ಚೆನ್ನೈನ ಸ್ಥಳೀಯ ರದ್ದಿ ಅಂಗಡಿಗೆ ಅಂತರ್ಜಾಲದ ನೆರವು

ಚೆನ್ನೈ, ಮಾ.14: ಇಲ್ಲಿ ಕಬಾಡಿವಾಲರು ಅಥವಾ ರದ್ದಿ ಅಂಗಡಿಗಳನ್ನು ಒಂದು ಅಂತರ್ಜಾಲ ನೆಟ್ವರ್ಕ್ ಒಳಗೆ ಸೇರಿಸುವ ಸ್ಟಾರ್ಟ್ ಅಪ್ ಕೆಲಸ ಮಾಡುತ್ತಿದೆ. ಅದರ ಹೆಸರು ಕಬಾಡಿವಾಲ ಕನೆಕ್ಟ್.
ಭಾರತದ ತ್ಯಾಜ್ಯ ನಿರ್ವಹಣೆಯಲ್ಲಿ ರದ್ದಿ ಅಂಗಡಿಯವರು ಬಹಳ ಮುಖ್ಯ ಪಾತ್ರವಹಿಸುತ್ತಾರೆ. ಇವರು ತ್ಯಾಜ್ಯಗಳನ್ನು ನವೀಕರಿಸುವ ಮೂಲಕ ನಗರದ ಬಹುತೇಕ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿರುತ್ತಾರೆ.
ಈಗ ಕಬಾಡಿವಾಲ ಕನೆಕ್ಟ್ ಎನ್ನುವ ಈ ಚೆನ್ನೈ ಮೂಲದ ಸ್ಟಾರ್ಟ್‌ಅಪ್ ರದ್ದಿ ಅಂಗಡಿಗಳು ಮತ್ತು ಪ್ರಜೆಗಳ ನಡುವೆ ಸೇತುವೆಯಾಗಿದೆ. ಈ ಸ್ಟಾರ್ಟಪ್‌ಗೆ ವಿಶ್ವ ಆರ್ಥಿಕ ವೇದಿಕೆಯ ಅನುದಾನವೂ ಸಿಕ್ಕಿದೆ. ಸಿದ್ಧಾರ್ಥ ಹಾಂಡೆ ಕಬಾಡಿವಾಲ ಕನೆಕ್ಟ್‌ನ ಸಹ ಸಂಸ್ಥಾಪಕ ಮತ್ತು ಮುಖ್ಯ ಅಧ್ಯಯನಕಾರ. ಸಂಸ್ಥೆ ಒಂದು ನಕ್ಷೆಯನ್ನು ಬಿಡುಗಡೆ ಮಾಡಿ ಚೆನ್ನೈ ನಗರದ ವಿವಿಧ ರದ್ದಿ ಅಂಗಡಿಗಳನ್ನು ಅದರಲ್ಲಿ ಗುರುತಿಸಿದೆ. ಇವರನ್ನು ಸಂಪರ್ಕಿಸಿದರೆ ಸ್ವತಃ ಮನೆಯ ಬಳಿಗೆ ಹೋಗಿ ತ್ಯಾಜ್ಯ ಸಂಗ್ರಹಿಸಿ ನವೀಕರಿಸುತ್ತಾರೆ.
ಕಬಾಡಿವಾಲ ಕನೆಕ್ಟ್ ಜೊತೆಗೆ ಈಗ ನಗರದ 800 ರದ್ದಿ ನವೀಕರಣ ಅಂಗಡಿಗಳು ಸೇರಿಕೊಂಡಿವೆ. ಅವರ ಸಂಶೋಧನೆಯಲ್ಲಿ ಸುಮಾರು 14 ವರ್ಷಕ್ಕೂ ಅಧಿಕ ರದ್ದಿ ನವೀಕರಣ ಅನುಭವ ಹೊಂದಿರುವ ವ್ಯಕ್ತಿಗಳೂ ಕೇವಲ ಮಾಸಿಕ ರು. 30,000 ದುಡಿಯುತ್ತಿದ್ದಾರೆ ಎನ್ನುವುದು ಪತ್ತೆಯಾಗಿದೆ.
ಆದರೆ ಬಹುತೇಕರ ಬಳಿ ಸ್ಮಾರ್ಟ್‌ಫೋನ್‌ಗಳಿರುವ ಕಾರಣ ಸ್ಟಾರ್ಟಪ್ ಈಗ ಮೊಬೈಲ್ ಆಪ್ ಮೂಲಕವೂ ವ್ಯವಹಾರ ನಡೆಸಲು ಅನುವು ಮಾಡಿಕೊಡುತ್ತಿದೆ. ಆ ಮೂಲಕ ಖರೀದಿದಾರರು ಮತ್ತು ತ್ಯಾಜ್ಯ ಕೊಡುವವರ ಕ್ಲಬ್ ನಿರ್ಮಾಣವಾಗುತ್ತಿದೆ.







