ಕಾಸರಗೋಡು : ಕಡಲ ಕಿನಾರೆಯಲ್ಲಿ ಅಪರಿಚಿತ ಪುರುಷನ ಮ್ರತದೇಹ ಪತ್ತೆ
ಕಾಸರಗೋಡು : ನೆಲ್ಲಿಕುಂಜೆ ಲೈಟ್ ಹೌಸ್ ಸಮೀಪ ಕಡಲ ಕಿನಾರೆಯಲ್ಲಿ ಅಪರಿಚಿತ ಪುರುಷನ ಮ್ರತದೇಹ ಸೋಮವಾರ ಸಂಜೆ ಪತ್ತೆಯಾಗಿದೆ.
ಸುಮುದ್ರದಲ್ಲಿ ತೇಲಿಬಂದು ದಡಕ್ಕಪ್ಪಳಿಸಿದ್ದು, ಗುರುತು ಹಿಡಿಯದ ಸ್ಥಿತಿಯಲ್ಲಿದೆ. ನಾಲ್ಕು ದಿನಗಳ ಹಿಂದೆ ಮ್ರತಪಟ್ಟಿರಬಹುದು ಎಂದು ಶಂಕಿಸಲಾಗಿದೆ .
ಸುಮಾರು ೪೦ ವರ್ಷ ಪ್ರಾಯ ಅಂದಾಜಿಸಲಾಗಿದೆ.
ನೀಲಿ ಜೀನ್ಸ್ ಪ್ಯಾಂಟ್ ಮತ್ತು ನೀಲಿ, ಕೆಂಪು ಗೆರೆ ಹೊಂದಿರುವ ಬಿಳಿ ಶರ್ಟ್ ಧರಿಸಿದ್ದಾನೆ.
ಕಾಸರಗೋಡು ನಗರ ಟಾಣಾ ಪೊಲೀಸರು ಮಹಜರು ನಡೆಸಿ ಮ್ರತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
Next Story





