ಕಿರು ತೆರೆ ನಟ ಸಾಯ್ ಪ್ರಶಾಂತ್ ಆತ್ಮಹತ್ಯೆ

ಚೆನ್ನೈ, ಮಾ.14: ಪ್ರಸಿದ್ದ ಕಿರು ತೆರೆನಟ ಸಾಯ್ ಪ್ರಶಾಂತ್ ರವಿವಾರ ಚೆನ್ನೈನ ತನ್ನ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೊದಲ ಪತ್ನಿಗೆ ವಿಚ್ಛೇದನ ನೀಡಿ ಮೂರು ತಿಂಗಳ ಹಿಂದೆ ಸಾಯ್ ಪ್ರಶಾಂತ್ ಅವರು ಎರಡನೆ ವಿವಾಹವಾಗಿದ್ದರು.
ಪ್ರಶಾಂತ್ ಹೆತ್ತವರು ಹೊಸೂರಿನಲ್ಲಿ ವಾಸವಾಗಿದ್ದಾರೆ.ಅವರ ತಾಯಿ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಲಲಿತಾ ಸುಭಾಷ್ ಮಗನ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ.
ಪ್ರಶಾಂತ್ ಅಣ್ಣಾಮಲೈ, ಸೆಲ್ವಿ, ಮತ್ತು ಅರಸಿ ಸೀರಿಯಲ್‌ಗಳಲ್ಲಿ , ನೆರಮ್, ಥಿಗಿಡಿ ಮತ್ತು ವಡಾಕುರಿ ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ.
Next Story





