ಉಳ್ಳಾಲ: ಕೆಲಸಕ್ಕೆಂದು ಮುಂಬಯಿಗೆ ತೆರಳಿದ್ದ ವ್ಯಕ್ತಿ ನಾಪತ್ತೆ

ಉಳ್ಳಾಲ: ಕೆಲಸಕ್ಕೆಂದು ಮುಂಬಯಿಗೆ ತೆರಳಿದ್ದ ವ್ಯಕ್ತಿ ನಾಪತ್ತೆಯಾಗಿರುವ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆರೆ ಬೈಲ್ ಕೊರಗಜ್ಜ ಕಟ್ಟೆ ನಿವಾಸಿ ಸುನಿಲ್ ಶೆಟ್ಟಿ(40) ನಾಪತ್ತೆಯಾದವರು. ಇವರು ಮಾರ್ಚ್ 7ರಂದು ಮುಂಬಯಿಗೆ ಕೆಲಸಕ್ಕೆ ಹೋದವರು ಅಲ್ಲಿ ಕೆಲಸ ಸಿಗದೇ ಮತ್ತೆ ರೈಲಿನಲ್ಲಿ ವಾಪಸ್ಸಾಗಿ ದಾರಿ ಮಧ್ಯೆ ಅಂಕೋಲದಲ್ಲಿ ಇಳಿದಿದ್ದಾರೆ. ಈ ಬಗ್ಗೆ ಪತ್ನಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಸುನೀಲ್ ಬಳಿಕ ಮನೆಗೆ ವಾಪಾಸ್ಸಗದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಜಯಶ್ರೀ ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story





