ವಿಟ್ಲ : ಸ್ವಸ್ಥ ಸಮಾಜ ನಿರ್ಮಾಣದಲ್ಲಿ 'ಸಮಸ್ತ'ದ ಕೊಡುಗೆ ಅನನ್ಯ - ಕೋಯಮ್ನ ತಂಙಳ್

ವಿಟ್ಲ : ನಿಷ್ಕಳಂಕರಾಗಿ ಬಾಳಿ ಧರ್ಮ ಹಾಗೂ ಸಮಾಜಕ್ಕಾಗಿ ಅಹರ್ನಿಶಿ ದುಡಿದು ಅಗಲಿದ ’ಸಮಸ್ತ’ದ ಉಲಮಾಗಳು ಪ್ರತಿ ಮಹಲ್ಲಾಗಳಲ್ಲೂ ಧರ್ಮ ಜಾಗೃತಿ ಹಾಗೂಶೈಕ್ಷಣಿಕ ಕ್ರಾಂತಿಯ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ನೀಡಿದ ಕೊಡುಗೆ ಅನನ್ಯವಾಗಿದೆ ಎಂದು ಸಯ್ಯದ್ ಎನ್.ಪಿ.ಎಂ.ಫಝಲ್ ಹಾಮಿದ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕುನ್ನುಂಗೈ ಅವರು ಹೇಳಿದರು.
ಕೊಡಂಗಾಯಿ ಎಸೆ್ಕಎಸ್ಸೆಸ್ಸೆಫ್ ಮತ್ತು ಎಸ್.ವೈ.ಎಸ್ ವತಿಯಿಂದ ಕೊಡಂಗಾಯಿ ಶಂಸುಲ್ ಉಲಮಾ ನಗರದಲ್ಲಿ ನಡೆದ ಝೈನುಲ್ ಉಲಮಾ ಚೆರುಶ್ಶೇರಿ ಉಸ್ತಾದ್ ಮತ್ತು ’ಸಮಸ್ತ’ದ ಅಗಲಿದ ನೇತಾರರ ಅನುಸ್ಮರಣಾ ಸಮ್ಮೇಳನದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಕೇರಳದ ಖ್ಯಾತ ವಾಗ್ಮಿ ಅಶ್ರಫ್ ರಹ್ಮಾನಿ ಚೌಕಿ ಅವರು ಮಾತನಾಡಿ, ಸಮಾಜದಲ್ಲಿ ಅತ್ಯುನ್ನತ ಸ್ಥಾನಕ್ಕೇರಿದರೂ ಅಹಂ ಇಲ್ಲದೆ ಸರಳ ಸಜ್ಜನಿಕೆಯ ಸಾತ್ವಿಕ ಬದುಕು ಕಟ್ಟಿ ನಮ್ಮಿಂದ ಅಗಲಿದ ಶೈಖುನಾ ಶಂಸುಲ್ ಉಲಮಾ,ಝೈನುಲ್ ಉಲಮಾರಂತಹ ವಿಶ್ವೋತ್ತರ ವಿದ್ವಂಸರು ಸರ್ವರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು
ಸಮಾರಂಭದ ಅಧ್ಯಕ್ಷತೆಯನ್ನು ಅಬು ಸಿನಾನ್ ಕೆ.ಕೆ.ಇಸ್ಮಾಯಿಲ್ ಮುಸ್ಲಿಯಾರ್ ಅವರು ವಹಿಸಿದ್ದರು.ಕೆ.ಬಿ.ದಾರಿಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶೈಖುನಾ ಪಾತೂರ್ ಉಸ್ತಾದ್ ಅವರು ತಹ್ಲೀಲ್ ಸಮರ್ಪಣೆ ಹಾಗು ಪ್ರಾರ್ಥನೆಗೆ ನೇತೃತ್ವ ನೀಡಿದರು. ಇದೆ ಸಂದರ್ಭದಲ್ಲಿ ಎಸ್ಕೆಎಸ್ಸೆಸ್ಸೆಫ್ ರಾಜ್ಯಧ್ಯಕ್ಷ ಅನೀಸ್ ಕೌಸರಿ ಮತ್ತು ಲೇಖಕ ಕೆ.ಎಂ.ಎ.ಕೊಡುಂಗಾಯಿ ಅವರನ್ನು ಶಾಲು ಹೊದಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಹಕೀಂ ಪರ್ತಿಪ್ಪಾಡಿ, ಶರೀಫ್ ಮೂಸಾ ಕುದ್ದುಪದವು,ಪ್ರೊ.ಅನೀಸ್ ಕೌಸರಿ ಕುಂಬ್ರ,ಅಬೂಬಕ್ಕರ್ ಹಾಜಿ ಕೊಡಂಗಾಯಿ,ಇಸ್ಮಾಯಿಲ್ ಹಾಜಿ ಅರಫಾ, ಅಶ್ರಫ್ ಕಬಕ, ಸಿ.ಎಚ್.ಇಬ್ರಾಹಿಂ ಮುಸ್ಲಿಯಾರ್, ಇಸ್ಮಾಯಿಲ್ ಹನೀಫಿ,ಟಿ. ಅಬ್ದುಲ್ ಹಮೀದ್ ಕೊಡಂಗಾಯಿ, ಉಮರ್ ದಾರಿಮಿ ಪರ್ತಿಪ್ಪಾಡಿ, ಅಬ್ದುಲ್ಲಾ ಹಾಜಿ ಕಡಂಬು,ಇಸ್ಮಾಯಿಲ್ ಆರ್.ಸಿ.ಕೆ. , ಹಮೀದ್ ಪರ್ತಿಪ್ಪಾಡಿ, ಹಸೈನಾರ್ ಮುಸ್ಲಿಯಾರ್ ಪರ್ತಿಪ್ಪಾಡಿ, ಇಬ್ರಾಹಿಂ ಝೈನಿ ಕೊಡಂಗಾಯಿ, ವಿ.ಎಸ್.ಇಬ್ರಾಹಿಂ, ಶಮೀರ್ ಪಳಿಕೆ ,ಅನ್ವರ್ ಸಾದಿಕ್ ಮಂಗಳೂರ್, ಹನೀಫ್ ಕುಡ್ತಮುಗೇರ್ ಮೊದಲಾದವರು ಉಪಸ್ಥಿತರಿದ್ದರು. ಕೆ.ಎಂ.ಎ.ಕೊಡುಂಗಾಯಿ ಸ್ವಗತಿಸಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.ಅಬ್ದುಲ್ ಗಫೂರ್ ಕೊನೆಗೆ ವಂದಿಸಿದರು.





