ಕಾಸರಗೋಡು : ಶಾಲಾ ಅಡುಗೆ ಕಾರ್ಮಿಕರ ಸಂಘಟನೆ (ಸಿಐಟಿಯು) ಉದ್ಘಾಟನೆ

ಕಾಸರಗೋಡು : ಶಾಲಾ ಅಡುಗೆ ಕಾರ್ಮಿಕರ ಸಂಘಟನೆ (ಸಿಐಟಿಯು) ಮಂಜೇಶ್ವರ ಉಪಜಿಲ್ಲಾ ಕುಟುಂಬ ಸಂಗಮ ಮಂಜೇಶ್ವರದಲ್ಲಿ ನಡೆಯಿತು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಂಕರ ರೈ ಉದ್ಘಾಟಿಸಿದರು.
ಕಾರ್ಮಿಕರಿಗೆ ಸರಕಾರದಿಂದ ಲಭಿಸಬೇಕಾದ ಸೌಲಭ್ಯಗ ಳಿಂದ ವಂಚಿತರಾಗುತ್ತಿದ್ದಾರೆ. ಇದರಿಂದ ಕಾರ್ಮಿಕರು ಹೋರಾಟ ನಡೆಸಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಹೇಳಿದರು.
ಡಿ. ಕಮಲಾಕ್ಷ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರನ್ , ಅಧ್ಯಕ್ಷೆ ಶೋಭಾ , ಸದಸ್ಯೆ ಸವಿತಾ ಕುಂಬಳೆ , ಚಂದಪ್ಪ ಮಾಸ್ಟರ್, ಅಬ್ದುಲ್ ರಜಾಕ್ , ಪ್ರಭಾಕರ ಶೆಟ್ಟಿ , ಕರುಣಾಕರ ಶೆಟ್ಟಿ , ಇಬ್ರಾಹಿಂ ರಾಮತ್ತ ಮಜಲ್ ಮಾತನಾಡಿದರು.
ಅಡುಗೆ ಕಾರ್ಮಿಕರನ್ನು ಖಾಯಂ ಗೊಳಿಸಬೇಕು , ಕನಿಷ್ಠ ವೇತನ ಜಾರಿಗೆ ತರಬೇಕು , ಕೂಡಲೇ ಬೋನಸ್ ವಿತರಿಸಬೇಕು ಎಂದು ಒತ್ತಾಯಿಸಲಾಯಿತು.
ವೇದಾವತಿ ಸ್ವಾಗತಿಸಿ , ನಳಿನಿ ಬೇಕೂರು ವಂದಿಸಿದರು.
Next Story





