ಉಳ್ಳಾಲ: ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಯುವಕ

ಉಳ್ಳಾಲ; ರೈಲು ಢಿಕ್ಕಿ ಹೊಡೆದು ಯುವಕನೋರ್ವ ಸಾವನ್ನಪ್ಪಿದ ಘಟನೆ ತೊಕ್ಕೊಟ್ಟು ಕಾಪಿಕಾಡು ರೈಲ್ವೇ ಹಳಿಯಲ್ಲಿ ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಕುಂಪಲ ಬೈಪಾಸ್ ಬಳಿಯ ಶ್ರೀನಿವಾಸ್ ಮತ್ತು ಜಯಂತಿ ದಂಪತಿ ಪುತ್ರ ಜಿತೇಶ್ (26) ಸಾವನ್ನಪ್ಪಿದವರು. ಭಾನುವಾರ ಬೆಳಿಗ್ಗೆ ಕೆಲಸಕ್ಕೆಂದು ತೆರಳಿದವರು ಬಳಿಕ ಮನೆಗೆ ವಾಪಸ್ಸಾಗಿರಲಿಲ್ಲ. ಸೋಮವಾರ ಬೆಳಿಗ್ಗೆ ಜಿತೇಶ್ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆಯಾಗಿದೆ. ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿರುವ ಕುರಿತು ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಇಲೆಕ್ಷ್ಟ್ರೀಷಿಯನ್ ಆಗಿರುವ ಜಿತೇಶ್ ಅವಿವಾಹಿತರಾಗಿದ್ದರು. ಭಾನುವಾರ ಕೆಲಸಕ್ಕೆ ರಜೆಯೂ ಇದ್ದುದರಿಂದ ರೈಲ್ವೇ ಹಳಿ ಸಮೀಪ ಕುಳಿತಿದ್ದ ಸಂದರ್ಭ ಘಟನೆ ಸಂಭವಿಸಿರಬಹುದು. ತಂದೆ, ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.
Next Story





