ಇಳಿಯುತ್ತಿರುವ ಪ್ರಾಥಮಿಕ ಶಿಕ್ಷಣ ಗುಣಮಟ್ಟ
ಮೂರನೆ ತರಗತಿಯ ಕೇವಲ ನಾಲ್ಕನೆ ಒಂದು ಭಾಗದಷ್ಟು ಮಕ್ಕಳು ಮಾತ್ರ ಎರಡನೆ ತರಗತಿಯ ಪಠ್ಯವನ್ನು ನಿರರ್ಗಳವಾಗಿ ಓದಬಲ್ಲರು, ಇದು ಕಳೆದ ಐದು ವರ್ಷಗಳಲ್ಲಿ ಶೇ.5ಕ್ಕಿಂತಲೂ ಹೆಚ್ಚು ಇಳಿಕೆಯಾಗಿದೆ.
ಕಳೆದ ಐದು ವರ್ಷಗಳಲ್ಲಿ ಜಾಗತಿಕ ಪ್ರಾಥಮಿಕ ಶಿಕ್ಷಣದ ರಾಷ್ಟ್ರೀಯ ಯೋಜನೆಯಾಗಿರುವ ಸರ್ವ ಶಿಕ್ಷ ಅಭಿಯಾನದ ಅಡಿಯಲ್ಲಿ ರೂ. 1,15,625 ಕೋಟಿ ವೆಚ್ಚ ಮಾಡಲಾಗಿದೆ, ಆದರೆ ಕಲಿಕೆಯ ಗುಣಮಟ್ಟ ಮಾತ್ರ ಕ್ಷೀಣಿಸಿದೆ. ಉದಾಹರಣೆಗೆ, ಮೂರನೆ ತರಗತಿಯಲ್ಲಿ ಕಲಿಯುವ ನಾಲ್ಕನೆ ಒಂದು ಭಾಗ ಮಕ್ಕಳು ಮಾತ್ರ ಎರಡನೇ ತರಗತಿಯ ಪಠ್ಯವನ್ನು ನಿರರ್ಗಳವಾಗಿ ಓದಬಲ್ಲವರಾಗಿದ್ದಾರೆ. ಇದು ಕಳೆದ ಐದು ವರ್ಷಗಳಲ್ಲಿ ಶೇ.ಐದಕ್ಕಿಂತಲೂ ಹೆಚ್ಚು ಇಳಿಕೆಯನ್ನು ಕಂಡಿದೆ ಎಂದು ಶಿಕ್ಷಣದ ಬಗ್ಗೆ ಮಂಡಿಸಲಾದ 2014ರ ವರದಿಯು ತಿಳಿಸುತ್ತದೆ. ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿದ ಬಜೆಟ್‌ನಲ್ಲಿ ಸರ್ವ ಶಿಕ್ಷ ಅಭಿಯಾನವು ಶಿಕ್ಷಣಕ್ಕೆಂದು ಮೀಸಲಿಟ್ಟ ಮೊತ್ತದಲ್ಲಿ ಅರ್ಧವನ್ನು (ಶೇ.52) ಪಡೆದುಕೊಂಡಿತ್ತು. ಆದರೆ ಕಳೆದ ಐದು ವರ್ಷಗಳಲ್ಲಿ ಸರ್ವ ಶಿಕ್ಷ ಅಭಿಯಾನಕ್ಕೆ ನೀಡಲಾಗುತ್ತಿರುವ ಮೊತ್ತದಲ್ಲಿ ಇಳಿಕೆಯಾಗುತ್ತಲೇ ಬಂದಿದೆ. 2012-13ರಲ್ಲಿ ರೂ. 23,873 ಇದ್ದ ಮೊತ್ತ 2016-17ರ ಹೊತ್ತಿಗೆ ರೂ. 22,500ಕ್ಕೆ ತಲುಪಿದೆ. ಶಿಕ್ಷಣವು ಮುಖ್ಯವಾಗಿ ರಾಜ್ಯಗಳ ಜವಾಬ್ದಾರಿ. ಆದರೆ ಕೇಂದ್ರ ಸರಕಾರ ಸರ್ವ ಶಿಕ್ಷಣ ಅಭಿಯಾನದಂತಹ ಯೋಜನೆಗಳ ಮೂಲಕ ನೇರವಾಗಿ ಶೇ.60 ಕಾಣಿಕೆ ನೀಡುತ್ತದೆ. ಭಾರತದ ಶೇ.66 ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಸರಕಾರಿ ಶಾಲೆಗಳಿಗೆ ಅಥವಾ ಸರಕಾರಿ ಅನುದಾನಿತ ಶಾಲೆಗಳಿಗೆ ಹೋಗುತ್ತಾರೆ, ಉಳಿದವರು ದುಬಾರಿ ಖಾಸಗಿ ಶಾಲೆಗಳಿಗೆ ಹೋಗುತ್ತಾರೆ. ಂಕಿಅಂಶಗಳ ಅಭಿಯಾನದ ವರದಿಯ ಪ್ರಕಾರ 2015-16ರಲ್ಲಿ ಸ.ಶಿ.ಅ ಕ್ಕಾಗಿ ತೆಗೆದಿಟ್ಟಿದ್ದ ಮೊತ್ತದಲ್ಲಿ ಸೆಪ್ಟಂಬರ್ 2015ರವರೆಗೆ ಕೇವಲ ಶೇ.57 ಮಾತ್ರ ಬಿಡುಗಡೆ ಮಾಡಲಾಗಿತ್ತು. ಕ್ಷೀಣಿಸುತ್ತಿರುವ ಗುಣಮಟ್ಟ
ಕಳೆದ ವಾರ ಬಜೆಟ್ ಮಂಡಿಸುವ ವೇಳೆ ಜೇಟ್ಲಿ ಶಿಕ್ಷಣದ ಗುಣಮಟ್ಟದ ಬಗ್ಗೆ ಏನನ್ನೂ ಮಾತನಾಡಲಿಲ್ಲ. ಕುಸಿಯುತ್ತಿರುವ ಗುಣಮಟ್ಟ ಕಡಿಮೆಯಾಗುತ್ತಿರುವ ಮೊತ್ತದ ಜೊತೆ ಸಂಬಂಧ ಹೊಂದಿರಬಹುದು ಅದರೆ ಕೇವಲ ಹಣದ ಕೊರತೆಯ ಕಾರಣದಿಂದ ಹೀಗಾಗುತ್ತಿರಲು ಸಾಧ್ಯವಿಲ್ಲ. ಪ್ರಾಥಮಿಕ ಶಾಲೆಗಳ ಐದು ಶಿಕ್ಷಕರ ಪೈಕಿ ಒಬ್ಬರಿಗಿಂತಲೂ ಕಡಿಮೆ ಮಂದಿ ಸರಿಯಾಗಿ ತರಬೇತಿ ಪಡೆದುಕೊಂಡಿರುತ್ತಾರೆ ಎಂದು ಕಳೆದ ವರ್ಷ ಇಂಡಿಯಾ ಸ್ಪೆಂಡ್ ವರದಿ ಮಾಡಿತ್ತು. ಇದರ ಪರಿಣಾಮವೇ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಕುಸಿಯುತ್ತಿರುವ ಕಲಿಕೆಯ ಸಾಮರ್ಥ್ಯ. ಇಂಡಿಯಾ ಸ್ಪೆಂಡ್ ವರದಿಯ ಪ್ರಕಾರ 2013ರಲ್ಲಿ ಸರಕಾರಿ ಶಾಲೆಗಳಲ್ಲಿ ಕಲಿಕೆಯ ಮಟ್ಟವು ಶೇ.41.1ಗೆ ಕುಸಿದಿತ್ತು ಆದರೆ 2014ರಲ್ಲಿ ಕೊಂಚ ಚೇತರಿಕೆ ಕಂಡು ಶೇ.42.2 ಆಯಿತು. ಇದೇ ರೀತಿ, ಗಣಿತದಲ್ಲಿ ಮೂರನೆ ತರಗತಿಯ ಕಾಲಂಶ ಮಕ್ಕಳು 10ರಿಂದ 99ರ ನಡುವಿನ ಸಂಖ್ಯೆಗಳನ್ನು ಗುರುತಿಸಲು ವಿಫಲವಾಗಿದ್ದರು, ಇದು ಐದು ವರ್ಷಗಳಲ್ಲಿ ಶೇ.13 ಇಳಿಕೆ ಕಂಡಿತ್ತು. ಹಣದ ಸಮಸ್ಯೆ
ಡಿಸೆಂಬರ್ 7, 2015ರಲ್ಲಿ ಲೋಕಸಭೆಯಲ್ಲಿ ನೀಡಿದ ಮಾಹಿತಿಯಂತೆ ಶೇ.99 ಹೊಸ ಪ್ರಾಥಮಿಕ ಶಾಲೆಗಳನ್ನು 2000-01ರಲ್ಲಿ ಸ.ಶಿ.ಅ ಯೋಜನೆ ಆರಂಭಿಸಿದ ನಂತರ ಸೆಪ್ಟಂಬರ್ 30, 2015ರ ವರೆಗೆ ಮಂಜೂರು ಮಾಡಲಾದ ರೂ.40,00,000ದಿಂದ ನಿರ್ಮಾಣ ಮಾಡಲಾಗಿದೆ. 2015-16ರಲ್ಲಿ ಅಕೌಂಟೆಬಿಲಿಟಿ ಇನಿಶಿಯಟಿವ್ ನಡೆಸಿದ ಸಮೀಕ್ಷೆಯ ಪ್ರಕಾರ ಶಿಕ್ಷಣದ ಹಕ್ಕು ನಿಯಮದಡಿ ಸುಮಾರು ಶೇ.23 ಶಾಲೆಗಳು ಕನಿಷ್ಠ ಒಂದು ಕೋಣೆಯನ್ನಾದರೂ ನಿರ್ಮಿಸುವ ಅಗತ್ಯ ವಿತ್ತು. ಆದರೆ ಸ.ಶಿ.ಅ ಅಡಿಯಲ್ಲಿ ಹೀಗೆ ಕೋಣೆಗಳನ್ನು ನಿರ್ಮಿಸಲು ಕೇವಲ ಶೇ.1 ಶಾಲೆಗಳಷ್ಟೇ ಅನುದಾನವನ್ನು ಪಡೆದಿದ್ದವು. ಉನ್ನತ ಶಿಕ್ಷಣದ ಮೇಲೆ ಗಮನ
ಉನ್ನತ ಶಿಕ್ಷಣದ ವ್ಯವಸ್ಥೆಯನ್ನು ಬಲಪಡಿಸುವ ಸಲುವಾಗಿ ರೂ. ಒಂದು ಸಾವಿರ ಕೋಟಿ ಮೂಲ ಬಂಡವಾಳದೊಂದಿಗೆ ಉನ್ನತ ಶಿಕ್ಷಣ ಹಣಕಾಸು ಸಂಸ್ಥೆಯನ್ನು ರಚಿಸುವ ಪ್ರಸ್ತಾಪವನ್ನು ವಿತ್ತ ಸಚಿವರು ಮಂಡಿಸಿದ್ದರು. ಉ.ಶಿ.ಹ.ಸಂ ವು ಒಂದು ಲಾಭರಹಿತ ಸಂಸ್ಥೆಯಾಗಲಿದ್ದು ಮಾರುಕಟ್ಟೆಯಿಂದ, ದೇಣಿಗೆ ರೂಪದಲ್ಲಿ ಪಡೆದ ಮತ್ತು ಸಾಮಾಜಿಕ ಜವಾಬ್ದಾರಿ ಬಂಡವಾಳದಿಂದ ಹಣವನ್ನು ಉಪಯೋಗಿಸಿಕೊಳ್ಳಲಿದೆ. ೇಂದ್ರ ಮತ್ತು ಡೀಮ್ಡ್ ವಿಶ್ವವಿದ್ಯಾನಿಲಯಗಳು ಸೇರಿದಂತೆ ಉನ್ನತ ಶಿಕ್ಷಣವು ಅತೀಹೆಚ್ಚು ಅಂದರೆ ರೂ. 7,997 ಕೋಟಿ ಪಡೆದುಕೊಂಡಿದೆ, ನಂತರದ ಸ್ಥಾನ ಭಾರತೀಯ ತಂತ್ರಜ್ಞಾನ ಸಂಸ್ಥೆ (ರೂ. 4, 984 ಕೋಟಿ) ಮತ್ತು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ರೂ.4,492 ಕೋಟಿ).
ಸುಮಾರು ಶೇ.80 ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣ ಕಾರ್ಯಕ್ರಮದಡಿ ಹೆಸರು ನೋಂದಾಯಿಸಿದ್ದರು, ಆದರೆ ಕೇವಲ ಶೇ.0.3 (84,058) ಪಿಎಚ್‌ಡಿಗೆ ಹೆಸರು ನೋಂದಾಯಿಸಿದ್ದರು. ಇದು ಸಂಶೋಧನೆಯು ದುರ್ಬಲ ಮತ್ತು ಮುಗ್ಗರಿಸುವಂತಹದ್ದಾಗಿದೆ ಎಂಬ ಸೂಚನೆ ನೀಡುತ್ತದೆ. ಕೇವಲ ಶೇ.21ರಷ್ಟು 18ರಿಂದ 23ರ ಹರೆಯದ ಯುವಕ ಯುವತಿಯರು ಉನ್ನತ ಶಿಕ್ಷಣಕ್ಕೆ ಹೆಸರು ದಾಖಲಿಸಿದ್ದಾರೆ.
ಉನ್ನತ ಶಿಕ್ಷಣಕ್ಕಾಗಿ ಭಾರತದ ಹೆಸರು ನೋಂದಾವಣಿ ದರ ಶೇ.18-ಇದು ಜಾಗತಿಕ ಮಟ್ಟವಾದ ಶೇ.27ಕ್ಕಿಂತ ಕಡಿಮೆ ಮತ್ತು ಚೀನಾದ ಶೇ.26 ಮತ್ತು ಬ್ರೆಜಿಲ್‌ನ ಶೇ.36ಗೆ ಹೋಲಿಸಿದಾಗ ಬಹಳಷ್ಟು ಕಡಿಮೆಯಾಗಿದೆ ಎಂದು 2014ರ ಬ್ರಿಟಿಷ್ ಕೌನ್ಸಿಲ್ ವರದಿಯು ಬೊಟ್ಟು ಮಾಡಿದೆ.
ಯೋಜನೆಯಲ್ಲಿನ ಇತರ ಕೊರತೆಗಳು
ಪ್ರಾಥಮಿಕ ಶಾಲಾ ಮಟ್ಟದಲ್ಲಿ ಹೆಣ್ಮಕ್ಕಳನ್ನು ಶಾಲೆಗೆ ಸೇರಿಸುವಿಕೆಯು 2009-10ರಲ್ಲಿ ಶೇ.48.12 ಇದ್ದಿದ್ದು 2014-15ರಲ್ಲಿ ಶೇ.48.19 ಗೆ ಏರಿದೆ. ಇನ್ನೂ ಹೆಚ್ಚು ಹೆಣ್ಮಕ್ಕಳನ್ನು ಸೇರಿಸುವ ಅಗತ್ಯವಿದೆ. ಶೇ.52 ಬಾಲಕರು ಪ್ರಾಥಮಿಕ ಶಾಲೆಗಳಲ್ಲಿ ಹೆಸರು ನೋಂದಾಯಿಸಿದ್ದಾರೆ.
ಶುಭ ಸುದ್ದಿ
6-14 ವಯಸ್ಸಿನ ಮಧ್ಯೆ ಶಾಲೆ ಬಿಡುವವರ ಸಂಖ್ಯೆ 2005ರಲ್ಲಿ 13.46 ಮಿಲಿಯನ್‌ನಿಂದ 2013ರಲ್ಲಿ 6.1 ಮಿಲಿಯನ್‌ಗೆ ಇಳಿಯುವ ಮೂಲಕ ಶೇ.55 ಇಳಿಕೆ ಕಂಡಿದೆ. ಶಾಲೆ ತೊರೆಯುವ ಮಕ್ಕಳ ವಾರ್ಷಿಕ ಸರಾಸರಿ ಪ್ರಮಾಣವು 2009-10ರಲ್ಲಿ ಶೇ.6.8 ಇದ್ದಿದ್ದು 2013-14ರಲ್ಲಿ ಶೇ.4.3ಕ್ಕೆ ಇಳಿಕೆಯಾಗಿದೆ. ಮಧ್ಯಾಹ್ನ ಬಿಸಿಯೂಟ ಯೋಜನೆಗೆ ರೂ. 9,700 ಕೋಟಿ ಬಿಡುಗಡೆ ಮಾಡಲಾಗಿದೆ. ಇದು ಸ.ಶಿ.ಅ ನಕ್ಕಿಂತ ಸ್ವಲ್ಪ ಕಡಿಮೆ. ಜಗತ್ತಿನ ಬೃಹತ್ ಶಾಲಾ ಊಟದ ಯೋಜನೆ ಮಧ್ಯಾಹ್ನದ ಬಿಸಿಯೂಟದ ಪ್ರಯೋಜನವನ್ನು 2014-15ರಲ್ಲಿ ಭಾರತದಾದ್ಯಂತ 102 ಮಿಲಿಯನ್ ಮಕ್ಕಳು ಪಡೆದುಕೊಂಡಿದ್ದರು.್ರಾಮೀಣ ಅಭಿಯಾನದ ಅಂಗವಾಗಿ ಸರಕಾರವು ಮುಂದಿನ ಎರಡು ವರ್ಷಗಳಲ್ಲಿ 62 ಹೊಸ ನವೋದಯ ವಿದ್ಯಾನಿಲಯಗಳನ್ನು ತೆರೆಯಲು ಚಿಂತನೆ ನಡೆಸಿದೆ. ್ರಾಮೀಣ ಪ್ರದೇಶದ ಅತ್ಯುತ್ತಮ ಪ್ರತಿಭೆಗೆ ಶಿಕ್ಷಣ ನೀಡುವ ಸಲುವಾಗಿ ರಾಷ್ಟ್ರೀಯ ಶಿಕ್ಷಣ ನೀತಿ 1986ರ ಅಡಿಯಲ್ಲಿ ನವೋದಯ ವಿದ್ಯಾನಿಲಯ ಯೋಜನೆಯನ್ನು ಆರಂಭಿಸಲಾಯಿತು. ಡಿಸೆಂಬರ್ 7, 2015ರಲ್ಲಿ ಲೋಕಸಭೆಯಲ್ಲಿ ಮಂಡಿಸಿದ ಅಂಕಿಅಂಶಗಳ ಪ್ರಕಾರ ಭಾರತದಾದ್ಯಂತ 591 ಶಾಲೆಗಳಿವೆ. ಈ ಶಾಖೆಗಳನ್ನು ನಡೆಸುವ ನವೋದಯ ವಿದ್ಯಾನಿಲಯ ಸಮಿತಿಗೆ ರೂ. 2,471 ಕೋಟಿಯನ್ನು ಮೀಸಲಿಡಲಾಗಿದೆ, ಇದು ಕಳೆದ ವರ್ಷಕ್ಕಿಂತ ಶೇ.8 ಹೆಚ್ಚು.