ಇಲಾಖಾವಾರು ಸಾಧನೆಗಳು ಸಾರ್ವಜನಿಕರಿಗೆ ತಿಳಿಯುವಂತಾಗಲಿ
ಮಾನ್ಯರೆ,
ಪ್ರತಿವರ್ಷ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಮುಂಗಡ ಪತ್ರಗಳನ್ನು ಮಂಡಿಸುತ್ತಾರೆ.ಈ ಮುಂಗಡ ಪತ್ರಗಳಲ್ಲಿ ಆರೋಗ್ಯ,ಶಿಕ್ಷಣ, ಸಾರಿಗೆ, ರಸ್ತೆ, ಸಂಸ್ಕೃತಿ, ಹೀಗೆ ವಿವಿಧ ಪ್ರಕಾರಗಳಲ್ಲಿ ಇಲಾಖಾವಾರು ಹಣವನ್ನು ನಿಗದಿಪಡಿಸುತ್ತವೆ. ಹಲವಾರು ಯೋಜನೆಗಳನ್ನೂ ಘೋಷಿಸುತ್ತಾರೆ.ಆದರೆ, ಇದರಲ್ಲಿ ಎಷ್ಟರ ಮಟ್ಟಿಗೆ ಅನುಷ್ಠಾನವಾಗಿದೆ ಎಂಬುದು ಜನಸಾಮಾನ್ಯರಿಗೆ ತಿಳಿಯುವುದೇ ಇಲ್ಲ.ಮುಂಗಡ ಪತ್ರಗಳ ಪುಸ್ತಕದಲ್ಲಿ ಆರಂಭದ ಪುಟಗಳಲ್ಲಿ ಹಿಂದಿನ ವರ್ಷಗಳ ಯೋಜನೆಗಳು ಹಾಗೂ ಪ್ರಗತಿಗಳ ಬಗ್ಗೆ ಸಂಕ್ಷಿಪ್ತವಾಗಿ ಪ್ರಸ್ತಾಪವಾಗಿರುತ್ತದೆ.ಈ ಮುಂಗಡ ಪತ್ರವನ್ನು ಕೇವಲ ಚುನಾಯಿತ ಪ್ರತಿನಿಗಳು ಮಾತ್ರ ಗಮನಿಸುತ್ತಾರೆ.ಹೆಚ್ಚೆಂದರೆ,ವೆಬ್‌ಸೈಟ್‌ಗಳಲ್ಲಿ ಇವುಗಳು ದೊರೆಯುತ್ತವೆ.ಆದರೆ, ಪ್ರತಿಯೊಂದು ಇಲಾಖೆಯು ತಾನು ಕಳೆದ ಒಂದು ವರ್ಷದ ಅವಯಲ್ಲಿ ಮಾಡಿರುವಂತಹ ಸಾಧನೆಗಳ ವಿವರಗಳನ್ನು ಜನಸಾಮಾನ್ಯರಿಗೆ ದೊರೆಯುವಂತಾಗಲು ಶ್ವೇತಪತ್ರವನ್ನು ಬಿಡುಗಡೆ ಮಾಡಬೇಕು.
ಅಲ್ಲದೆ ಇದರಲ್ಲಿ ತನ್ನ ಇಲಾಖೆಗೆ ಮಂಜೂರಾದ ಹಣವೆಷ್ಟು, ಯಾವ ಯಾವ ಯೋಜನೆಗಳಿಗೆ ಅದನ್ನು ನಿಗದಿಪಡಿಸಿದೆ,ಯಾವ ಯಾವ ಯೋಜನೆಗಳಿಗೆ ಎಷ್ಟು ಹಣವನ್ನು ಖರ್ಚು ಮಾಡಿದೆ,ಆ ಯೋಜನೆಗಳಿಂದ ಎಷ್ಟು ಜನ ಲಾನುಭವಿಗಳಿಗೆ ಅನುಕೂಲವಾಗಿದೆ, ಉಳಿದಿರುವ ಹಣವೆಷ್ಟು, ಉಳಿದ ಹಣವನ್ನು ಮತ್ತು ಯೋಜನೆಯ ಗರಿಷ್ಠ ಪ್ರಮಾಣವನ್ನು ಮುಟ್ಟದಿರಲು ಕಾರಣಗಳೇನು? ಯಾವ ಯಾವ ದಿನಗಳಲ್ಲಿ ಯಾವ ಯಾವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂಬ ಮಾಹಿತಿಯನ್ನು ಶ್ವೇತಪತ್ರದಲ್ಲಿ ನಮೂದಿಸಿ ವಾರ್ತಾ ಇಲಾಖೆ ಪತ್ರಿಕೆಗಳ ಜಾಹೀರಾತುಗಳ ಮೂಲಕ ಜನರಿಗೆ ತಿಳಿಸಬೇಕು.ಹಾಲಿ ಕೇವಲ ಗಣರಾಜೋತ್ಸವ,ಸ್ವಾತಂತ್ರ ದಿನಾಚರಣೆ, ಮಹಾತ್ಮ ಗಾಂ ಜಯಂತಿ,ಅಂಬೇಡ್ಕರ್ ಜಯಂತಿ,ಕನ್ನಡ ರಾಜೋತ್ಸವದಂತಹ ಸಂದರ್ಭಗಳಲ್ಲಿ ಹಾಗೂ ಸರಕಾರದ ವಾರ್ಷಿಕ ಸಮಾರಂಭಗಳಲ್ಲಿ ಜಾಹೀರಾತು ನೀಡಿ ಮಾಹಿತಿಯನ್ನು ನೀಡುತ್ತಿವೆ. ಈ ಮಾಹಿತಿಗಳು ಸತ್ಯದಿಂದ ಕೂಡಿರುವುದಿಲ್ಲ.ಈ ಹಿನ್ನೆಲೆಯಲ್ಲಿ ಸಮಗ್ರ ಮಾಹಿತಿಗಳುಳ್ಳ ಶ್ವೇತಪತ್ರದ ಪ್ರತಿಗಳು ಜನಸಾಮಾನ್ಯರು ಓದುವ ಪತ್ರಿಕೆಗಳಲ್ಲಿ ಪ್ರಕಟವಾಗಬೇಕು. ಬಹಳಷ್ಟು ಇಲಾಖೆಗಳಲ್ಲಿ ಯೋಜನೆಗಳು, ಅನುಷ್ಠಾನ, ಕಾರ್ಯಕ್ರಮಗಳು, ಪ್ರಗತಿ ಎಲ್ಲವೂ ಕಾಗದದ ಮೇಲಿರುತ್ತದೆ ಅಷ್ಟೆ. ಸರಕಾರ ಸದನಕ್ಕೆ ಮಾತ್ರ ಸತ್ಯ ಸಂಗತಿಗಳನ್ನು ಹೇಳುವುದಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಭುಗಳಾಗಿರುವ ಮತದಾರರಿಗೂ ಸತ್ಯ ಸಂಗತಿಗಳನ್ನು ತಿಳಿಸಬೇಕು.
-ಕೆ.ಎಸ್.ನಾಗರಾಜ್, ಬೆಂಗಳೂರು







