ಉಳ್ಳಾಲ: ಬಾರಿನಲ್ಲಿ ಕ್ಲಿನಿಂಗ್ ಕೆಲಸ ಮಾಡುತ್ತಿದ್ದ ಯುವಕ ನಾಪತ್ತೆ

ಉಳ್ಳಾಲ: ಬಾರಿನಲ್ಲಿ ಕ್ಲಿನಿಂಗ್ ಕೆಲಸ ಮಾಡುತ್ತಿದ್ದ ಯುವಕನೋರ್ವ ನಾಪತ್ತೆಯಾಗಿರುವ ಕುರಿತು ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಾಂಡೇಶ್ವರದ ಮಂಗಳಾದೇವಿ ನಿವಾಸಿ ಕುಶನ್ (27) ನಾಪತ್ತೆಯಾದವರು.
ಸುಮಾರು ಎರಡು ವರ್ಷಗಳಿಂದ ಉಳ್ಳಾಲದ ಸ್ವಾತಿ ಬಾರಿನಲ್ಲಿ ಕ್ಲಿನಿಂಗ್ ಕೆಲಸ ಮಾಡಿಕೊಂಡಿದ್ದ ಇವರು ಮಾರ್ಚ್ 11 ರಂದು ಬೆಳಿಗ್ಗೆ ಬಾರ್ ಕೆಲಸ ಮುಗಿಸಿ ಬಸ್ಸು ಹತ್ತಿಕೊಂಡು ಹೋದವರು ವಾಪಸ್ಸು ಕೆಲಸಕ್ಕೆ ಮತ್ತು ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ. ಕುಶನ್ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ಈ ಕುರಿತು ಸಹೋದರಿ ಜಯಶ್ರೀ ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story





