ಪಾಕಿಸ್ತಾನ್ ಜಿಂದಾಬಾದ್ ರವಿಶಂಕರ್ ಕೂಗು ಎಷ್ಟು ಸರಿ?
ಶ್ರೀ ರವಿಶಂಕರ್ ಅವರು ಸದಾ ವಿವಾದಗಳ ಕೇಂದ್ರವಾಗಿಯೇ ಬದುಕುತ್ತಿರುವವರು. ಅವರ ನಡವಳಿಕೆ, ವರ್ತನೆ, ಅವರ ಮೇಲಿರುವ ಆರೋಪಗಳೆಲ್ಲ ರವಿಶಂಕರ್ ಹೇಗೆ ಱಬದುಕುವಲ್ಲಿ ಎಡವಿದ್ದಾರೆೞಎನ್ನುವುದನ್ನು ಪದೇ ಪದೇ ಸಾಬೀತು ಮಾಡುತ್ತಿರುತ್ತದೆ. ಶಂಕಿತ ಉಗ್ರ ಪುರೋಹಿತ್ ಎಂಬಾತ ಇವರ ಶಿಬಿರದಲ್ಲಿ ಕೆಲವರಿಗೆ ತರಬೇತಿ ನೀಡಿದ್ದ ಎನ್ನುವವರೆಗೂ ಆರೋಪಗಳನ್ನು, ವಿವಾದಗಳನ್ನು ಮೈಮೇಲೆ ಎಳೆದುಕೊಂಡಿರುವ ರವಿಶಂಕರ್ ತಮ್ಮ ಶಿಬಿರದಲ್ಲಿ ತಮ್ಮ ಶಿಷ್ಯರಿಗೆ ಅದು ಯಾವ ರೀತಿಯ ಬದುಕುವ ಕಲೆಯನ್ನು ಹೇಳಿಕೊಡುತ್ತಾರೆನ್ನುವುದೇ ನಿಗೂಢವಾಗಿದೆ. ಅವರ ಶಿಬಿರದಲ್ಲಿ ಬದುಕಿನ ಕಲೆಯನ್ನು ಕಲಿತು ಹೊರಬಂದ ವ್ಯಕ್ತಿಗಳಲ್ಲಿ ಒಬ್ಬನೇ ಒಬ್ಬ ಶ್ರೇಷ್ಟ ವ್ಯಕ್ತಿತ್ವವಿರುವವನನ್ನು ದೇಶ ಈವರೆಗೆ ಕಂಡಿಲ್ಲ.
ಸ್ವತಃ ಬದುಕನ್ನು ಕಲಿಯಬೇಕಾದವರು, ಇತರರಿಗೆ ಬದುಕುವ ಕಲೆಯನ್ನು ಹೇಳಿಕೊಡುವ ಮೂಲಕ ಕೋಟಿಗಟ್ಟಲೆ ಆಸ್ತಿ, ಸಂಪತ್ತನ್ನು ಮಾಡಿಕೊಳ್ಳುತ್ತಾರೆ ಎನ್ನುವುದು ವರ್ತಮಾನದ ವ್ಯಂಗ್ಯವೇ ಸರಿ. ಇದೀಗ ಹಲವು ಕೋಟಿ ರೂಪಾಯಿಗಳನ್ನು ಚೆಲ್ಲಿ ವಿಶ್ವ ಸಂಸ್ಕೃತಿ ಸಮ್ಮೇಳನವನ್ನು ಮಾಡಿದ್ದಾರೆ. ಇಲ್ಲಿ ಅವರು ಅದಾವ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದರು ಎಂಬ ಬಗ್ಗೆ ಎಲ್ಲರಿಗೂ ಗೊಂದಲಗಳಿವೆ. ಪರಿಸರವನ್ನು ನಾಶ ಮಾಡುವುದು, ರೈತರ ಕೃಷಿಯನ್ನು ಧ್ವಂಸಗೊಳಿಸಿ ಅಲ್ಲಿ ತಮ್ಮ ಶಿಬಿರವನ್ನು ಸ್ಥಾಪಿಸುವುದು, ಕಾನೂನನ್ನು ಉಲ್ಲಂಸುವುದು, ದಂಡ ಕಟ್ಟಲು ಹೇಳಿದರೆ ಅದರಿಂದ ನುಣುಚಿಕೊಳ್ಳುವುದು ಇವೆಲ್ಲವೂ ಸಂಸ್ಕೃತಿಯೇ? ಇವುಗಳನ್ನೆಲ್ಲ ಪರಿಚಯಿಸಲು ಈ ಪ್ರಮಾಣದಲ್ಲಿ ಹಣವನ್ನು ಚೆಲ್ಲಲಾಯಿತೇ? ರವಿಶಂಕರ್ ಗುರೂಜಿಯವರೇ ಉತ್ತರಿಸಬೇಕು. ಅಥವಾ ಅವರ ಸಮ್ಮೇಳನದಲ್ಲಿ ಸಂಭ್ರಮದಲ್ಲಿ ಭಾಗವಹಿಸಿರುವ ನಮ್ಮ ಪ್ರಧಾನಮಂತ್ರಿ, ಗೃಹಸಚಿವ, ಮುಖ್ಯಮಂತ್ರಿ ಕೇಜ್ರಿವಾಲ್ ಅವರಾದರೂ ಇದಕ್ಕೆ ಸ್ಪಷ್ಟೀಕರಣ ನೀಡಬೇಕು. ಇದರ ಜೊತೆ ಜೊತೆಗೆ ಸಮಾವೇಶದಲ್ಲಿ ಕಾರ್ಯಕ್ರಮ ನೀಡಲು ಬಂದ, ವಿಶ್ವದ ನೂರಾರು ಕಲಾವಿದರು, ಅಲ್ಲಿ ತಾವು ಅನುಭವಿಸಿದ ನರಕಸದೃಶ ಅನುಭವವನ್ನು ಹಂಚಿಕೊಂಡಿರುವುದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇವೆಲ್ಲದರ ಇನ್ನೊಂದು ವಿವಾದ ರವಿಶಂಕರ್ ಅವರನ್ನು ಸುತ್ತಿಕೊಂಡಿದೆ. ತನ್ನ ಸಮಾವೇಶದಲ್ಲಿ ರವಿಶಂಕರ್ ಅವರು ಱಪಾಕಿಸ್ತಾನ್‌ಜಿಂದಾಬಾದ್‌ೞಎಂದು ಕೂಗಿದ್ದಾರೆ ಎನ್ನುವ ವೀಡಿಯೊಗಳು, ಸುದ್ದಿಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ. ಪಾಕಿಸ್ತಾನದ ಅತಿಥಿಯೋರ್ವರನ್ನು ಸನ್ಮಾನಿಸಿದ ಬಳಿಕ ಅವರು ಱಜೈ ಹಿಂದ್ ಮತ್ತು ಪಾಕಿಸ್ತಾನ್ ಜಿಂದಾಬಾದ್‌ೞಜೊತೆ ಜೊತೆಯಾಗಿ ಸಾಗಬೇಕು ಎಂದು ಕರೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಕೂಡ ಉಪಸ್ಥಿತರಿದ್ದರು. ಅವರ ಉದ್ದೇಶ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗುವುದು ಆಗಿರಲಿಲ್ಲ ಮೇಲ್ನೋಟಕ್ಕೆ ಗೊತ್ತಾಗುತ್ತದೆ.
ಬದಲಿಗೆ ಭಾರತ ಮತ್ತು ಪಾಕಿಸ್ತಾನ ಜೊತೆ ಜೊತೆಯಾಗಿ ಸಾಗಬೇಕು ಎನ್ನುವ ಸದುದ್ದೇಶ ಅವರ ಮಾತಿನಲ್ಲಿತ್ತು. ಱನಮ್ಮ ಗೆಲುವು ಇನ್ನೊಬ್ಬರನ್ನು ಸೋಲಿಸುವುದರಲ್ಲಿಲ್ಲ. ನಾವು ಗೆದ್ದು, ಇನ್ನೊಬ್ಬರನ್ನು ಗೆಲ್ಲಿಸಬೇಕುೞಎಂದು ಈ ಸಂದರ್ಭದಲ್ಲಿ ಹೇಳುತ್ತಾ, ಅವರು ಪಾಕಿಸ್ತಾನ್ ಜಿಂದಾಬಾದ್ ಮತ್ತು ಜೈಹಿಂದ್ ಕರೆಯನ್ನು ಜೊತೆಯಾಗಿ ನೀಡಿದ್ದರು. ಅವರು ಹೇಳಿರುವುದರಲ್ಲಿ ಅತಿಯಾದುದೇನೂ ಇಲ್ಲ. ಪಾಕಿಸ್ತಾನದೊಂದಿಗೆ ಯುದ್ಧವಾಗಬೇಕು, ಪಾಕಿಸ್ತಾನ ಸರ್ವನಾಶವಾಗಬೇಕು ಎಂದೆಲ್ಲ ಬೀದಿಯಲ್ಲಿ ಅರಚುವ ಯಾರೂ, ತಮ್ಮ ಮಕ್ಕಳನ್ನು ಸೈನಿಕ ಹುದ್ದೆಗೆ ಸೇರಿಸುವುದಿಲ್ಲ. ಭಾರತ ಅಭಿವೃದ್ಧಿಯಾಗಬೇಕಾದರೆ, ನೆರೆ-ಹೊರೆಯ ಜೊತೆಗೆ ಸಂಬಂಧ ಚೆನ್ನಾಗಿರಬೇಕು. ಯುದ್ಧ ಮತ್ತು ಅಭಿವೃದ್ಧಿ ಜೊತೆ ಜೊತೆಯಾಗಿ ಸಾಗಲು ಸಾಧ್ಯವೇ ಇಲ್ಲ.
ಆದುದರಿಂದ ಉಭಯ ದೇಶಗಳು ಪರಸ್ಪರರನ್ನು ಗೌರವಿಸುವುದು ಅತ್ಯಗತ್ಯ. ಈ ಹಿನ್ನೆಲೆಯಲ್ಲಿಯೇ ರವಿಶಂಕರ್ ಅವರು ಱಜೈ ಹಿಂದ್ ಜೊತೆಗೆ ಪಾಕಿಸ್ತಾನ್ ಜಿಂದಾಬಾದ್‌ೞಎಂಬ ಹೇಳಿಕೆಯನ್ನು ನೀಡಿರಬಹುದು. ಇಷ್ಟಕ್ಕೂ ಱಪಾಕಿಸ್ತಾನ್ ಜಿಂದಾಬಾದ್ ಅಥವಾ ಅಮೆರಿಕ ಜಿಂದಾಬಾದ್ ಅಥವಾ ಆಸ್ಟ್ರೇಲಿಯಾ ಜಿಂದಾಬಾದ್‌ೞಎಂದು ಹೇಳುವುದು ದೇಶವಿರೋಯೇನೂ ಅಲ್ಲ. ಅದರ ಅರ್ಥ ಱಭಾರತ ಮುರ್ದಾಬಾದ್‌ೞಎಂದೂ ಅಲ್ಲ. ಱಇಡೀ ವಿಶ್ವವೇ ಒಂದು ಕುಟುಂಬೞಎಂದು ಭಾವಿಸಿರುವ ಸಂಸ್ಕೃತಿ ನಮ್ಮದು. ಹೀಗಿರುವಾಗ, ಅನ್ಯ ದೇಶಗಳೂ ಉದ್ಧಾರವಾಗಲಿ ಎಂದು ಭಾವಿಸಿದರೆ, ಅದು ನಮ್ಮ ದೇಶವನ್ನು ಹೀಗಳೆದಂತೆ ಅಲ್ಲ. ಈ ನಿಟ್ಟಿನಲ್ಲಿ ರವಿಶಂಕರ್ ಱಪಾಕಿಸ್ತಾನ್ ಜಿಂದಾಬಾದ್‌ೞಎಂದು ಕೂಗಿದಾಕ್ಷಣ ಆಕಾಶ ಹರಿದು ಕೆಳಗೆ ಬೀಳಬೇಕಾಗಿಲ್ಲ.
ಆದರೆ ಇಲ್ಲಿರುವ ಮುಖ್ಯಪ್ರಶ್ನೆ, ರವಿಶಂಕರ್ ಎನ್ನುವ ರಾಜಕಿಯೇತರ ವ್ಯಕ್ತಿ, ಸ್ವತಃ ಗೃಹಸಚಿವರ ಸಮ್ಮುಖದಲ್ಲಿ ಱಪಾಕಿಸ್ತಾನ್ ಜಿಂದಾಬಾದ್‌ೞಎಂದು ಕೂಗಿದರೂ ಅವರ ಮೇಲೆ ಯಾವುದೇ ಮೊಕದ್ದಮೆ ಹೂಡದ ನಮ್ಮ ಸರಕಾರ, ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ನಕಲಿ ವೀಡಿಯೊ ಒಂದರ ಆಧಾರದಲ್ಲಿ ಱದೇಶ ವಿರೋೞಪ್ರಕರಣವನ್ನು ಹೂಡಿದೆ. ಅವರಲ್ಲಿ ಓರ್ವನನ್ನು ಬಂಸಿ, ಶರತ್ತು ಬದ್ಧ ಜಾಮೀನಿನಲ್ಲಿ ಬಿಡುಗಡೆ ಮಾಡಿದೆ. ಇನ್ನು ಕೆಲವು ವಿದ್ಯಾರ್ಥಿಗಳು ಜೈಲಿನೊಳಗಿದ್ದಾರೆ. ಇದನ್ನು ನಾವು ಪ್ರಶ್ನಿಸಬೇಕಾಗಿದೆ. ದೇಶಪ್ರೇಮ ಮತ್ತು ದೇಶದ್ರೋಹಗಳ ಕುರಿತಂತೆ ಸಾವಿರ ಗೊಂದಲಗಳು, ಹಿಪಾಕ್ರಸಿಗಳನ್ನು ನಾವು ಹೊಂದಿದ್ದೇವೆ. ಅ್ಝಲ್‌ಗುರುವನ್ನು ಹುತಾತ್ಮ ಎಂದು ಕರೆಯುವ ಪಿಡಿಪಿಯ ಜೊತೆಗೆ ಮಿತ್ರತ್ವ ಮಾಡಿ ಸರಕಾರ ರಚಿಸುವ ಬಿಜೆಪಿ, ಅ್ಝಲ್ ಪರ ಘೋಷಣೆ ಕೂಗಿದ್ದಾರೆ ಎಂದು ಎಳೆಯ ವಿದ್ಯಾರ್ಥಿಗಳನ್ನು ಬಂಸುತ್ತದೆ ಮತ್ತು ಆ ಸರಕಾರದ ಉನ್ನತ ಸ್ಥಾನದಲ್ಲಿರುವವರು ಈ ವಿದ್ಯಾರ್ಥಿಗಳಿಗೆ ದೇಶಪ್ರೇಮದ ಪಾಠ ಹೇಳಿಕೊಡುತ್ತಾರೆ. ನಾಥೂರಾಂ ಗೋಡ್ಸೆಯನ್ನು ಹುತಾತ್ಮ ಎಂದು ಕರೆಯುವವರು ದೇಶಪ್ರೇಮದ ಕುರಿತಂತೆ ಭಾಷಣ ನೀಡುತ್ತಾರೆ. ಇಂದಿರಾಗಾಂಯ ಹಂತಕರ ಕುಟುಂಬಸ್ಥರನ್ನು ಸನ್ಮಾನಿಸುವ ರಾಜಕಾರಣಿಗಳು, ಎಲ್‌ಟಿಟಿಇ ಪರವಾಗಿ ಮಾತನಾಡುವ ಸರಕಾರ, ವಿದ್ಯಾರ್ಥಿಗಳಿಗೆ ದೇಶಪ್ರೇಮದ ಪಾಠ ಹೇಳಿಕೊಡಲು ಅರ್ಹವಾಗುತ್ತದೆಯೇ? ಜೆಎನ್‌ಯು ವಿದ್ಯಾರ್ಥಿಗಳು ದೇಶದ್ರೋಹಿಗಳಾದರೆ, ಪಾಕಿಸ್ತಾನ್ ಜಿಂದಾಬಾದ್ ಎನ್ನುವ ರವಿಶಂಕರ್ ಕೂಡ ದೇಶದ್ರೋಹಿಯಾಗಬೇಕಲ್ಲವೆ? ಅದಕ್ಕೆ ವೌನಸಾಕ್ಷಿಯಾದ ಗೃಹಸಚಿವರನ್ನು ದೇಶ ಏನೆಂದು ಕರೆಯಬೇಕು? ಈ ಕಾರಣದಿಂದಲೇ, ದೇಶದ್ರೋಹದ ಕಾನೂನಿನ ಕುರಿತಂತೆಯೇ ಸರಕಾರ ಒಂದು ಸ್ಪಷ್ಟ ನಿಲುವಿಗೆ ಬರಬೇಕಾಗಿದೆ. ಬ್ರಿಟಿಷರ ಕಾಲದ ರಾಜದ್ರೋಹ ಕಾನೂನನ್ನು ಇಂದಿಗೂ ಅಳವಡಿಸುವುದು ಹಾಗೆಯೇ ಪಾಕಿಸ್ತಾನವನ್ನು ಶತ್ರುವಾಗಿ ಬಿಂಬಿಸಿ ರಾಜಕೀಯ ಲಾಭ ನಡೆಸುವ ಪ್ರವೃತ್ತಿಯನ್ನು ರಾಜಕಾರಣಿಗಳು ಬಿಟ್ಟು ಬಿಡಬೇಕು. ಇಲ್ಲವಾದರೆ ಒಂದು ದಿನ, ಆ ರಾಜಕೀಯವೇ ಅವರಿಗೆ ತಿರುಗುಬಾಣವಾಗಿ ಪರಿಣಮಿಸಬಹುದು. ಇವತ್ತು ರವಿಶಂಕರ್ ಅವರಿಗಾದಂತೆ.







