ಪಿ.ಎ. ಪಾಲಿಟೆಕ್ನಿಕ್‌ನಲ್ಲಿ ಕಾರ್ಯಾಗಾರ , ಯಶಸ್ಸಿನೆಡೆಗೆ ಸಣ್ಣ ಹೆಜ್ಜೆಗಳು
.jpg)
ವಿದ್ಯಾರ್ಥಿಗಳು ಕಲಿಕೆಯಲ್ಲಿ ಸಣ್ಣ ಸಣ್ಣ ವಿಷಯಗಳಲ್ಲಿ ಪರಿಣತಿ ಹೊಂದಿ ಮತ್ತು ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡು ಯಶಸ್ಸಿನೆಡೆಗೆ ಸಾಗಬೇಕೆಂದು ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಯಾಂತ್ರಿಕ ವಿಭಾಗದ ಮುಖ್ಯಸ್ಥ ಡಾ!! ಥಾಮಸ್ ಪಿಂಟೋ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು ಅವರು ಪಿ.ಎ. ಪಾಲಿಟೆಕ್ನಿಕ್‌ನ ಯಾಂತ್ರಿಕ ವಿಭಾಗ ಆಯೋಜಿಸಿದ್ದ ಯಶಸ್ಸಿನೆಡೆಗೆ ಸಣ್ಣ ಹೆಜ್ಜೆಗಳು ಎಂಬ ಕಾರ್ಯಗಾರದಲ್ಲಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ.ಪಿ.ಸೂಫಿಯವರು ಕಲಿಕೆಯೊಂದಿಗೆ ವ್ಯಕ್ತಿತ್ವ ವಿಕಸನ ಹೊಂದುವ ನಿಟ್ಟಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಉಪಪ್ರಾಂಶುಪಾಲರಾದ ಪ್ರೊ.ಇಸ್ಮಾಯಿಲ್ ಖಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯಾಂತ್ರಿಕ ವಿಭಾಗದ ಮುಖ್ಯಸ್ಥರಾದ ಪ್ರೊ.ಹರೀಶ್ ಕುಮಾರ್ ಅತಿಥಿ ಪರಿಚಯ ಮಾಡಿದರು. ಉಪನ್ಯಾಸಕರಾದ ಪ್ರೊ.ಉಸ್ಮಾನ್ ನಖಾಶ್‌ರವರು ಸ್ವಾಗತಿಸಿದರು ಮತ್ತು ಪ್ರೊ.ಪ್ರದೀಪ್ ರೈ ವಂದಿಸಿದರು ವಿದ್ಯಾರ್ಥಿ ಪ್ರತ್ವನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.





