಲಯ ಶೇಖರ್ ಎ. ಶೆಟ್ಟಿ- ದ್ವಿತೀಯ, (ಮಾಳ ಕಲ್ಲೇರಿ ಭರತ್ ಶೆಟ್ಟಿ- ಕೋಣ ಓಡಿಸಿದವರು)
ಹಗ್ಗ ಕಿರಿಯ: 1.ಕಾಂತಾವರ ಅಂಬೋಡಿಮಾರು ರಘುನಾಥ ದೇವಾಡಿಗ - ಪ್ರಥಮ, (ಪಣಪಾಲು ಪ್ರವೀಣ್ ಕೋಟ್ಯಾನ್- ಕೋಣ ಓಡಿಸಿದವರು), 2. ಕಾಂತಾವರ ಅಂಬೋಡಿಮಾರು ರಘುನಾಥ ದೇವಾಡಿಗ - ದ್ವಿತೀಯ, (ಪಣಪಾಲು ಪ್ರವೀಣ್ ಕೋಟ್ಯಾನ್- ಕೋಣ ಓಡಿಸಿದವರು).
ನೇಗಿಲು ಹಿರಿಯ: 1.ಬೋಳದ ಗುತ್ತು ಸತೀಶ್ ಶೆಟ್ಟಿ - ಪ್ರಥಮ, (ಹೊಕ್ಕಾಡಿ ಗೋಳಿಹಕ್ಕೇರಿ ಸುರೇಶ್ ಎಂ. ಶೆಟ್ಟಿ- ಕೋಣ ಓಡಿಸಿದವರು), 2.ಕಾಂತಾವರ ಸೃಷ್ಟಿ ಉದಯ ಅಚ್ಚಣ್ಣ ಶೆಟ್ಟಿ (ದ್ವಿತೀಯ), (ಅಳದಂಗಡಿ ರವಿಕುಮಾರ್- ಕೋಣ ಓಡಿಸಿದವರು)
ನೇಗಿಲು ಕಿರಿಯ: 1.ಬೋಳದಗುತ್ತು ಸತೀಶ್ ಶೆಟ್ಟಿ- ಪ್ರಥಮ, (ಹೊಕ್ಯಾಡಿ ಗೋಳಿಹಕ್ಕೇರಿ ಸುರೇಶ್ ಎಂ. ಶೆಟ್ಟಿ- ಕೋಣ ಓಡಿಸಿದವರು), 2.ಮೂಡುಬಿದಿರೆ ನ್ಯೂ ಪಡಿವಾಳ್ಸ್ ಮಿಥುನ್ ಬಿ. ಶೆಟ್ಟಿ- ದ್ವಿತೀಯ, (ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ- ಕೋಣ ಓಡಿಸಿದವರು)
ಅಡ್ಡ ಹಲಗೆ: 1.ಬೋಳಾರ ತ್ರಿಶಾಲ್ ಕೆ. ಪೂಜಾರಿ - ಪ್ರಥಮ, (ಬಂಗಾಡಿ ಕುದ್ಮಾಣ್ ಲೋಕಯ್ಯ ಗೌಡ - ಕೋಣ ಓಡಿಸಿದವರು), 2.ಬೇಲಾಡಿ ಬಾವ ಅಶೋಕ್ ಶೆಟ್ಟಿ- ದ್ವಿತೀಯ, (ನಾರಾವಿ ಯುವರಾಜ್ ಜೈನ್ - ಕೋಣ ಓಡಿಸಿದವರು)





