ಟರ್ಕಿಯಲ್ಲಿ ಬಾಂಬ್ ದಾಳಿ: 36 ಸಾವು
ಅಂಕಾರ, ಮಾ. 14: ಟರ್ಕಿಯ ರಾಜಧಾನಿ ಅಂಕಾರದಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 36ಕ್ಕೇರಿದೆ ಎಂದು ದೇಶದ ಆರೋಗ್ಯ ಸಚಿವ ಮುಹಮ್ಮದ್ ಮುಅಝಿನೊಗ್ಲು ಸೋಮವಾರ ತಿಳಿಸಿದರು.
‘‘ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಇನ್ನೂ ಮೂವರು ನಾಗರಿಕರು ಕೊನೆಯುಸಿರೆಳೆದರು’’ ಎಂದು ಟೆಲಿವಿಶನ್‌ನಲ್ಲಿ ಪ್ರಕಟಗೊಂಡ ಹೇಳಿಕೆಯೊಂದರಲ್ಲಿ ಸಚಿವರು ಹೇಳಿದರು.
ಓರ್ವ ಹಂತಕನ ದೇಹ ಪತ್ತೆಯಾಗಿದೆ ಎಂದು ಹೇಳಿದ ಅವರು, ಇಬ್ಬರು ವ್ಯಕ್ತಿಗಳು ದಾಳಿ ನಡೆಸಿರಬಹುದು ಎಂಬ ಶಂಕೆಯನ್ನು ವ್ಯಕ್ತಪಡಿಸಿದರು.
ಪ್ರಧಾನಿ ಕಚೇರಿ ಮತ್ತು ಸಂಸತ್ತಿಗೆ ಹತ್ತಿರವಾಗಿರುವ ನಿಬಿಡ ಪ್ರಯಾಣ ಕೇಂದ್ರವೊಂದರಲ್ಲಿ ರವಿವಾರ ಆತ್ಮಹತ್ಯಾ ದಾಳಿ ನಡೆದಿದೆ. ಇದು ಐದು ತಿಂಗಳ ಅವಧಿಯಲ್ಲಿ ನಡೆದ ಮೂರನೆ ದಾಳಿಯಾಗಿದೆ.

ಫೇಸ್‌ಬುಕ್, ಟ್ವಿಟರ್‌ಗೆ ನಿಷೇಧ
ಟರ್ಕಿಯಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯ ಚಿತ್ರಗಳು ಸಾಮಾಜಿಕ ಜಾಲ ತಾಣಗಳಾದ ಫೇಸ್‌ಬುಕ್ ಮತ್ತು ಟ್ವಿಟರ್‌ಗಳಲ್ಲಿ ವೇಗವಾಗಿ ಹರಡುತ್ತಿರುವುದನ್ನು ಮನಗಂಡ ಅಧಿಕಾರಿಗಳು ಈ ಎರಡೂ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿಷೇಧಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ನ್ಯಾಯಾಲಯ ಆದೇಶಿತ ನಿಷೇಧ ಜಾರಿಗೆ ಬಂದ ಬೆನ್ನಿಗೇ ಟರ್ಕಿಯ ದೂರ ಸಂಪರ್ಕ ಪ್ರಾಧಿಕಾರವು ಈ ಸಾಮಾಜಿಕ ಮಾಧ್ಯಮ ಗಳಿಗೆ ಸಂಪರ್ಕವನ್ನು ಸ್ಥಗಿತಗೊಳಿಸಿತು.