Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪಂಡಿತರು ಮಾತ್ರವಲ್ಲ, ಮುಸ್ಲಿಮರೂ...

ಪಂಡಿತರು ಮಾತ್ರವಲ್ಲ, ಮುಸ್ಲಿಮರೂ ಕಾಶ್ಮೀರ ಬಿಟ್ಟು ಬಂದಿದ್ದಾರೆ !

ಗೋವಾದಲ್ಲೇ 10,000 ಕಾಶ್ಮೀರಿ ಮುಸ್ಲಿಮರು ನೆಲೆಸಿದ್ದಾರೆ.

ವಾರ್ತಾಭಾರತಿವಾರ್ತಾಭಾರತಿ14 March 2016 5:36 PM IST
share
ಪಂಡಿತರು ಮಾತ್ರವಲ್ಲ, ಮುಸ್ಲಿಮರೂ ಕಾಶ್ಮೀರ ಬಿಟ್ಟು ಬಂದಿದ್ದಾರೆ !

ಜಮ್ಮು,ಮಾ.4: 1990ರ ದಶಕದಲ್ಲಿ ಮೆಶೀನು ಗನ್ನುಗಳನ್ನು ಹಿಡಿದ ಬಂಡುಕೋರರು ಕಾಶ್ಮೀರದ ಅಲ್ಪಸಂಖ್ಯಾತಪಂಡಿತರನ್ನು ಹೊರ ಹಾಕಿದಾಗ ಕಾಶ್ಮೀರಿ ಪಂಡಿತರೊಂದಿಗೆ ಕೆಲವು ಕಾಶ್ಮೀರಿ ಮುಸ್ಲಿಂ ಕುಟುಂಬಗಳೂ, ಯುವಕರೂ ಕಣಿವೆಯನ್ನು ಬಿಟ್ಟು ಹೊರನಡೆದಿದ್ದು, 26 ವರ್ಷಗಳ ನಂತರಈ ಕುಟುಂಬಗಳು ದೇಶದಾದ್ಯಂತ ಪಸರಿಸಿದ್ದು ಅಲ್ಲಿ ತಮ್ಮ ಹೊಸ ಬಾಳುವೆಯನ್ನು ಆರಂಭಿಸಿವೆ. ಗೋವಾ ರಾಜ್ಯವೊಂದರಲ್ಲೇ ಸುಮಾರು 10,000ಕ್ಕೂ ಅಧಿಕ ಕಾಶ್ಮೀರಿ ಮುಸ್ಲಿಮರಿದ್ದಾರೆಂದು ಟೈಮ್ಸ್ ನ್ಯೂಸ್ ನೆಟ್‌ವರ್ಕ್ ವರದಿಯೊಂದು ಹೇಳಿದೆ.

ಹೀಗೆ ಕಾಶ್ಮೀರವನ್ನು 2000ರಲ್ಲಿ ತ್ಯಜಿಸಿ ಬಂದಿದ್ದ ಸಯೀದ್ ಎಂಬ ಯುವಕ ಗೋವಾದಲ್ಲಿ ಕಾಶ್ಮೀರಿ ಶಾಲ್ ಹಾಗೂರತ್ನಗಳ ವ್ಯಾಪಾರ ಮಾಡಲಾರಂಭಿಸಿದ್ದರೆ. ಅಂತೆಯೇ ತನ್ನ ಹೆಸರು ಹೇಳಲಿಚ್ಛಿಸದ ಇನ್ನೊಬ್ಬ ಯುವಕ ಹೀಗೆಂದು ಹೇಳುತ್ತಾನೆ ‘‘ರಾಜಕೀಯದಲ್ಲಿ ಆಸಕ್ತಿಯಿರುವ ನನ್ನಂಥವರಿಗೆಕಾಶ್ಮೀರದಲ್ಲಿ ಸ್ವತಂತ್ರವಾಗಿ ಜೀವಿಸಲು ಸಾಧ್ಯವಿಲ್ಲ.’’ ಆದರೆ ಈ 24 ವರ್ಷದ ಯುವಕಗೋವಾದ ಬಾರ್ ಮತ್ತು ರೆಸ್ಟೊರೆಂಟುಗಳಲ್ಲಿ ದುಡಿಯುತ್ತಿದ್ದು ಇಲ್ಲಿನ ಜನರೊಂದಿಗೆ ಸಹಬಾಳ್ವೆ ನಡೆಸುವುದು ಸುಲಭವೆಂದು ಹೇಳುತ್ತಾರೆ.

ಕೊಚ್ಚಿಯಲ್ಲಿ ಕೂಡ ಸುಮಾರು 40 ಕಾಶ್ಮೀರಿ ಕುಟುಂಬಗಳುಕರಕುಶಲ ವಸ್ತುಗಳ ಮಾರಾಟ ನಡೆಸುತ್ತಿವೆ. ಇಲ್ಲಿ ನಮಗೆ ನಮ್ಮದೇ ಆದ ಮನೆಯಿದೆ ಹಾಗೂ ಎಲ್ಲದಕ್ಕಿಂತ ಹೆಚ್ಚಾಗಿ ಶಾಂತಿಯಿದೆ, ಎಂದು ಕೊಚ್ಚಿಯಲ್ಲಿ ಕರಕುಶಲ ವಸ್ತುಗಳ ಶೋರೂಂ ನಡೆಸುವ ಗುಲ್ಶನ್ ಖಟಾಯ್ ಹೇಳುತ್ತಾರೆ. ತಮ್ಮ ತವರು ರಾಜ್ಯದ ಮೇಲೆ ಈ ಕಾಶ್ಮೀರಿಗಳಿಗೆ ಅಪಾರ ಪ್ರೀತಿಯಿದ್ದರೂ ಅವರು ಯಾರು ಮತ್ತೆ ಅಲ್ಲಿಗೆ ಹೋಗ ಬಯಸುವುದಿಲ್ಲ.

ಕಳೆದ ಎರಡು ದಶಕಗಳಿಂದೀಚೆ ಎಷ್ಟು ಕಾಶ್ಮೀರಿ ಮುಸ್ಲಿಮರು ಕಣಿವೆಯನ್ನು ಬಿಟ್ಟು ತೆರಳಿದ್ದಾರೆಂಬುದಕ್ಕೆ ಅಧಿಕೃತ ದಾಖಲೆಗಳಿಲ್ಲದಿದ್ದರೂ ಅವರಲ್ಲಿ ಹಲವರು ಹತ್ತಿರದ ದಿಲ್ಲಿಯನ್ನು ತಮ್ಮ ಮನೆಯಾಗಿಸಿದ್ದಾರೆ.

ಐಟಿ ಕ್ಷೇತ್ರದಲ್ಲಿ ಬೆಂಗಳೂರು ಹಾಗೂ ಪುಣೆ ಸಾಧಿಸಿದ ಅಭಿವೃದ್ಧಿ ಹಲವು ಕಾಶ್ಮೀರಿಗಳನ್ನು ಅತ್ತ ಸೆಳೆದಿದ್ದು ಬೆಂಗಳೂರಿನಲ್ಲಿ ಸುಮಾರು 500 ಕಾಶ್ಮೀರಿ ಕುಟುಂಬಗಳು ನೆಲೆಸಿವೆಯೆಂದು ಅಲ್ಲಿನ ಕಾಶ್ಮೀರ ಎಸೋಸಿಯೇಶನ್ ಮಾಹಿತಿ ನೀಡುತ್ತದೆ. ಬೆಂಗಳೂರಿನಲ್ಲಿ ಕಾಶ್ಮೀರಿ ಹಿಂದು ಕಲ್ಚರ್ ವೆಲ್ಫೇರ್ ಟ್ರಸ್ಟ್ ಇದ್ದು ಹೆಚ್ಚಿನ ಎಲ್ಲಾ ಕಾಶ್ಮೀರಿ ಕುಟುಂಬಗಳು ಇದರ ಸದಸ್ಯರಾಗಿವೆ.

ಕೃಪೆ: Times of India

share
ವಾರ್ತಾಭಾರತಿ
ವಾರ್ತಾಭಾರತಿ
Next Story
X