Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೇರಳದ ಆದಿವಾಸಿ-ದಲಿತ ಹಕ್ಕು ಕಾರ್ಯಕರ್ತೆ...

ಕೇರಳದ ಆದಿವಾಸಿ-ದಲಿತ ಹಕ್ಕು ಕಾರ್ಯಕರ್ತೆ ಧನ್ಯಾ ರಾಮನ್‌ರ ಹತ್ಯೆ ಶ್ರಮದ ಹಿಂದೆ ಯಾರಿದ್ದಾರೆ?

ವಾರ್ತಾಭಾರತಿವಾರ್ತಾಭಾರತಿ14 March 2016 4:47 PM IST
share
ಕೇರಳದ ಆದಿವಾಸಿ-ದಲಿತ ಹಕ್ಕು ಕಾರ್ಯಕರ್ತೆ ಧನ್ಯಾ ರಾಮನ್‌ರ ಹತ್ಯೆ ಶ್ರಮದ ಹಿಂದೆ ಯಾರಿದ್ದಾರೆ?

ತಿರುವನಂತಪುರಂ, ಮಾರ್ಚ್.14: ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ದಲಿತ ದೌರ್ಜನ್ಯಗಳ ವಿರುದ್ಧ ಗರಿಷ್ಠ ಪ್ರತಿಭಟನೆಯಲ್ಲಿ ಕೇರಳದವರೂ ಮುಂಚೂಣಿಯಲ್ಲಿದ್ದಾರೆ. ಆದರೆ ಕೇರಳದ ಒಳಗೆ ನಡೆಯುವ ದಲಿತ ಹಿಂಸೆಗಳ ಕುರಿತು ಅವರು ಮುಖ ತಿರುಗಿಸಿದ್ದಾರೆಂಬ ಆರೋಪ ಅಲ್ಲಿ ಆಗಾಗ ಕೇಳಿಸುತ್ತಿರುತ್ತವೆ. ಕೇರಳದ ಆದಿವಾಸಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಧನ್ಯಾ ರಾಮನ್ ಮೇಲೆ ಕಳೆದ ದಿವಸ ಹತ್ಯೆಯತ್ನ ನಡೆಯಿತು. ಶನಿವಾರ ಬೆಳಗ್ಗೆ ಧನ್ಯಾರ ತಿರುವನಂತಪುರಂನ ಮನೆಯಲ್ಲಿ ಅವರ ಕತ್ತಿಗೆ ದುಷ್ಕರ್ಮಿ ಕತ್ತಿ ಇರಿಸಿದ್ದ. ಆದಿವಾಸಿಗಳಿಗಾಗಿ ಧನ್ಯಾ ನಡೆಸುತ್ತಿರುವ ಮಧ್ಯಪ್ರವೇಶ ಕೆಲವರನ್ನು ಕೋಪಿಸಿವೆ. ಇಂತಹ ಶತ್ರುಗಳ ಜನರು ಧನ್ಯರನ್ನು ಆಕ್ರಮಿಸಿದ್ದರ ಹಿಂದಿದ್ದಾರೆ ಎಂದು ಆರೋಪ ಎದ್ದಿವೆ.

ಆದಿವಾಸಿ ಮಕ್ಕಳನ್ನು ಅತ್ಯಾಚಾರಕ್ಕೀಡು ಮಾಡಿದ ಪ್ರಕರಣಗಳ ಸಹಿತ ಹಲವಾರು ಪ್ರಕರಣಗಳನ್ನು ಮಾಧ್ಯಮಗಳ ಗಮನಕ್ಕೆ ತಂದಿದ್ದು ಧನ್ಯಾರ ಮಧ್ಯಪ್ರವೇಶವಾಗಿತ್ತು. ಟ್ರೈಬಲ್ ಡಿಪಾರ್ಟ್ ಮೆಂಟ್ ತನ್ನ ದೂರುಗಳಿಂದ ವಿಚಾರಣೆ ಎದುರಿಸುತ್ತಿರುವವರೂ ಧನ್ಯಾರ ಹತ್ಯೆ ಯತ್ನದ ಹಿಂದಿದ್ದಾರೆ ಎಂದು ಹೇಳುತ್ತಾರೆ. ಆದಿವಾಸಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಧನ್ಯಾರ ಮೇಲೆ ಹಲ್ಲೆ ನಡೆಯುವುದು ಹೊಸದೇನಲ್ಲ.ಇದು ಎರಡನೆ ಬಾರಿ ಅವರ ಮೇಲೆ ನಡೆದ ಹಲ್ಲೆಯಾಗಿದೆ. ರಾತ್ರಿ ವೇಳೆ ಯಾರೋ ಮನೆಯ ಹಿತ್ತಿಲಿಗೆ ಬರುತಿದ್ದಾರೆ ಎಂಬುದನ್ನು ಗಮನಿಸಿದ ನಂತರ ಧನ್ಯಾ ಪೊಲೀಸ್ ಕಾವಲಿನಲ್ಲಿ ಧನ್ಯಾ ಮತ್ತು ಕುಟುಂಬ ದಿನದೂಡುತ್ತಿವೆ.ಶನಿವಾರ ಪೊಲೀಸರ ಗಮನಕ್ಕೆ ಬಾರದೆ ಬಾಗಿಲು ಒಡೆದು ಹಾಕಿ ಮನೆಯೊಳಕ್ಕೆ ಅಕ್ರಮಿ ಯಶಸ್ವಿಯಾಗಿ ನುಗ್ಗಿದ್ದ. ಆದಿವಾಸಿ ಸಾಮಾಜಿಕ ಕಾರ್ಯಕರ್ತೆ ಏಳು ವರ್ಷದ ತನ್ನ ಸಕ್ರಿಯ ಕೆಲಸದಲ್ಲಿ ಹಲವರನ್ನು ಕಾನೂನಿನ ಮುಂದೆ ತಂದು ನಿಲ್ಲಿಸಿದ್ದಾರೆ. ಇವರಲ್ಲಿ ಯಾರಾದರೂ ಧನ್ಯಾರ ಹತ್ಯೆಗೆ ಯತ್ನಿಸಿರುವ ಸಾಧ್ಯತೆಯೇ ಅಧಿಕವಿದೆ ಎಂದು ಧನ್ಯಾ ಅಭಿಪ್ರಾಯವಾಗಿದೆ.

ಆದಿವಾಸಿ-ದಲಿತ ಕ್ಷೇತ್ರದಲ್ಲಿ ಅಸಮಾನ ಕೆಲಸವನ್ನು ಧನ್ಯ ರಾಮನ್ ಎಂಬ ಸಾರ್ವಜನಿಕ ಕಾರ್ಯಕರ್ತೆ ಮಾಡಿದ್ದಾರೆ. ಅವರು ಈ ಕ್ಷೇತ್ರವನ್ನು ಆಯ್ದು ಕೊಳ್ಳಲು ಅವರ ತಂದೆಯೇ ಪ್ರೇರಣೆಯಾಗಿದ್ದಾರೆ. ಪಿ.ಕೆ.ರಾವನ್ ಯಶೋದಾ ದಂಪತಿ ಪುತ್ರಿಯಾಗಿ 1982 ಅಕ್ಟೋಬರ್ ಒಂದಕ್ಕೆ ಕಾಸರಗೋಡು ಕಳ್ಳಾರ್ ಎಂಬ ಗ್ರಾಮದಲ್ಲಿ ಧನ್ಯಾ ರಾವನ್ ಜನಿಸಿದ್ದರು. ಕಾಸರಗೋಡು ರಾಜಪುರ ಹೋಲಿ ಫ್ಯಾಮಿಲಿ ಸ್ಕೂಲ್ ಮತ್ತು ಕಾಂಞಗಾಡ್ ನೆಹರೂ ಕಾಲೇಜ್‌ಗಳಲ್ಲಿ ಕಲಿತ ಅವರು ಕಣ್ಣೂರು ಕೂತ್ತುಪರಂಬ್ ನಿಮಲಾಗಿರಿ ಕಾಲೆಜಿನಲ್ಲಿ ಪದವಿ ಗಳಿಸಿದ್ದರು.ಧನ್ಯಾ ತನ್ನ ಬಾಲ್ಯದಲ್ಲಿ ಕಂಡಿದ್ದ ದೃಶ್ಯಗಳು ಅವರಲ್ಲಿ ಅತೀವ ಪ್ರಭಾವ ಬೀರಿತ್ತು. 2,500ಕ್ಕೂ ಅಧಿಕ ಆದಿವಾಸಿ ಊರುಗಳನ್ನು ಅವರು ಈತನಕ ಸಂದರ್ಶಿಸಿದ್ದಾರೆ. ಆದಿವಾಸಿಗಳ ಸಮಸ್ಯೆಗಳನ್ನು ನೇರವಾಗಿ ಅರಿತು ಅಧ್ಯಯನ ಮಾಡಿದ್ದಲ್ಲದೆ ಅದಕ್ಕೆ ಪರಿಹಾರ ಕಂಡುಹುಡುಕುವ ಶ್ರಮವನ್ನು ನಡೆಸಿದ್ದಾರೆ. ಹಲವು ಮಾದರಿ ಊರುಗಳನ್ನು ನಿರ್ಮಿಸುವುದು ಅವರ ಚಟುವಟಿಕೆಗಳ ವಿಶೇಷತೆಯಾಗಿತ್ತು. ಇದಕ್ಕೆ ತಿರುವನಂತಪುರಂನ ಪೆರಿಂಙಮಲ ಎಂಬ ಆದಿವಾಸಿ ಊರು ಒಂದು ಉತ್ತಮ ಉದಾಹರಣೆಯಾಗಿದೆ. ಐವತ್ತೆರಡು ಎಕರೆಯಲ್ಲಿ ಎಂಬತ್ತೆರಡು ಕುಟುಂಬಗಳು ವಾಸಿಸುತ್ತಿರುವ ಇಲ್ಲಿ ಕುಡಿಯುವ ನೀರು ವಿದ್ಯುತ್, ಕೃಷಿ, ರಸ್ತೆ, ಪ್ರಾಥಮಿಕ ಆರೊಗ್ಯ ಕೇಂದ್ರ ಮುಂತಾದ ಉನ್ನತ ಸೌಕರ್ಯಗಳಿವೆ. ಇಂತಹ ಊರುಗಳನ್ನು ನಿರ್ಮಿಸಲಿಕ್ಕಾಗಿ ಧನ್ಯಾ ತನ್ನನ್ನು ತೊಡಗಿಸಿಕೊಂಡಿದ್ದಾರೆ.

 ಇತರರಿಗೂ ಆದಿವಾಸಿ ದಲಿತರಿಗೆ ಸಮಾಜದಲ್ಲಿ ಯಾವ ರೀತಿಯ ವ್ಯತ್ಯಾಸವಿಲ್ಲವೆಂದೂ ಎಲ್ಲರಿಗೂ ಒಂದೇ ರೀತಿಯ ಸೌಕರ್ಯಗಳು ಸಿಗುವುದು ಸಾಮಾಜಿಕ ನ್ಯಾಯದ ಭಾಗವಾಗಿದೆಂದು ಅವರು ಹೇಳುತ್ತಾರೆ. ಆದಿವಾಸಿ ಗ್ರಾಮಗಳಲ್ಲಿ ಅವಿವಾಹಿತ ತಾಯಂದಿರು ಹೆಚ್ಚುತ್ತಿರುವುದರ ಕುರಿತು ಅವರು ಮಾಡಿದ ಕೆಲಸ ಅತ್ಯದ್ಭುತವಾದುದು. ಆದಿವಾಸಿ ಗ್ರಾಮಗಳಲ್ಲಿ ಅವಿವಾಹಿತ ಮಹಿಳೆಯರಿಗೆ ಮಾತುಕೊಟ್ಟು ಲೈಂಗಿಕವಾಗಿ ಬಳಕೆ ಮಾಡುವ ಮತ್ತು ಗರ್ಭಿಣಿಯರಾದ ಬಳಿಕ ತಲೆತಪ್ಪಿಸುವವರಲ್ಲಿ ಹೆಚ್ಚಿನವರು ವಲಸೆಗಾರರೆಂದು ಧನ್ಯಾರ ಅಭಿಪ್ರಾಯವಾಗಿದೆ.

ಇಂತಹ ಐನೂರು ಅವಿವಾಹಿತ ತಾಯಂದಿರ ಹದಿನೆಂಟು ವರ್ಷ ವಯಸ್ಸು ಆಗಿರುವ ಮಕ್ಕಳಿಗೆ ಅರಣ್ಯ ಇಲಾಖೆಯಲ್ಲಿ ಕೆಲಸ ಕೊಡಿಸಲು ಸರಕಾರಕ್ಕೆ ಒತ್ತಡ ಹೇರಿ ಅವರು ಯಶಸ್ವಿಯಾಗಿದ್ದರು. ಟ್ರೈಬಲ್ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಇದೆಯೆಂದು ಅದರ ಅಧಿಕಾರಿಗಳ ವಿರುದ್ಧ ಧನ್ಯಾ ದೂರು ನೀಡಿ ಅವರ ವಿರುದ್ಧ ಕ್ರಮ ಜರಗಿಸಲಿಕ್ಕೂ ಅವರು ಕಾರಣರಾದರು. ಇಂತಹ ಭ್ರಷ್ಟಾಚಾರಿಗಳ ವಿರುದ್ಧ ಧ್ವನಿಯೆತ್ತಿದ್ದು ಅವರ ವಿರುದ್ಧ ಸಂಘಟಿತ ದಾಳಿ ನಡೆಸಲು ಕಾರಣವಾಗಿರುವ ಸಾಧ್ಯತೆಯಿದೆ. ಆದರೆ ಇಂತಹ ಬೆದರಿಕೆಗಳು ತನ್ನನ್ನೇನೂ ಮಾಡಲು ಸಾಧ್ಯವಿಲ್ಲ ಎಂದು ಧನ್ಯಾ ದೃಢಧ್ವನಿಯಲ್ಲಿ ಹೇಳುತ್ತಾರೆ.

5,000 ಆದಿವಾಸಿ ದಲಿತ ಮಕ್ಕಳಿಗಾಗಿ ಅಲಪ್ಪುಝದ ತುರವೂರಿನಲ್ಲಿ ಸಿವಿಲ್ ಸರ್ವೀಸ್ ಕೋಚಿಂಗ್ ಸೆಂಟರ್ ನಡೆಸುತ್ತಿದ್ದಾರೆ. ಇದೇ ಮಾದರಿಯಲ್ಲಿ ತಿರುವನಂತಪುರದಲ್ಲಿ ಮತ್ತೊಂದು ಸೆಂಟರ್ ಕೆಲಸದಲ್ಲಿ ಅವರೀಗ ತೊಡಗಿಸಿಕೊಂಡಿದ್ದಾರೆ. ಇದರೊಂದಿಗೆ ಹಲವಾರು ಆದಿವಾಸಿ ಊರುಗಳ ಮಕ್ಕಳಿಗೆ ವಿದ್ಯಾಭ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದಾರೆ. ತನ್ನ ಕೆಲಸಗಳಿಗೆ ಪೊಲೀಸರಿಂದ ಮತ್ತು ರಾಜಕೀಯ ಸಂಘಟನೆಗಳಿಂದ ಬೆಂಬಲ ದೊರೆಯುತ್ತಿದೆ ಅವರು ಹೇಳುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X