ನಾಳೆ ದೇವಲ್ಕುಂದ ಫಿಶ್‌ಮಿಲ್ ವಿರುದ್ಧ ಪ್ರತಿಭಟನೆ
ಕುಂದಾಪುರ, ಮಾ.13: ಕಟ್ ಬೇಲ್ತೂರು ಗ್ರಾಪಂ ವ್ಯಾಪ್ತಿಯ ದೇವಲ್ಕುಂದ ಗ್ರಾಮದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮೀನು ಸಂಸ್ಕರಣಾ ಘಟಕವನ್ನು ವಿರೋಧಿಸಿ ಜಯ ಕರ್ನಾಟಕ ಹೆಮ್ಮಾಡಿ ಘಟಕದ ನೇತೃತ್ವದಲ್ಲಿ ಮಾ.15ರಂದು ಗ್ರಾಪಂ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಜನನಿ ದಿವಾಕರ ಶೆಟ್ಟಿ ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ 200ಕ್ಕೂ ಅಧಿಕ ಮನೆಗಳಿದ್ದು, ಈ ಘಟಕದಿಂದ ಮುಂದೆ ಜನರು ತಮ್ಮ ಬದುಕು ನಡೆಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಮಕ್ಕಳಿಗೆ ಸಾಂಕ್ರಾಮಿಕ ರೋಗ ಗಳ ಭೀತಿ ಜನರನ್ನು ಕಾಡುತ್ತಿದೆ. ಮೀನು ಘಟಕದ ಕೊಳಚೆ ನೀರು ಹೊರಹಾಕಲು ಯಾವುದೇ ಸರಿಯಾದ ಜಾಗಗಳಿಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಈ ಕುರಿತು ಸಾಮಾನ್ಯ ಸಭೆ ಹಾಗೂ ಗ್ರಾಮ ಸಭೆಯಲ್ಲಿ ಯಾವುದೇ ಚರ್ಚೆ ನಡೆಸಿಲ್ಲ. ಸ್ಥಳೀಯರ ಅಭಿಪ್ರಾಯಗಳಿಗೆ ಮನ್ನಣೆ ನೀಡದೆ ಪರವಾನಿಗೆ ನೀಡಲಾಗಿದೆ ಎಂದು ಅವರು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಜಯಕರ್ನಾಟಕ ಕಾರ್ಯಾಧ್ಯಕ್ಷ ಕರುಣಾಕರ ಪೂಜಾರಿ, ತಾಲೂಕು ಅಧ್ಯಕ್ಷ ದಿನಕರ ಶೆಟ್ಟಿ, ಮುಖಂಡರಾದ ಅಣ್ಣಪ್ಪಕುಲಾಲ್, ನಿತ್ಯಾನಂದ ಅಮೀನ್, ಹೆಮ್ಮಾಡಿ ಘಟಕದ ಅಧ್ಯಕ್ಷ ಪ್ರಕಾಶ ಮೊಗವೀರ, ಗೌರವ ಸಲಹೆಗಾರ ರಾಜು ಪೂಜಾರಿ, ಸಂತೋಷ ಶೆಟ್ಟಿ ಉಪಸ್ಥಿತರಿದ್ದರು.







