ಕುಂಪಲ: ವಧು-ವರರ ಸಮಾವೇಶ
ಮಂಗಳೂರು, ಮಾ.13: ಪ್ರಚಾರಗಿಟ್ಟಿಸುವ ಉದ್ದೇಶದಿಂದ ಉಚಿತ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಭಾವಚಿತ್ರ ತೆಗೆದು ಬಹಿರಂಗಪಡಿಸುವುದು ಸಲ್ಲದು ಎಂದು ನೂರಾನಿಯಾ ಯತೀಂ ಖಾನಾ ಜತೆ ಕಾರ್ಯದರ್ಶಿ ಹಾಜಿ ಹಾರೂನ್ ಅಹ್ಸನಿ ಉಸ್ತಾದ್ ಅಭಿಪ್ರಾಯಪಟ್ಟರು.
ಕುಂಪಲ ನೂರಾನಿಯಾ ಯತೀಂ ಖಾನಾ ಹಾಗೂ ದಾರುಲ್ ಮಸಾಕೀನ್ ಜಂಟಿ ಆಶ್ರಯದಲ್ಲಿ ಮೂರು ತಿಂಗಳ ಅಭಿಯಾನ ‘ದಾಂಪತ್ಯ ಬೆಳಕು’ ಕಾರ್ಯಕ್ರಮದಡಿ 15 ಜೋಡಿಗೆ ಮನೆಯಲ್ಲೇ ನಡೆದ ಉಚಿತ ವಿವಾಹ ಸಮಾರಂಭದ ಸಮಾರೋಪ ಹಾಗೂ ವಧು-ವರರ ಸಮಾವೇಶದಲ್ಲಿ ಅವರು ಮಾತನಾಡಿದರು. ಸಚಿವ ಯು.ಟಿ.ಖಾದರ್, ಉಳ್ಳಾಲ ದರ್ಗಾ ಅಧ್ಯಕ್ಷ ಯು.ಎಸ್.ಹಂಝ, ಮ್ಯಾರೇಜ್ ಕಮಿಟಿ ಅಧ್ಯಕ್ಷ ಯು.ಎಸ್. ಅಬೂಬಕರ್, ಸುಲೈಮಾನ್ ಸಖಾಫಿ, ಹಾಜಿ ಅಬ್ದುಲ್ ಹಮೀದ್, ಅಹ್ಮದ್ ಇಕ್ಬಾಲ್, ನಝೀರ್ ಅಹ್ಮದ್, ಹಾಜಿ ಯುಟಿ.ಅಬ್ಬಾಸ್, ನಝೀರ್ ಕುಂಪಲ ಮತ್ತಿತರರು ಉಪಸ್ಥಿತರಿದ್ದರು.
Next Story





